Bengaluru: ಹೋಲ್‌ಸೇಲ್‌ ಖರೀದಿ ಹೆಸರಲ್ಲಿ ಟೋಪಿ! ಡಿಸೈನ್ ನೋಡ್ಬೇಕು ಅಂದರು, 3 ಕೋಟಿ ಮೌಲ್ಯದ ಚಿನ್ನ ಕದ್ದು ಓಡಿದರು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಚಿನ್ನದ ಮೂಟೆಯೊಂದಿಗೆ ಖದೀಮರು ಎಸ್ಕೇಪ್


Last Updated:

ಹೋಲ್‌‌ಸೇಲ್‌ ಚಿನ್ನ ಖರೀದಿಸ್ತೀವಿ ಅಂತಾ ಬಣ್ಣ ಬಣ್ಣದ ಕಥೆ ಕಟ್ಟಿದವರು ಕೋಟಿ ಕೋಟಿ ಬೆಲೆಯ ಚಿನ್ನ ಕದ್ದು ಹೋಗಿದ್ದಾರೆ. ತಾವಿದ್ದ ಜಾಗಕ್ಕೇ 3 ಕೋಟಿ ರೂಪಾಯಿ ಬೆಲೆಯ ಚಿನ್ನ ತರಿಸಿಕೊಂಡು ಉಂಡೆನಾಮ ಉಜ್ಜಿದ್ದಾರೆ.

ಚಿನ್ನದ ಮೂಟೆಯೊಂದಿಗೆ ಖದೀಮರು ಎಸ್ಕೇಪ್
ಚಿನ್ನದ ಮೂಟೆಯೊಂದಿಗೆ ಖದೀಮರು ಎಸ್ಕೇಪ್

ಬೆಂಗಳೂರು: ಇದ್ಕೇ ಹೇಳೋದು. ಕೊಟ್ಟೋನು ಕೋಡಂಗಿ ಈಸ್ಕೊಂಡೋನು ಈರಭದ್ರ ಅಂತಾ. ಕೆಲವೊಂದು ಘಟನೆಗಳನ್ನ ನೋಡ್ತಿದ್ರೆ ಜನ ಇಷ್ಟು ದಡ್ಡರಾ (Bengaluru) ಅನಿಸಿಬಿಡುತ್ತೆ. ಯಾಕಂದ್ರೆ, ಹೋಲ್‌ಸೇಲ್‌ ಚಿನ್ನ ಖರೀದಿ (Wholesale Market) ಮಾಡ್ತೀವಿ ಅಂತಾ ಡೈಲಾಗ್‌ ಹೊಡೆದವರು ಬರೋಬ್ಬರಿ 3 ಕೋಟಿ ಬೆಲೆಯ ಚಿನ್ನವನ್ನ ಗಂಟು ಮೂಟೆ (Gold Jewellery Theft) ಕಟ್ಕೊಂಡು ಎಸ್ಕೇಪ್‌ ಆಗಿದ್ದಾರೆ. ಡಿಸೈನ್‌ ನೋಡ್ಬೇಕು ಅಂತಾ ಕರೆಸಿಕೊಂಡವ್ರು ಉಂಡೆನಾಮ ಉಜ್ಜಿ ಹೋಗಿದ್ದಾರೆ.

ಹೋಲ್‌ಸೇಲ್‌ ಚಿನ್ನ ಖರೀದಿ ಹೆಸರಲ್ಲಿ ಹಾಕಿದ್ರು ಟೋಪಿ!

ಮೊದಲೇ ಚಿನ್ನದ ಬೆಲೆ ಗಗನಕ್ಕೇರಿ ಕೂತಿದೆ. ಚಿನ್ನ ಖರೀದಿ ಮಾಡೋದಿರಲಿ, ಕಣ್ಣಲ್ಲಿ ನೋಡೋದೂ ಕಷ್ಟ ಎನ್ನುವಂತಾಗಿದೆ. ಹೀಗಾಗಿಯೇ ಎಲ್ಲರ ಕಣ್ಣು ಈಗ ಚಿನ್ನದ ಮೇಲೆ ಬಿದ್ದಿದೆ. ಇಂತಾ ಹೊತ್ತಲ್ಲೇ ಬೆಂಗಳೂರಲ್ಲಿ ಮೆಗಾ ಲೂಟಿಯೊಂದು ನಡೆದು ಹೋಗಿದೆ. ಬೆಂಗಳೂರು ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಕಚೇರಿಯೊಂದನ್ನ ತೆರೆದಿದ್ದ ಖದೀಮರು, ತಾವು ಹೋಲ್​ಸೇಲ್​​ ಚಿನ್ನದ ವ್ಯಾಪಾರಿಗಳು ಅಂತಾ ಬಿಲ್ಡಪ್​​ ಕೊಟ್ಟಿದ್ರು.. ದೊಡ್ಡ ಲೆವೆಲ್‌ಗೆ ಶೋಕಿ ಮಾಡ್ಕೊಂಡು ನಗರತ್ ಪೇಟೆಯ ಚಿನ್ನದ ವ್ಯಾಪಾರಿ ಮಹೇಂದ್ರ ಕುಮಾರ್ ಜೈನ್ ಅನ್ನೋರನ್ನ ಬುಟ್ಟಿಗೆ ಕೆಡವಿಕೊಂಡಿದ್ರು.
ಡಿಸೈನ್ ನೋಡ್ಬೇಕು ಅಂದ್ರು, ಚಿನ್ನ ಕದ್ದು ಎಸ್ಕೇಪ್‌ ಆದ್ರು!

ಚಿನ್ನದ ವ್ಯಾಪಾರಿ ಗಾಳಕ್ಕೆ ಬೀಳ್ತಿದ್ದಂತೆ ತಮ್ಮ ನವರಂಗಿ ಆಟ ಶುರು ಮಾಡಿದ್ದಾರೆ. ಚಿನ್ನದಂಗಡಿ ಮಾಲೀಕ ಮಹೇಂದ್ರಗೆ ಕಾಲ್‌ ಮಾಡಿದ್ದ ಖದೀಮರು ಹೋಲ್‌‌ಸೇಲ್‌ನಲ್ಲಿ 3 ಕೆಜಿ ಚಿನ್ನ ಬೇಕು. ಡಿಫರೆಂಟ್‌ ಡಿಫರೆಂಟ್‌ ಡಿಸೈನ್​ಗಳನ್ನ ಮಲ್ಲೇಶ್ವರಂನ ನಾಲ್ಕನೇ ಕ್ರಾಸ್​ನಲ್ಲಿರೋ ನಮ್ಮ ಕಚೇರಿಗೆ ತಗೊಂಡು ಬನ್ನಿ ಎಂದಿದ್ದ.

ಒಂದೇ ಬಾರಿ 3 ಕೆಜಿ ಚಿನ್ನ ಸೇಲ್ ಆಗುತ್ತೆ ಅನ್ನೋ ಖುಷಿಯಲ್ಲಿದ್ದವ, ಇರೋ ಬರೋ ಚಿನ್ನವನ್ನೆಲ್ಲಾ ತುಂಬ್ಕೊಂಡು ಹೋಗಿದ್ದ. ಕೊನೆಗೆ ಮೂರು ಕೆಜಿ ಚಿನ್ನದಲ್ಲಿ 1 ಕೆಜಿ 850 ಗ್ರಾಂ ಚಿನ್ನದ ವಿವಿಧ ಡಿಸೈನ್​ಗಳನ್ನ ಸೆಲೆಕ್ಟ್‌ ಮಾಡಿದ್ದರು. ಮಾತುಕತೆ ನಡೆಯುತ್ತಿರುವ ಹೊತ್ತಲ್ಲೇ ಚಂದ್ರಶೇಖರ್ ಅನ್ನೋನು ಬಂಗಾರ ಎತ್ಕೊಂಡು ಎಸ್ಕೇಪ್ ಆಗಿದ್ದಾನೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed