Team India: 2 ಸೀಸನ್​,104 ವಿಕೆಟ್ ಆದ್ರೂ ಈ ರಣಜಿ ಚಾಂಪಿಯನ್​ಗೆ ಟೆಸ್ಟ್​ ತಂಡದಲ್ಲಿಲ್ಲ ಚಾನ್ಸ್! ಆಯ್ಕೆಸಮಿತಿ ವಿರುದ್ಧ ಫ್ಯಾನ್ಸ್ ಆಕ್ರೋಶ | ಕ್ರೀಡಾ ಸುದ್ದಿ | ACTPnews

ಆಕಿಬ್ ನಬಿ


Last Updated:

ರಣಜಿ ಕ್ರಿಕೆಟ್​​​ನಲ್ಲಿ ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಅದರಲ್ಲಿ ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಟೆಸ್ಟ್​ ಕ್ರಿಕೆಟ್​​ಗೆ ವೇಗಿಗಳ ವಿಭಾಗದಲ್ಲಿ ಪ್ರಬಲ ಸ್ಪರ್ಧಿಸಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿಯನ್ನ ಆಯ್ಕೆ ಮಾಡದಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.

ಆಕಿಬ್ ನಬಿ
ಆಕಿಬ್ ನಬಿ

ಅಫ್ಘಾನಿಸ್ತಾನ (India  vs Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ಕ್ರಿಕೆಟ್ (Team India) ತಂಡವನ್ನು ಅಜಿತ್ ಅಗರ್ಕರ್ (Ajit Agarkar) ನೇತೃತ್ವದ ಆಯ್ಕೆ ಸಮಿತಿ ಮೇ 19 ರಂದು ಪ್ರಕಟಿಸಿದೆ. ಜೂನ್ 6 ರಿಂದ ನ್ಯೂ ಚಂಡೀಗಢದಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದಲ್ಲಿ ಹೊಸ ಮುಖಗಳನ್ನು ಸೇರಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ರಣಜಿ ಕ್ರಿಕೆಟ್​​​ನಲ್ಲಿ (Ranji Trophy) ಉತ್ತಮ ಪ್ರದರ್ಶನ ತೋರಿರುವ ಯುವ ಆಟಗಾರರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಅದರಲ್ಲಿ ಕೆಲವು ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಟೆಸ್ಟ್​ ಕ್ರಿಕೆಟ್​​ಗೆ ವೇಗಿಗಳ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿಯನ್ನ ಆಯ್ಕೆ ಮಾಡದಿರುವುದು ಕೇವಲ ಅಭಿಮಾನಿಗಳಿಗಷ್ಟೇ ಅಲ್ಲ, ಮಾಜಿ ಕ್ರಿಕೆಟಿಗರಿಗೂ ಅಚ್ಚರಿಯನ್ನುಂಟು ಮಾಡಿದೆ.

ನಬಿ ಕಳೆದ ಎರಡು ದೇಶೀಯ ಋತುಗಳಲ್ಲಿ ಅವರು ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ವರ್ಷದ ರಣಜಿ ಟ್ರೋಫಿ ಋತುವಿನಲ್ಲಿ ಅವರು ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ ಆಗಿದ್ದರು. ಅಲ್ಲದೆ ಬಲಿಷ್ಠ ಕರ್ನಾಟಕ ತಂಡವನ್ನ ಫೈನಲ್​​ನಲ್ಲಿ ಮಣಿಸಿ ಜಮ್ಮು ಮತ್ತು ಕಾಶ್ಮೀರದ ಮೊದಲ ರಣಜಿ ಟ್ರೋಫಿ ಪ್ರಶಸ್ತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ ಅಕಿಬ್ ನಬಿ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಅಲ್ಲದೆ ಹರ್ಷಿತ್ ರಾಣಾ ತಂಡದಲ್ಲಿಲ್ಲದ ಕಾರಣ ನಬಿ ಪ್ರಮುಖ ವೇಗಿಯಾಗಿ ಆಡಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಆಯ್ಕೆ ಸಮಿತಿ ಅಕಿಬ್​ ನಬಿಗೆ ನಿರಾಶೆ ಮೂಡಿಸಿದೆ.

ರಣಜಿ ಟ್ರೋಫಿಯಲ್ಲಿ ಆಕಿಬ್ ನಬಿ ದಾಖಲೆ ಹೇಗಿದೆ?

ನಬಿ ಹೊಸ ಚೆಂಡಿನೊಂದಿಗೆ ಉತ್ತಮ ಸ್ವಿಂಗ್ ಮಾಡಬಲ್ಲರು ಮತ್ತು ಚೆಂಡು ಹಳೆಯದಾಗಿದ್ದರೂ ಸಹ ಪರಿಣಾಮಕಾರಿ ಎಂದು ಸಾಬೀತುಪಡಿಸಿದ್ದಾರೆ. 2024-25ರ ರಣಜಿ ಟ್ರೋಫಿ ಋತುವಿನಲ್ಲಿ ಬೌಲರ್ ಎಂಟು ಪಂದ್ಯಗಳಲ್ಲಿ 44 ವಿಕೆಟ್‌ಗಳನ್ನು ಕಬಳಿಸಿದ್ದರು, ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಆರು ಬಾರಿ ಇನ್ನಿಂಗ್ಸ್‌ನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಸಾಧನೆ ಮಾಡಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನ 53ಕ್ಕೆ6 ವಿಕೆಟ್.

2025-26ರ ರಣಜಿ ಟ್ರೋಫಿಯಲ್ಲಿ ಆಕಿಬ್ ಇನ್ನೂ ಉತ್ತಮ ಪ್ರದರ್ಶನ ನೀಡಿದರು. ಅವರು 10 ಪಂದ್ಯಗಳಲ್ಲಿ 60 ವಿಕೆಟ್‌ಗಳನ್ನು ಕಬಳಿಸಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಈ ಅವಧಿಯಲ್ಲಿ ಅವರು ಒಂದು ಇನ್ನಿಂಗ್ಸ್‌ನಲ್ಲಿ ಏಳು ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದರು. 24ಕ್ಕೆ7 ವಿಕೆಟ್‌ಗಳು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಆಕಿಬ್ 12.56ರ ಸರಾಸರಿಯಲ್ಲಿ ವಿಕೆಟ್ ಪಡೆಯುವ ಮೂಲಕ ತಾವೂ ಟೆಸ್ಟ್ ಕ್ರಿಕೆಟ್​ಗೆ ಶ್ರೇಷ್ಠ ಬೌಲರ್ ಎಂದು ಸಾಬೀತು ಮಾಡಿದ್ದರು.

ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಯಾರಿಗೆ ಅವಕಾಶ?

ಈ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಸಮಿತಿ ವೇಗಿಗಳ ವಿಭಾಗವನ್ನ ಮೊಹಮ್ಮದ್ ಸಿರಾಜ್​ ಮುನ್ನಡೆಸಲಿದೆ. ಇವರಿಗೆ ಪ್ರಸಿದ್ಧ್ ಕೃಷ್ಣ ಹಾಗೂ ಗುರ್ನೂರ್ ಬ್ರಾರ್ ಸಾಥ್ ನೀಡಲಿದ್ದಾರೆ. ಬ್ರಾರ್​​ಗೆ ಇದು ಮೊದಲ ರಾಷ್ಟ್ರೀಯ ಕರೆಯಾಗಿದೆ. ಆದರೆ ಈ ತಂಡದಲ್ಲಿ ಐವರು ಸ್ಪಿನ್ನರ್​ಗಳನ್ನ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ ಜೊತೆಗೆ ಮಾನವ್ ಸುತಾರ್ ಹಾಗೂ ಹರ್ಷ್ ದುಬೆಗೆ ಅವಕಾಶ ನೀಡಲಾಗಿದೆ. ಗುರ್ನೂರ್ ಬ್ರಾರ್​ ಜಾಗದಲ್ಲಿ ಆಕಿಬ್ ನಬಿಗೆ ಅವಕಾಶ ನೀಡಬಹುದಿತ್ತು ಎಂದು ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ಇರ್ಫಾನ್ ಪಠಾಣ್ ಹಾಗೂ ದೊಡ್ಡ ಗಣೇಶ್ ಅಂತಹ ಮಾಜಿ ಕ್ರಿಕೆಟಿಗರು ರಣಜಿಯಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿರುವವರಿಗೆ ಅನ್ಯಾಯ ಮಾಡಬಾರದು. ಡೊಮೆಸ್ಟಿಕ್ ಸಾಧಕರಿಗೆ ಗೌರವ ನೀಡಿ ಎಂದು ಆಯ್ಕೆ ಸಮಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Team India: 2 ಸೀಸನ್​,104 ವಿಕೆಟ್ ಆದ್ರೂ ಈ ರಣಜಿ ಚಾಂಪಿಯನ್​ಗೆ ಟೆಸ್ಟ್​ ತಂಡದಲ್ಲಿಲ್ಲ ಚಾನ್ಸ್! ಆಯ್ಕೆಸಮಿತಿ ವಿರುದ್ಧ ಫ್ಯಾನ್ಸ್ ಆಕ್ರೋಶ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed