BDA Site: ಬೆಂಗಳೂರಿನ ಹೃದಯ ಭಾಗದಲ್ಲಿ ಸೈಟ್‌ ಹರಾಜು; ಇನ್ನೂ 9 ದಿನದ ಅವಕಾಶ, ನಿಮ್ಮ ಕನಸಿನ ಜಾಗದ ಬೆಲೆ ಗೊತ್ತಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬಿಡಿಎ ಹರಾಜು


Last Updated:

BDA ಬೆಂಗಳೂರು ಪ್ರೀಮಿಯಂ ವಸತಿ, ವಾಣಿಜ್ಯ ಸೈಟ್‌ಗಳ 75 ಇ ಹರಾಜು ಘೋಷಣೆ, ನೋಂದಣಿ ಮೇ 11 ರಿಂದ 22, ಲೈವ್ ಇ ಬಿಡ್ಡಿಂಗ್ ಮೇ 25 ರಿಂದ 27, EMD 4 ಲಕ್ಷ ಪಾವತಿಸಬೇಕು, ಸೈಟ್‌ ಖರೀದಿಸುವಾಗ 25% ಪಾವತಿ ಕಡ್ಡಾಯ

ಬಿಡಿಎ ಹರಾಜು
ಬಿಡಿಎ ಹರಾಜು

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಸೈಟ್ (Site) ಖರೀದಿಸುವ ಕನಸು ಕಾಣುತ್ತಿದ್ದೀರಾ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಂಪೂರ್ಣ ಪಾರದರ್ಶಕ 100% ಆನ್‌ಲೈನ್ ಇ-ಹರಾಜು (E-Bidding) ಮೂಲಕ ಒಟ್ಟು 75 ಪ್ರೀಮಿಯಂ ವಸತಿ ಮತ್ತು ವಾಣಿಜ್ಯ ಸೈಟ್‌ಗಳ ಮಾರಾಟ (Sale) ಪ್ರಕಟಿಸಿದೆ. ನೋಂದಣಿ ಮೇ 11ರಿಂದ ಆರಂಭವಾಗಿದ್ದು ಮೇ 22, 2026 ಸಂಜೆ 5:00 PM ಕೊನೆಯ ದಿನ! ತಡ ಮಾಡಿದರೆ ಅವಕಾಶ (Opportunity) ಕೈತಪ್ಪುತ್ತದೆ!

ಲೈವ್-ಇ-ಬಿಡ್ಡಿಂಗ್‌ ಅಲ್ಲಿ ಎಷ್ಟು ಹಂತಗಳಿವೆ?

ಲೈವ್ ಇ-ಬಿಡ್ಡಿಂಗ್ ಎರಡು ಹಂತಗಳಲ್ಲಿ ನಡೆಯಲಿದೆ . ಸ್ಲ.ನಂ. 1 ರಿಂದ 36 ಸೈಟ್‌ಗಳಿಗೆ ಮೇ 25, 2026 ಬೆಳಗ್ಗೆ 11:00 AMಕ್ಕೆ ಆರಂಭ, ಬಿಡ್ ಮುಕ್ತಾಯ ಮೇ 26 ಸಂಜೆ 5:00 PM (ಡೆಲ್ಟಾ ಸಮಯ 5 ನಿಮಿಷ). ಸ್ಲ.ನಂ. 37 ರಿಂದ 75 ಸೈಟ್‌ಗಳಿಗೆ ಮೇ 26, 2026 ಬೆಳಗ್ಗೆ 11:00 AMಕ್ಕೆ ಆರಂಭ, ಬಿಡ್ ಮುಕ್ತಾಯ ಮೇ 27 ಸಂಜೆ 5:00 PM ಆಗುತ್ತದೆ.

ಯಾವ ಬಡಾವಣೆಯಲ್ಲಿ ಎಷ್ಟು ಸೈಟ್?‌ ಬೆಲೆ ಎಷ್ಟು?

ಯಾವ ಬಡಾವಣೆಗಳಲ್ಲಿ ಸೈಟ್‌ಗಳಿವೆ ಮತ್ತು ಬೆಲೆ ಎಷ್ಟು ಎಂಬ ಸಂಪೂರ್ಣ ವಿವರ ಇಲ್ಲಿದೆ. ಅಂಜನಾಪುರ ಟೌನ್‌ಶಿಪ್ 1ನೇ ಬ್ಲಾಕ್ನಲ್ಲಿ 54 ರಿಂದ 216 ಚ.ಮೀ ಸೈಟ್‌ಗಳು (ಆರಂಭಿಕ ಬೆಲೆ ₹64,000/ಚ.ಮೀ); ಅಂಜನಾಪುರ 6ನೇ ಬ್ಲಾಕ್ನಲ್ಲಿ ₹71,000/ಚ.ಮೀ; ಅರ್ಕಾವತಿ ಬಡಾವಣೆ ಸ್ಯಾಂಪಿಗೆಹಳ್ಳಿಯಲ್ಲಿ ₹87,500/ಚ.ಮೀ; ಚೆಲ್ಲಕೆರೆ ಪ್ರದೇಶದಲ್ಲಿ ₹87,250/ಚ.ಮೀ; ಬನಶಂಕರಿ 6ನೇ ಹಂತ ಹೆಮ್ಮಿಗೆಪುರ (5ನೇ ಬ್ಲಾಕ್ ₹72,000, 10ನೇ ಬ್ಲಾಕ್ ₹62,300); ಗಾಣಕಲ್ಲು 11ನೇ ಬ್ಲಾಕ್ ₹84,000/ಚ.ಮೀ; ತಳಘಟ್ಟಪುರ ಬನಶಂಕರಿ ಎಕ್ಸ್‌ಟೆನ್ಶನ್‌ನಲ್ಲಿ ₹69,300/ಚ.ಮೀ; ಜೆ.ಪಿ. ನಗರ 9ನೇ ಹಂತ ಅಲಹಳ್ಳಿಯಲ್ಲಿ 222.83 ಚ.ಮೀ ಮೂರು ಸೈಟ್‌ಗಳು ₹1,00,000/ಚ.ಮೀ; ಕೆಂಬತ್ತಳ್ಳಿಯಲ್ಲಿ ₹1,00,000/ಚ.ಮೀ; ಕುಮಾರಸ್ವಾಮಿ ಬಡಾವಣೆ ಗೋವಿನಾಯಕನಹಳ್ಳಿಯಲ್ಲಿ ₹1,27,500/ಚ.ಮೀ; ಆರ್‌ಎಂವಿ ಗೆದ್ದಲಹಳ್ಳಿಯಲ್ಲಿ ₹297 ಮತ್ತು 60 ಚ.ಮೀ ಸೈಟ್‌ಗಳು ₹1,90,000/ಚ.ಮೀ (ಅತ್ಯಂತ ಹೆಚ್ಚಿನ ಬೆಲೆ); ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ ಉಲ್ಲಾಲು, ಸೊನ್ನೇನಹಳ್ಳಿ, ಕೆಂಗೇರಿ, ರಾಮಸಂದ್ರ, ಮಂಗನಹಳ್ಳಿ ಎಲ್ಲ ಕಡೆ ₹84,000/ಚ.ಮೀ; ಗಿದ್ದದಕೊನೇನಹಳ್ಳಿ (ಎಸ್ಎಂವಿ 7ನೇ ಬ್ಲಾಕ್) ₹87,500/ಚ.ಮೀ ಇದೆ.

ಇಲ್ಲಿದ್ದಾವೆ ಪ್ರಮುಖ ನಿಯಮ

ಪ್ರಮುಖ ನಿಯಮಗಳು ತಿಳಿದಿರಲಿ , ಪ್ರತಿ ಸೈಟ್‌ಗೆ EMD ₹4 ಲಕ್ಷ ಪಾವತಿ ಕಡ್ಡಾಯ. ಹರಾಜು ಗೆದ್ದ 72 ಗಂಟೆಯೊಳಗೆ ಒಟ್ಟು ಮೊತ್ತದ 25% ಪಾವತಿ ಮಾಡದಿದ್ದರೆ EMD ಮುಟ್ಟುಗೋಲು. ನಂತರ ಅಲಾಟ್‌ಮೆಂಟ್ ಪತ್ರ ಸ್ವೀಕರಿಸಿದ 45 ದಿನಗಳಲ್ಲಿ ಬಾಕಿ 75% ಪಾವತಿ ಕಡ್ಡಾಯ. ₹50 ಲಕ್ಷ ಮೀರಿದ ಮೊತ್ತಕ್ಕೆ IT Act Section 194 IA ಅಡಿ 1% TDS ಕಡ್ಡಾಯ.

ಒಮ್ಮೆ ಹರಾಜಾದರೆ ಮುಗೀತು!

ಇದನ್ನೂ ಓದಿ: Shocking News: ಇನ್ಮೇಲೆ ಬೆಂಗಳೂರು ಓಡಾಟ ತುಟ್ಟಿ; 39% ಹೆಚ್ಚಾಗಲಿದೆಯೇ ಆಟೋ ಪ್ರಯಾಣದ ದರ? ರಾಜಧಾನಿಗೆ ʼಗ್ಯಾಸ್‌ʼ ಟ್ರಬಲ್!

ಬಿಡ್ ಮೊತ್ತ ಆರಂಭಿಕ ಬೆಲೆಗಿಂತ ಕನಿಷ್ಠ 10% ಹೆಚ್ಚಿರಬೇಕು. ಪ್ರತಿ ಸೈಟ್‌ಗೆ ಕನಿಷ್ಠ 2 ಬಿಡ್ಡರ್‌ಗಳು ಕಡ್ಡಾಯ ಒಬ್ಬರೇ ಬಿಡ್ ಮಾಡಿದರೆ ತಿರಸ್ಕೃತ. BDA ಬ್ಯಾಂಕ್ ಖಾತೆ: Canara Bank, BDA Complex Branch, Account No. 2828101053014, IFSC: CNRB0002828 — RTGS/NEFT ಮೂಲಕ ಪಾವತಿ ಮಾಡಬೇಕು. ಇ-ಹರಾಜಿಗೆ ನೋಂದಣಿ ಮತ್ತು ಸೈಟ್ ವಿವರಗಳಿಗೆ https://bdakarnataka.in ಗೆ ಭೇಟಿ ನೀಡಿ. ವಾಣಿಜ್ಯ ವಿಚಾರಣೆಗೆ  080-23368435 / 23368036, ತಾಂತ್ರಿಕ ಸಮಸ್ಯೆಗೆ 080-46010000 / 68948777, 24×7 ಸಹಾಯವಾಣಿ 9483166622 ಮತ್ತು BDA ಆಯುಕ್ತರನ್ನು Whatsapp ಮೂಲಕ 9663369000ಗೆ ಸಂಪರ್ಕಿಸಬಹುದು. ಬಿಡ್ ಮಾಡುವ ಮೊದಲು ಸೈಟ್ ಸ್ಥಳಕ್ಕೆ ನೇರ ಭೇಟಿ ನೀಡಿ ರಸ್ತೆ ಅಗಲ ಮತ್ತು ಸ್ಥಳ ಪರಿಶೀಲಿಸಿ, ಹರಾಜಾದ ಸೈಟ್ ರದ್ದು ಅಥವಾ ಬದಲಿ ಸಾಧ್ಯವಿಲ್ಲ!



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports