Vijay: ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆಗಳನ್ನು ಮುಂದಿಟ್ಟ ನಟ ಕಮಲ್ ಹಾಸನ್! ಏನದು ಗೊತ್ತಾ? | | ACTPnews

ವಿಜಯ್ & ಕಮಲ್ ಹಾಸನ್


Last Updated:

Vijay: ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ ಬೆಳವಣಿಗೆ ಎರಡೂ ಜತೆಗೂಡಿ ಸಾಗುತ್ತಿವೆ. ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ದಳಪತಿ ವಿಜಯ್ ( Vijay)ಅವರನ್ನು ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರು ಮೇ 16ರಂದು ಭೇಟಿಯಾಗಿದರು.

ವಿಜಯ್ & ಕಮಲ್ ಹಾಸನ್
ವಿಜಯ್ & ಕಮಲ್ ಹಾಸನ್

ತಮಿಳುನಾಡಿನ (Tamil Nadu) ಹೊಸ ರಾಜಕೀಯ ಪರಿಸ್ಥಿತಿ ಮತ್ತು ಚಿತ್ರರಂಗದ ಬೆಳವಣಿಗೆ ಎರಡೂ ಜತೆಗೂಡಿ ಸಾಗುತ್ತಿವೆ. ಇತ್ತೀಚೆಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಟ ದಳಪತಿ ವಿಜಯ್ ( Vijay)ಅವರನ್ನು ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ (Kamal Haasan) ಅವರು ಭೇಟಿಯಾಗಿದ್ದಾರೆ . ಈ ಭೇಟಿ ತಮಿಳು ಚಿತ್ರೋದ್ಯಮದ ಭವಿಷ್ಯದ ಬಗ್ಗೆ ನಿರ್ಣಾಯಕ ಚರ್ಚೆಗಳ ವೇದಿಕೆಯಾಯಿತು. ಸರ್ಕಾರದ ಬೆಂಬಲ ಅಗತ್ಯವಿರುವ ಹಲವು ವಿಷಯಗಳನ್ನು ಗಮನಕ್ಕೆ ತಂದ ಕಮಲ್ ಹಾಸನ್, ಸಿಎಂ ವಿಜಯ್ ಅವರಿಗೆ ಆರು ಪ್ರಮುಖ ಬೇಡಿಕೆಗಳು ಒಳಗೊಂಡ ಪ್ರಸ್ತಾಪವನ್ನು ಸಲ್ಲಿಸಿದರು.

ಭೇಟಿಯ ಹಿಂದೆ ಇರುವ ಉದ್ದೇಶ

ಕಮಲ್ ಹಾಸನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಭೇಟಿಯ ಬಗ್ಗೆ ಹಂಚಿಕೊಂಡಿದ್ದು, ತಮಿಳು ಚಿತ್ರರಂಗದ ಸವಾಲುಗಳನ್ನು ಎದುರಿಸಲು ಸರ್ಕಾರದ ಹಸ್ತಕ್ಷೇಪ ಅಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಸಿಎಂ ವಿಜಯ್ ಅವರನ್ನು ಅಭಿನಂದಿಸಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಅವರ ಕನಸು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ತಮಿಳು ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ತಮಿಳುನಾಡು ಸರ್ಕಾರದ OTT ವೇದಿಕೆಯ ಕೋರಿಕೆ

ಕಮಲ್ ಹಾಸನ್ ಅವರ ಮೊದಲ ಬೇಡಿಕೆಯಾಗಿ ರಾಜ್ಯ ಸರ್ಕಾರದ ಸ್ವಂತ OTT ವೇದಿಕೆಯ ಸ್ಥಾಪನೆಯಿದೆ. ತಮಿಳು ಸಿನಿಮಾ, ಸ್ವತಂತ್ರ ಚಲನಚಿತ್ರಗಳು, ಡಾಕ್ಯುಮೆಂಟರಿಗಳು ಎಲ್ಲವೂ ಕಡಿಮೆ ದರದಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಬೇಕು ಎಂಬುದು ಈ ಅಭಿಯಾನದ ಉದ್ದೇಶ. ಇದು ಚಿಕ್ಕ ನಿರ್ಮಾಪಕರು ಮತ್ತು ಹೊಸ ನಿರ್ದೇಶಕರಿಗೆ ದೊಡ್ಡ ವೇದಿಕೆಯಾಗಬಹುದು.

ಸ್ಥಳೀಯ ಸಂಸ್ಥೆಗಳ ಮನರಂಜನಾ ತೆರಿಗೆ ರದ್ದತಿ

ಚಿತ್ರ ನಿರ್ಮಾಣ ಮತ್ತು ವಿತರಣೆ ವೆಚ್ಚಗಳು ಹೆಚ್ಚುತ್ತಿರುವ ಈ ಸಮಯದಲ್ಲಿ 4% ಸ್ಥಳೀಯ ಸಂಸ್ಥೆಗಳ ಮನರಂಜನಾ ತೆರಿಗೆ ಚಿತ್ರರಂಗದ ಮೇಲೆ ಹೆಚ್ಚುವರಿ ಒತ್ತಡ ತಂದಿದೆ. ಈ ತೆರಿಗೆ ರದ್ದು ಮಾಡಿದರೆ ಚಿತ್ರಮಂದಿರಗಳು, ನಿರ್ಮಾಪಕರು ಮತ್ತು ವಿತರಕರಿಗೆ ಸಮಾನವಾಗಿ ಲಾಭವಾಗಬಹುದು. ಕಮಲ್ ಹಾಸನ್ ಅವರು ಈ ಬೇಡಿಕೆಯನ್ನು ತುರ್ತಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

ಬಲವಾದ ಪೈರಸಿ ವಿರೋಧಿ ತಂಡದ ಅಗತ್ಯ

ಪೈರಸಿ ಸಮಸ್ಯೆ ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿದೆ. ಕಲಾವಿದರ ಪರಿಶ್ರಮವನ್ನು ಕಳ್ಳಪ್ರತಿಗಳು ಹಾಳುಮಾಡುತ್ತಿರುವುದು ಹೊಸದೇನಲ್ಲ. ತಮಿಳುನಾಡು ಪೊಲೀಸ್‌ಗಳ ಸೈಬರ್ ಅಪರಾಧ ವಿಭಾಗದಡಿ ವಿಶೇಷ ಪೈರಸಿ ವಿರೋಧಿ ತಂಡ ರಚಿಸಿದರೆ, ಪೈರೇಟೆಡ್ ವಿಷಯವನ್ನು ನೈಜ ಸಮಯದಲ್ಲಿ ತೆಗೆದುಹಾಕುವ ಸಾಧ್ಯತೆ ಹೆಚ್ಚುತ್ತದೆ.

8 ವಾರಗಳ ಕಡ್ಡಾಯ OTT ಬಿಡುಗಡೆ

ತಮಿಳುನಾಡಿನಲ್ಲಿ ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳು ಬಿಡುಗಡೆಯಾದ ತಕ್ಷಣ OTTಗೆ ಹೋಗದಂತೆ ನಿಯಮ ರೂಪಿಸಬೇಕು ಎಂದು ಕಮಲ್ ಹಾಸನ್ ಸಲಹೆ ನೀಡಿದ್ದಾರೆ. ಕನಿಷ್ಠ 8 ವಾರಗಳ ಗ್ಯಾಪ್ ಇರಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.

ದಿನಕ್ಕೆ 5 ಪ್ರದರ್ಶನಗಳಿಗೆ ಅನುಮತಿ

ತಮಿಳುನಾಡಿನ ಎಲ್ಲಾ ಚಿತ್ರಮಂದಿರಗಳಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಕಾನೂನುಬದ್ಧ ಅನುಮತಿ ನೀಡಬೇಕು. ಇದರಿಂದ ಚಿತ್ರಮಂದಿರಗಳ ಆದಾಯ ಹೆಚ್ಚಲಿದ್ದು, ಸಂಕಷ್ಟದಲ್ಲಿರುವ ಪ್ರದರ್ಶಕರ ವಲಯ ಚೇತರಿಸಿಕೊಳ್ಳಲು ಸಹಕಾರಿಯಾಗಲಿದೆ.

ಚಲನಚಿತ್ರ ನಿರ್ಮಾಣ ಪ್ರೋತ್ಸಾಹ ಧನ

ತಮಿಳುನಾಡಿನಲ್ಲಿ 50% ಕ್ಕಿಂತ ಹೆಚ್ಚು ಚಿತ್ರೀಕರಣ ನಡೆಸುವ ಭಾರತೀಯ ಚಲನಚಿತ್ರಗಳಿಗೆ ಬಜೆಟ್‌ನ 10% ನಿರ್ಮಾಣ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸರ್ಕಾರ ಪರಿಗಣಿಸಬೇಕು ಎಂಬುದು ಮತ್ತೊಂದು ಮಹತ್ವದ ಸೂಚನೆ. ಇದು ಚಿತ್ರೀಕರಣಕ್ಕಾಗಿ ತಮಿಳುನಾಡನ್ನು ಮೊದಲ ಆಯ್ಕೆಯಾಗಿ ಮಾಡುತ್ತದೆ ಮತ್ತು ರಾಜ್ಯದ ಪ್ರವಾಸೋದ್ಯಮಕ್ಕೂ ನೆರವಾಗುತ್ತದೆ.

ಒಟ್ಟಿನಲ್ಲಿ ತಮಿಳು ಚಿತ್ರರಂಗದ ಇಬ್ಬರು ದಿಗ್ಗಜರ ಭೇಟಿ ಸಿನಿ ರಂಗದಲ್ಲಿ ಮಹತ್ತರ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಹಿರಿಯ ನಟ ಕಮಲ್ ಹಾಸನ್ ಅವರ ಈ ಬೇಡಿಕೆಗಳಿಗೆ ಸಿಎಂ ವಿಜಯ್ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports