BBL: ಭಾರತಕ್ಕೆ ಬರುತ್ತಿದೆ ಬಿಗ್ ಬ್ಯಾಷ್ ಲೀಗ್! ಬಿಬಿಎಲ್‌ನ ಉದ್ಘಾಟನಾ ಪಂದ್ಯ ನಡೆಯೋದು ಎಲ್ಲಿ ಗೊತ್ತಾ? | ಕ್ರೀಡಾ ಸುದ್ದಿ | ACTPnews

ಬಿಗ್ ಬ್ಯಾಷ್ ಲೀಗ್


Last Updated:

ಕ್ರಿಕೆಟ್ ಇತಿಹಾಸದಲ್ಲಿ ಭಾರತ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಬಿಬಿಎಲ್ ಸೀಸನ್ ಉದ್ಘಾಟನಾ ಪಂದ್ಯವನ್ನು ಆಯೋಜಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಬಿಸಿಸಿಐನಿಂದ ಅನುಮತಿ ಪಡೆದಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ.

ಬಿಗ್ ಬ್ಯಾಷ್ ಲೀಗ್
ಬಿಗ್ ಬ್ಯಾಷ್ ಲೀಗ್

ಫ್ರಾಂಚೈಸಿ (Franchise) ಕ್ರಿಕೆಟ್ (Cricket) ಇತಿಹಾಸದಲ್ಲಿ ಹೊಸ ಅಧ್ಯಾಯ (Chapter) ಬರೆಯಲಾಗುತ್ತಿದೆ. ಬಿಗ್ ಬ್ಯಾಷ್ ಲೀಗ್ (BBL) ಭಾರತಕ್ಕೆ ಬರುತ್ತಿದೆ. ಡಿಸೆಂಬರ್ 2026 ರ ಎರಡನೇ ವಾರದಲ್ಲಿ ಹೊಸ ಬಿಬಿಎಲ್ ಆವೃತ್ತಿ ಪ್ರಾರಂಭವಾಗಲಿದೆ. ಭಾರತ ಹೊಸ ಬಿಬಿಎಲ್ ಆವೃತ್ತಿಯ ಉದ್ಘಾಟನಾ ಪಂದ್ಯ (Opening match) ವನ್ನು ಆಯೋಜಿಸಲು ಸಜ್ಜಾಗಿದೆ. ಹೌದು, ಬಿಬಿಎಲ್ ಆವೃತ್ತಿಯ ಉದ್ಘಾಟನಾ ಪಂದ್ಯ ಚೆನ್ನೈ (Chennai) ನ ಎಂಎ ಚಿದಂಬರಂ ಕ್ರೀಡಾಂಗಣ (MA Chidambaram Stadium) ದಲ್ಲಿ ನಡೆಯಲಿದೆ. ತಿಂಗಳುಗಳ ಮಾತುಕತೆಯ ನಂತರ ಕ್ರಿಕೆಟ್ ಆಸ್ಟ್ರೇಲಿಯಾ (CA) ವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯಿಂದ ಅನುಮತಿಯನ್ನು ಪಡೆದುಕೊಂಡಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕಳೆದ ಮೂರು ತಿಂಗಳುಗಳಿಂದ, ಕ್ರಿಕೆಟ್ ಆಸ್ಟ್ರೇಲಿಯಾ ಭಾರತದಲ್ಲಿ ಬಿಬಿಎಲ್ ಉದ್ಘಾಟನಾ ಪಂದ್ಯವನ್ನು ಆಯೋಜಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿತ್ತು. ಬಿಸಿಸಿಐ ಆರಂಭದಲ್ಲಿ ಇದಕ್ಕೆ ಪ್ರತಿಕ್ರಿಯಿಸಿರಲಿಲ್ಲ. ಆದರೆ ಹೆಚ್ಚಿನ ಚರ್ಚೆಗಳ ನಂತರ ಬಿಸಿಸಿಐಯಿಂದ ಅನುಮತಿ ಪಡೆದುಕೊಳ್ಳುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಯಶಸ್ವಿಯಾಗಿದೆ.

ಚೆನ್ನೈನಲ್ಲಿ ಸಿಎ ಸದಸ್ಯರ ನಿಯೋಗ

ಸೋಮವಾರ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಸಮಯದಲ್ಲಿ, ಕ್ರಿಕೆಟ್ ಆಸ್ಟ್ರೇಲಿಯಾದ ಐದು ಸದಸ್ಯರ ನಿಯೋಗವು ಸ್ಥಳಕ್ಕೆ ಭೇಟಿ ನೀಡಿ ಪಂದ್ಯವನ್ನು ಕ್ರೀಡಾಂಗಣದಿಂದ ವೀಕ್ಷಿಸಿತು. ಅದೇ ರೀತಿ, ಬಿಸಿಸಿಐ, ಆಸ್ಟ್ರೇಲಿಯಾ ಸರ್ಕಾರ ಮತ್ತು ವ್ಯಾಪಾರ ಸಮುದಾಯದ ಪ್ರತಿನಿಧಿಗಳು ಕೂಡ ಮಾತುಕತೆಯಲ್ಲಿ ಭಾಗಿಯಾಗಿದ್ದು, ಇದು ಸಕಾರಾತ್ಮಕ ಬೆಳವಣಿಗೆಗಳಿಗೆ ಕಾರಣವಾಯಿತು.

ಸಿಎಸ್ ಪ್ರತಿನಿಧಿ ಹೇಳಿದ್ದೇನು?

ಕ್ರಿಕೆಟ್ ಆಸ್ಟ್ರೇಲಿಯಾ ಪ್ರತಿನಿಧಿಯೊಬ್ಬರು ಈ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿಲು ನಿರಾಕರಿಸಿದ್ದಾರೆ. ಆದರೆ ಬಿಬಿಎಲ್ ಕುರಿತು ಮಾತನಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. “ನಾವು ಏನನ್ನೂ ದೃಢೀಕರಿಸಲು ಸಾಧ್ಯವಾಗುತ್ತಿಲ್ಲ. ಭಾರತ-ಆಸ್ಟ್ರೇಲಿಯಾ ಸಂಬಂಧವನ್ನು ಗಾಢವಾಗಿಸಲು ನಮ್ಮ ಸರ್ಕಾರದ ಸಹಭಾಗಿತ್ವದಲ್ಲಿ ಚೆನ್ನೈನ ಸಾಮರ್ಥ್ಯವನ್ನು ನಾವು ಅನ್ವೇಷಿಸುತ್ತಿದ್ದೇವೆ. ಇನ್ನೂ ಯಾವುದನ್ನೂ ದೃಢಪಡಿಸಲು ಸಾಧ್ಯವಿಲ್ಲ. ನಾವು ಬಿಸಿಸಿಐನಲ್ಲಿರುವ ನಮ್ಮ ಸ್ನೇಹಿತರೊಂದಿಗೆ ಕೆಲಸ ಮಾಡುತ್ತಿದ್ದೇವೆ” ಎಂದು ಪ್ರತಿನಿಧಿ ಹೇಳಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯಾ ನಿಯೋಗವನ್ನು ಭೇಟಿ ಮಾಡಲುಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಕೂಡ ಚೆನ್ನೈನಲ್ಲಿದ್ದರು. ಜೊತೆಗೆ ಆಸ್ಟ್ರೇಲಿಯಾದ ವ್ಯಾಪಾರ ಸಮುದಾಯದ ಪ್ರತಿನಿಧಿಗಳು ಕೂಡ ಇದ್ದರು. ಸಿಎ ಬಿಬಿಎಲ್ ಉದ್ಘಾಟನಾ ಪಂದ್ಯವನ್ನು ವಿದೇಶದಲ್ಲಿ ನಡೆಸಲು ನಿರ್ಧರಿಸಿದಾಗಿನಿಂದ, ಚೆನ್ನೈ ಅವರ ಮೊದಲ ಆಯ್ಕೆಯ ಸ್ಥಳವಾಗಿತ್ತು. ಅಲ್ಲಿಂದ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ಮಾತುಕತೆಗಳು ನಡೆಯುತ್ತಿದ್ದವು.

ಒಂದಕ್ಕಿಂತ ಹೆಚ್ಚು ಪಂದ್ಯಗಳು

ಆರಂಭಿಕ ಚರ್ಚೆಗಳು ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯಿದೆ ಎಂದು ಹೇಳುತ್ತಿವೆ. ಆದರೆ ವೇಳಾಪಟ್ಟಿಯ ನಿರ್ಬಂಧಗಳು ಅದು ಕೇವಲ ಆರಂಭಿಕ ಪಂದ್ಯವಾಗಿರಬಹುದು. ಇದರಲ್ಲಿ ಹಾಲಿ ಚಾಂಪಿಯನ್ ಪರ್ತ್ ಸ್ಕಾರ್ಚರ್ಸ್ ಭಾಗವಹಿಸಬಹುದು. ಕಳೆದ ವರ್ಷ ಟೀಮ್ ಇಂಡಿಯಾ ದಿಗ್ಗಜ ಸ್ಪಿನ್ನರ್ ಆರ್. ಅಶ್ವಿನ್ ಸಿಡ್ನಿ ಥಂಡರ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಗಾಯದಿಂದ ಹೊರಗುಳಿಯುವ ಮೊದಲು ಬಿಬಿಎಲ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರನಾಗಲು ಸಿದ್ಧರಾಗಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports