ಪ್ರಶಾಂತ್ ಎಲ್ಲಿ ಹೇಳಿರೋದು
ಕಡುಗಪ್ಪು ಲೋಕದಲ್ಲಿ ಗುಂಡಿನ ಸುರಿಮಳೆ ಆಗುತ್ತದೆ. ಹೆಣಗಳು ರಾಶಿ ರಾಶಿ ಬಿದ್ದಿರೋದು ಕಾಣಿಸುತ್ತವೆ. ಚಿತ್ರ ವಿಚಿತ್ರ ಅನಿಸೋ ಪಾತ್ರಗಳ ಪರಿಚಯವೂ ಇಲ್ಲಾಗುತ್ತದೆ.
ಅನಿಲ್ ಕಪೂರ್ ಈ ಚಿತ್ರದಲ್ಲಿ ರಘುವೀರ್ ರಾಥೋಡ್ ಅನ್ನುವ ಪಾತ್ರ ಮಾಡಿದ್ದಾರೆ. ಈ ಪಾತ್ರ ಕಥೆಯಲ್ಲಿ ಬರುವ ಇತರ ಪಾತ್ರಗಳಿಗೆ ಹೀರೋನೆ ಆಗಿದೆ.
ಚಿತ್ರದ ಮೊದಲ ಗ್ಲಿಂಪ್ಸ್ ರಿಲೀಸ್ ಆಗಿದೆ. ಜೂನಿಯರ್ ಎನ್‌ಟಿಆರ್ ಜನ್ಮ ದಿನಕ್ಕೇನೆ ಇದು ರಿಲೀಸ್ ಆಗಿದೆ. ನಾಯಕ ನಟನನ್ನ ಇಲ್ಲಿ ಮೊದಲು ಪರಿಚಯ ಮಾಡಿಸೋದೇ ಇಲ್ಲ.
ಈ ನಾಯಕನನ್ನ ಪರಿಚಯ ಮಾಡಿಸೋ ಮೊದಲು ಇಲ್ಲಿ ಚಿತ್ರದ ಇತರ ಪಾತ್ರಗಳನ್ನ ನೋಡಬಹುದು. ಕೊನೆಯಲ್ಲಿ ಜೂನಿಯರ್ ಎನ್‌ಟಿಆರ್ ಅವರ ಲೂಗರ್ ಪಾತ್ರದ ಪರಿಚಯ ಇದೆ. ಅದು ನಿಜಕ್ಕೂ ಭಯಂಕರ ಪಾತ್ರವೇ ಆಗಿದೆ.
ಡ್ರ್ಯಾಗನ್ ಚಿತ್ರದಲ್ಲಿರೋ ಜೂನಿಯರ್ ಎನ್‌ಟಿಆರ್ ಹೀರೋ ಅಲ್ವೇ ಅಲ್ಲ. ಕ್ರೂರ ವಿಲನ್ ಪಾತ್ರವನ್ನೆ ಡೈರೆಕ್ಟರ್ ಪ್ರಶಾಂತ್ ನೀಲ್ ಇಲ್ಲಿ ತಾರಕ್‌ಗೆ ಬರೆದಿದ್ದಾರೆ.
ಪ್ರಶಾಂತ್ ಮೇಲೆ ಸಿಟ್ಟು
ಈ ಒಂದು ಪಾತ್ರವನ್ನ ಒಪ್ಪುವುದು ಅಷ್ಟು ಸುಲಭವೇನು ಅಲ್ಲ. ಆದರೆ, ಜೂನಿಯರ್ ಎನ್‌ಟಿಆರ್ ಅಷ್ಟೆ ಧೈರ್ಯದಿಂದಲೇ ಈ ಪಾತ್ರ ಒಪ್ಪಿದ್ದಾರೆ. ಇದಕ್ಕೆ ಬೇಕಿರೋ ತಯಾರಿನೂ ಮಾಡಿಕೊಂಡಿದ್ದಾರೆ.
ಜೂನಿಯರ್ ಎನ್‌ಟಿಆರ್ ಈ ಚಿತ್ರಕ್ಕಾಗಿ ದೇಹದ ತೂಕ ಇಳಿಸಿಕೊಂಡಿದ್ದಾರೆ. ಕೇವಲ ಕೆಲವು ತಿಂಗಳಲ್ಲಿಯೇ 15 ಕೆ.ಜಿ.ತೂಕ ಇಳಿಸಿಕೊಂಡಿದ್ದಾರೆ.
ಇದರಿಂದ ತಾರಕ್ ತುಂಬಾನೆ ಲೀನ್ ಆಗಿಯೇ ಕಾಣಿಸುತ್ತಿದ್ದಾರೆ. ಸಖತ್ ಫಿಟ್ ಆಗಿಯೂ ಹೊಳೆಯುತ್ತಿದ್ದಾರೆ. ಚಿತ್ರದ ಲೂಗರ್ ಅನ್ನುವ ರೋಲ್‌ಗೆ ಬೇಕಿರೋ ಹಾಗೇನೆ ಕಾಣಿಸಿಕೊಂಡಿದ್ದಾರೆ.
ಆದರೆ, ಪ್ರಶಾಂತ್ ನೀಲ್ ಅವರ ಮೇಲೆ ಅನೇಕರು ಸಿಟ್ಟಾಗಿರೋದು ಇದೆ. ತಾರಕ್ ಅವರ ಲೀನ್ ಬಾಡಿ ಈಗ ತುಂಬಾನೆ ಚೆನ್ನಾಗಿ ಕಾಣಿಸುತ್ತಿದೆ.
ಆದರೆ, ಇದಕ್ಕಾಗಿ ಜೂನಿಯರ್ ಎನ್‌ಟಿಆರ್ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಎರಡು ತಿಂಗಳಲ್ಲಿಯೇ 15 ಕೆ.ಜಿ.ತೂಕ ಇಳಿಸಿಕೊಂಡಿದ್ದಾರೆ. ಇದನ್ನ ನೋಡಿದ ಜೂನಿಯರ್ ಎನ್‌ಟಿಆರ್ ಪತ್ನಿ ಮತ್ತು ತಾಯಿ ತುಂಬಾನೆ ಬೇಸರಗೊಂಡಿದ್ದಾರೆ ಅಂತ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ಅವರು Galatta Plus ಗೆ ಸಂದರ್ಶನ ಕೊಟ್ಟಿದ್ದಾರೆ. ಇದೇ ಸಂದರ್ಶನದಲ್ಲಿಯೇ ಪ್ರಶಾಂತ್ ಡ್ರ್ಯಾಗನ್ ಚಿತ್ರದ ಸುಮಾರು ವಿಚಾರಗಳನ್ನ ಹೇಳಿಕೊಂಡಿದ್ದಾರೆ.
ಡ್ರ್ಯಾಗನ್ ಚಿತ್ರದ ಈ ಗ್ಲಿಂಪ್ಸ್ ಅಲ್ಲಿ ನಮ್ಮ ಚಿತ್ರ ಹೇಗಿದೆ ಅಂತ ಹೇಳಿಕೊಂಡಿದ್ದೇವೆ. ನಾವು ಯಾವ ಕಥೆಯನ್ನ ಹೇಳ್ತಿದ್ದೇವೆ ಅನ್ನೋದನ್ನು ತೋರಿಸಿದ್ದೇವೆ. ಆದರೆ, ಇದು ತಾರಕ್ ಜನ್ಮ ದಿನಕ್ಕಾಗಿಯೇ ಮಾಡಿರೋ ಗ್ಲಿಂಪ್ಸ್ ಅಂತಲೇ ಪ್ರಶಾಂತ್ ನೀಲ್ ಇಲ್ಲಿ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.












