BBK13: ಆಡಿಷನ್​​ಗೆ ಎದ್ದೂ ಬಿದ್ದು ವಿಡಿಯೋ ಕಳಿಸೋರಿಗೆ ಬಿಗ್ ಅಪ್ಡೇಟ್ ಕೊಟ್ಟ ಬಿಗ್​​ಬಾಸ್! ಏನದು? ಮೊದಲು ತಿಳ್ಕೊಳ್ಳಿ | Bigg Boss Kannada season 13 audtion call | | ACTPnews

ಬಿಗ್​ಬಾಸ್


Last Updated:

BBK13: ಕನ್ನಡ ಬಿಗ್​ಬಾಸ್ ಸೀಸನ್ 13ಕ್ಕೆ ಈಗಾಗಲೇ ಆಡಿಷನ್ ಕಾಲ್ ಕೊಟ್ಟಾಗಿದೆ. ಆದರೆ ವಿಡಿಯೋ ಕಳಿಸೋ ಭರದಲ್ಲಿ ಜನ ಭರಪೂರ ತಪ್ಪು ಮಾಡಿರುವಂತಿದೆ. ಈ ಸಂಬಂಧ ಬಿಗ್​ಬಾಸ್ ಇನ್ನೊಂದು ಅಪ್ಡೇಟ್ ಕೊಟ್ಟಿದೆ. ಏನದು? ಮೊದಲು ತಿಳ್ಕೊಂಡು ಆಮೇಲೆ ವಿಡಿಯೋ ಕಳಿಸಿ.

ಬಿಗ್​ಬಾಸ್
ಬಿಗ್​ಬಾಸ್

ಕನ್ನಡ ಬಿಗ್​ಬಾಸ್ ಸೀಸನ್ 13ರ (Bigg Boss 13) ಹೊಸ ಸುದ್ದಿ ಈಗಾಗಲೇ ರಿವೀಲ್ ಆಗಿದೆ. ಈ ಬಾರಿ ಪಬ್ಲಿಕ್ ನಿಂದ ಸ್ಪರ್ಧಿಗಳಿಗೆ ಅವಕಾಶ (Contestant) ನೀಡಲಾಗಿದ್ದು ಈಗಾಗಲೇ ಆಡಿಷನ್ ವಿಡಿಯೋ (Audition Video) ಕಳುಹಿಸಿ ಕೊಡುವಂತೆ ಕರೆ (Call) ಕೊಟ್ಟಾಗಿದೆ. ಆದರೆ ಜನ ಸ್ವಲ್ಪ ಅತಿ ಉತ್ಸಾಹದಲ್ಲಿ ರೂಲ್ಸ್ (Rules) ಸರಿಯಾಗಿ ನೋಡಿದಂತಿಲ್ಲ. ಹಾಗಾಗಿ ಬಿಗ್​ಬಾಸ್ ಈಗ ಮತ್ತೆ ಅಪ್ಡೇಟ್ (Latest Update) ಕೊಟ್ಟಿದೆ.

ಬಿಗ್ ಬಾಸ್ ಆಡಿಷನ್‌ನಲ್ಲಿ ಭಾಗವಹಿಸಲು ನೀವು ತೋರುತ್ತಿರುವ ಉತ್ಸಾಹ ನಮ್ಮನ್ನು ಅಚ್ಚರಿಗೊಳಿಸಿದೆ. ಆದರೆ ಉತ್ಸಾಹದ ಭರದಲ್ಲಿ ಆಡಿಷನ್ ವಿಡಿಯೋ ಕಳುಹಿಸಲು ನಾವು ಸೂಚಿಸಿರುವ 4 ಹಂತಗಳನ್ನು ಫಾಲೋ ಮಾಡಲು ಮರೆಯಬೇಡಿ.

ಎಲ್ಲಕ್ಕಿಂತ ಮುಖ್ಯವಾಗಿ, ವಿಡಿಯೋ ಮಾಡುವಾಗ ನಿಮ್ಮ ಸ್ಪೆಶಾಲಿಟಿ ಏನು, ಬಿಗ್ ಬಾಸ್‌ನಲ್ಲಿ ಭಾಗವಹಿಸಲು ನೀವು ಯಾಕೆ ಸೂಕ್ತ ವ್ಯಕ್ತಿ, ಸ್ಪರ್ಧೆಯಲ್ಲಿ ನಿಮ್ಮಿಂದ ನಾವು ಏನು ನಿರೀಕ್ಷಿಸಬಹುದು ಎಂಬುದನ್ನು ಸ್ಪಷ್ಟವಾಗಿ ಹೇಳಿ. ಬಿಗ್‌ಬಾಸ್ ಪ್ರತಿಭೆ, ಆತ್ಮವಿಶ್ವಾಸ ಮತ್ತು ನಿಮ್ಮ ಟ್ಯಾಲೆಂಟ್ ಅನ್ನು ತೋರಿಸಲೊಂದು ವೇದಿಕೆ. ಇಲ್ಲಿ ಎಂಟ್ರಿ ಪಡೆಯಲು ನೀವೆಷ್ಟು ಅರ್ಹರು ಅನ್ನುವುದನ್ನು ವಿಡಿಯೋದಲ್ಲಿ ತಪ್ಪದೆ ಹೇಳಿ.

ಆಲ್ ದ ಬೆಸ್ಟ್ ಎಂದು ಈಗ ಮತ್ತೊಬ್ಬೆ ಕಲರ್ಸ್ ಕನ್ನಡ ಪೇಜ್​​ನಲ್ಲಿ ಶೇರ್ ಮಾಡಲಾಗಿದೆ. ಗಮನಿಸಿ!! ಬಿಗ್ ಬಾಸ್ ಆಡಿಷನ್ ವೀಡಿಯೋದಲ್ಲಿ ಏನೇನಿರಬೇಕು, ಇಲ್ಲಿದೆ ನೋಡಿ ಎಂದು ಬರೆದು ಈ ಹೊಸ ಪೋಸ್ಟ್ ಶೇರ್ ಮಾಡಲಾಗಿದೆ.

ಈ ಸೀಸನ್ ಸಖತ್ ಡಿಫರೆಂಟ್

ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ಹೊಸ ಸೀಸನ್ ಕುರಿತು ಹಲವು ಕುತೂಹಲಕಾರಿ ಸುಳಿವುಗಳನ್ನು ನೀಡಲಾಗಿದೆ. ಈ ಬಾರಿಯ ಸೀಸನ್ ಹಿಂದಿನ ಎಲ್ಲ ಸೀಸನ್ ಗಿಂತ ವಿಭಿನ್ನವಾಗಿರಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ವೀಕ್ಷಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಜನ ಸಾಮಾನ್ಯರ ಎಂಟ್ರಿ

ಈವರೆಗೆ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಸಿನಿಮಾ, ಧಾರಾವಾಹಿ, ಸಾಮಾಜಿಕ ಜಾಲತಾಣ ಹಾಗೂ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಸಾಮಾನ್ಯ ಜನರಿಗೂ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ.

ತೊಡೆ ತಟ್ಟಿ ಅಖಾಡಕ್ಕಿಳಿಯೋಕೆ ರೆಡಿಯಾ?

ಹೊಸ ಪ್ರೋಮೋದಲ್ಲಿ ಜನಸಾಮಾನ್ಯರನ್ನು ಉದ್ದೇಶಿಸಿ ವಿಶೇಷ ಸಂದೇಶ ನೀಡಲಾಗಿದೆ. “ಕೈ ತಟ್ಟಿ ಹುರಿದುಂಬಿಸಿದ್ದು ಸಾಕು, ಈಗ ತೊಡೆ ತಟ್ಟಿ ಅಖಾಡಕ್ಕೆ ಇಳಿಯುವ ಸಮಯ ಬಂದಿದೆ” ಎಂಬ ಸಂದೇಶದ ಮೂಲಕ ವೀಕ್ಷಕರನ್ನು ನೇರವಾಗಿ ಸ್ಪರ್ಧೆಗೆ ಆಹ್ವಾನಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed