Anchor Anushree: ಆ್ಯಂಕರ್ ಅನುಶ್ರೀ ಆ ವ್ಯಕ್ತಿಗೆ 7,000 ರೂಪಾಯಿ ಸಾಲ ವಾಪಸ್ ಕೊಡಲೇ ಇಲ್ಲ! ಯಾಕೆ? ಕಥೆ ಕೇಳಿದ್ರೆ ಕಣ್ಣೀರಾಗ್ತೀರಿ | Anchor anushree | | ACTPnews

ಆ್ಯಂಕರ್ ಅನುಶ್ರೀ


Last Updated:

Anchor Anushree: ಆ್ಯಂಕರ್ ಅನುಶ್ರೀ ಅವರು ಆ 7 ಸಾವಿರ ಸಾಲವನ್ನು ಇದುವರೆಗೂ ವಾಪಸ್ ಕೊಟ್ಟಿಲ್ವಂತೆ. ಆ ವ್ಯಕ್ತಿ ಯಾರು? ಯಾಕೆ ಆ ಸಾಲವನ್ನು ವಾಪಸ್ ಕೊಟ್ಟಿಲ್ಲ?

ಆ್ಯಂಕರ್ ಅನುಶ್ರೀ
ಆ್ಯಂಕರ್ ಅನುಶ್ರೀ

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anushree). ಅವರು ತುಂಬಾನೆ ಫೇಮಸ್. ಅವರು ಟಿವಿ ಹಿನ್ನೆಲೆಯಿಂದ ಬಂದವರು. ಆದರೆ ಅವರ ಜರ್ನಿ ಹೇಗಿತ್ತು? ಒಂದು ದಿನ 500 ರೂಪಾಯಿ ಬಾಡಿಗೆಯ (Rent) ಮನೆಯಲ್ಲಿ ಬದುಕುತ್ತಿದ್ದ ಆ್ಯಂಕರ್ ಅನುಶ್ರೀ ಅವರು ಇಂದು ಸುಂದರವಾದ ಮನೆ ಕಟ್ಟಿಸಿದ್ದಾರೆ.

ಅನುಶ್ರೀ ಅವರು ತಮ್ಮ ಜೀವನದಲ್ಲಿ ಆ್ಯಂಕರಿಂಗ್ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವ ಸ್ಟೋರಿಯನ್ನು ಚಿಲ್ಲಿಂಗ್​ ವಿತ್ ಚಿಲಿಂಬಿ ಯೂಟ್ಯೂಬ್ ಚಾನೆಲ್​​ನಲ್ಲಿ ಮಾತನಾಡಿದ್ದಾರೆ. ಅವರು ಮಾತುಗಳಲ್ಲಿ ಅವರು ತಾವು ಇದುವರೆಗೂ 7 ಸಾವಿರ ಸಾಲದ ಬಗ್ಗೆ ಮಾತನಾಡಿದ್ದಾರೆ.

ಆರರಿಂದ 7 ಸಾವಿರ ಸಾಲ ಇಟ್ಟಿರೋದ್ಯಾಕೆ ಅನುಶ್ರೀ ಅವರು? ಆ ಸಾಲ ಇಟ್ಟುಕೊಂಡಿದ್ಯಾಕೆ? ಇಂದು ಎಷ್ಟೇ ದುಡ್ಡಿದ್ದರೂ ಆ ಸಾಲವನ್ನು ಅನುಶ್ರೀ ಅವರು ಯಾಕೆ ಕೊಟ್ಟಿಲ್ಲ? ಇಲ್ಲಿ ಓದಿ.

ಕಾಶ್ಮೀರದಲ್ಲಿದ್ದಾಗ ವರ್ಷ ಅವರು ಕಾಲ್ ಮಾಡಿದ್ದರು. ಸರಿಗಮಪ ಶೋ ಹೋಸ್ಟ್ ಮಾಡುತ್​ತೀರಾ ಎಂದು ಕೇಳಿದರು. ನಾನು ಓಕೆ ಎಂದೆ. ಇದು ದೊಡ್ಡ ಶೋ. ಅಲ್ಲಿ ಬಂದ ನಂತರ ನಾನು ಅಲ್ಲಿಯೇ ನೆಲೆಯಾದೆ. ಮೂರು ತಿಂಳು ಫೀಸ್ ಕಟ್ಟಿಲ್ಲ ಎಂದು ಹೊರಗೆ ಹಾಕಿದ್ದರು. ಮಾರಿಮುತ್ತು ಅವರಂತಹ ದೊಡ್ಡ ಜೋರಿನ ವ್ಯಕ್ತಿ. ಭಯಂಕರ ಜೋರು. ನಾನು ಬ್ಯಾಗ್ ಹಿಡಿದು ಮೆಜೆಸ್ಟಿಕ್ ಬಸ್​​ಟಾಪ್​​ಗೆ ಹೋದೆ ಎಂದಿದ್ದಾರೆ.

ಆಗ ತಮೀಶ್ ಎನ್ನುವ ಫ್ರೆಂಡ್ ಕಾಲ್ ಮಾಡಿದ್ದರು. ಅವರು ಎಲ್ಲಿದ್ದೀರಿ ಎಂದು ಕೇಳಿದರು. ನಾನು ಹೊರಗೆ ಹಾಕಿದರು ಎಂದೆ. ಅವನು ಬಂದು ನನ್ನನ್ನು ಕರೆದುಕೊಂಡು ಹೋಗಿ ಮೂರು ತಿಂಗಳ ರೆಂಟ್ ಕೊಟ್ಟು ಹೊರಗೆ ಹೇಗೆ ಹಾಕಿದ್ರಿ? ಅಂತ ಪ್ರಶ್ನೆ ಕೇಳಿದ್ರು, ಯಾಕೆಂದರೆ ಹಿಂದಿನ ದಿನ ನನ್ನನ್ನು ಅವರು ಒಳಗೆ ಬರೋಕೆ ಬಿಟ್ಟಿರಲಿಲ್ಲ. ಕೆಲಸದವರು ಡೋರ್ ಓಪನ್ ಮಾಡಿ ಮಲಗೋಕೆ ಬಿಟ್ಟಿದ್ದರು ಎಂದಿದ್ದಾರೆ.

ಕೆಲವರ ಋಣ ಇರಬೇಕು

ಆ ನಂತರ ಮಲ್ಲೇಶ್ವರಂಗೆ ಹೋದೆವು. ಅಲ್ಲಿ ಹಾಸ್ಟೆಲ್ ಹುಡುಕಿದೆವು. ಒಂದು ದಿನಕ್ಕೆ 100 ರೂಪಾಯಿ. ಇಲ್ಲಿ ಸೇರು ಎಂದ, ಆಗಲೂ ನನಗೆ ದುಡ್ಡು ಕೊಟ್ಟ. ಅವರಿಗೆ ನನ್ನ ಒಂದು ಆರು, 7 ಸಾವಿರ ಸಾಲ ಇದೆ. ನಾನು ಹಿಂದೆ ಒಮ್ಮೆ ಭೇಟಿಯಾಗುವಾಗ ಅವನಿಗೆ ಹೇಳಿದ್ದೆ. ನಾನು ಇದನ್ನು ಕೊಡಲ್ಲ. ಕೆಲವರ ಋಣ ಇರಬೇಕಂತೆ. ಹಾಗೆ ಅದನ್ನು ನಾನು ಕೊಡಲಿಲ್ಲ ಎಂದಿದ್ದಾರೆ.

ದೇವರಾಗಿ ಬಂದ ಮನುಷ್ಯ?

ಯಾರೋ ಒಬ್ಬರು ನಮ್ಮನ್ನು ಬೀದಿಗೆ ತಳ್ಳಿದಾಗ ಯಾರೋ ಒಬ್ಬರು ಬಂದು ನಮಗೆ ಸಹಾಯ ಮಾಡುತ್ತಾರೆ. ನನಗೊಂದು ಆಶ್ರಯ ಕೊಟ್ಟ. ಅದರ ಋಣ ತೀರಿಸೋಕೆ ಸಾಧ್ಯವಿಲ್ಲ, ಇನ್ನೊಂದು ಜನ್ಮ ತೆಗೆದುಕೊಂಡು ಬರಬೇಕು ಎಂದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports