MCL 2026: ಸಾಲ ಪಡೆದ ಬ್ಯಾಟ್​​​ನಲ್ಲಿ ಸ್ಫೋಟಕ ಶತಕ ಸಿಡಿಸಿದ ಸೂರ್ಯವಂಶಿ ಟೀಮ್​ಮೇಟ್! ಎಂಸಿಎಲ್​​ನಲ್ಲಿ ಹೊಸ ದಾಖಲೆ | ಕ್ರೀಡಾ ಸುದ್ದಿ | ACTPnews

ಲುವಾನ್ ಡ್ರೆ ಪ್ರಿಟೋರಿಯಸ್


Last Updated:

ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪರ ಆಡುತ್ತಿರುವ 20 ವರ್ಷದ ಬ್ಯಾಟ್ಸ್‌ಮನ್ ಎಂಐ ನ್ಯೂಯಾರ್ಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಕೇವಲ 52 ಅಜೇಯ 102 ರನ್ ಗಳಿಸಿದರು. ಈ ಮೂಲಕ ಮೇಜರ್ ಲೀಗ್ ಕ್ರಿಕೆಟ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.

ಲುವಾನ್ ಡ್ರೆ ಪ್ರಿಟೋರಿಯಸ್
ಲುವಾನ್ ಡ್ರೆ ಪ್ರಿಟೋರಿಯಸ್

2026ರ ಮೇಜರ್ ಲೀಗ್ ಕ್ರಿಕೆಟ್ ಋತುವಿನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರವೂ ಆಡುವ ದಕ್ಷಿಣ ಆಫ್ರಿಕಾದ ಯುವ ಆಟಗಾರ ಲುವಾನ್-ಡ್ರೆ ಪ್ರಿಟೋರಿಯಸ್ ಇತಿಹಾಸ ನಿರ್ಮಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಪರ ಆಡುತ್ತಿರುವ 20 ವರ್ಷದ ಬ್ಯಾಟ್ಸ್‌ಮನ್ ಎಂಐ ನ್ಯೂಯಾರ್ಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಕೇವಲ 52 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದರು. ಈ ಮೂಲಕ ಮೇಜರ್ ಲೀಗ್ ಕ್ರಿಕೆಟ್ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.

ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಎಂಐ ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಮಾರಕ ಬೌಲಿಂಗ್ ದಾಳಿಯ ವಿರುದ್ಧ ರನ್​ಗಳಿಸಲು ಪರದಾಡಿತು. ನ್ಯೂಯಾರ್ಕ್​ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ ಕೇವಲ 143 ರನ್‌ಗಳನ್ನು ಗಳಿಸಿತು. ರಿಕಲ್ಟನ್​​ 35, ಸನ್ನಿ ಪಟೇಲ್ 32 ರನ್​ಗಳಿಸಿದರು.

ಸ್ಯಾನ್ ಫ್ರಾನ್ಸಿಸ್ಕೋ ಯೂನಿಕಾರ್ನ್ಸ್ ಚೇಸ್​​ಗೆ ಇಳಿಯುತ್ತಿದ್ದಂತೆ ಪ್ರಿಟೋರಿಯಸ್ ಮೊದಲ ಓವರ್‌ನಿಂದಲೇ ಬೌಲಿಂಗ್ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದರು. 52 ಎಸೆತಗಳನ್ನೆದುರಿಸಿದ ಅವರು 10 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 102 ರನ್​ಗಳಿಸಿದರು. ಇವರಿಗೆ ಸಾಥ್ ನೀಡಿದ ಫಿನ್ ಅಲೆನ್ 17 ಎಸೆತಗಳಲ್ಲಿ 20 ರನ್ಗಳಿಸಿದರೆ, ನಾಯಕ ಮ್ಯಾಥ್ಯೂ ಶಾರ್ಟ್ 25 ಎಸೆತಗಳಲ್ಲಿ ಅಜೇಯ 19 ರನ್​ಗಳಿಸಿದರು.

ಪ್ರಿಟೋರಿಯಸ್ ಶತಕದ ಹಿಂದೆ ಕುತೂಹಲಕಾರಿ ಕಥೆ

ಪ್ರಿಟೋರಿಯಸ್​ರ ಈ ಸ್ಫೋಟಕ ಇನ್ನಿಂಗ್ಸ್ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಪ್ರಿಟೋರಿಯಸ್ ಈ ವೇಗದ ಶತಕದ ದಾಖಲೆ ಮುರಿಯುವ ಇನ್ನಿಂಗ್ಸ್ ಅನ್ನು ತನ್ನದೇ ಆದ ಬ್ಯಾಟ್‌ನಿಂದ ಆಡಿರಲಿಲ್ಲ ಎಂದು ತಿಳಿದುಬಂದಿದೆ. ಅವರ ಜೊತೆಗಾರ ಫಿನ್ ಅಲೆನ್ ಅವರಿಂದ ಸಾಲ ಪಡೆದುಕೊಂಡು ಆಡಿದ್ದಾರೆ. ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿಯನ್ನು ಪಡೆದ ನಂತರ ಸ್ವತಃ ಪ್ರಿಟೋರಿಯಸ್ ನಗುತ್ತಾ ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ” ನಾನು ಫಿನ್ ಅಲೆನ್ ಅವರ ಬ್ಯಾಟ್‌ನಿಂದ ಆಡಿದೆ. ನಾನು ನನ್ನದೇ ಆದ ಬ್ಯಾಟ್‌ನಿಂದ ಆಡಿದ್ದರೆ, ನಾನು ಬಹುಶಃ ಅಂತಹ ಬೃಹತ್ ಸಿಕ್ಸರ್‌ಗಳನ್ನು ಹೊಡೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ, ನಾನು ಈ ಬ್ಯಾಟ್ ಅನ್ನು ನನ್ನ ಕಿಟ್ ಬ್ಯಾಗ್‌ನಲ್ಲಿ ಶಾಶ್ವತವಾಗಿ ಇಟ್ಟುಕೊಳ್ಳುತ್ತೇನೆ ” ಎಂದರು.

ಟೂರ್ನಮೆಂಟ್‌ನ ಟಾಪ್ ಸ್ಕೋರರ್

ಈ ಅದ್ಭುತ ಗೆಲುವಿನೊಂದಿಗೆ, ಸ್ಯಾನ್ ಫ್ರಾನ್ಸಿಸ್ಕೋ ತಂಡವು ತನ್ನ ಪ್ಲೇಆಫ್ ನಿರೀಕ್ಷೆಗಳನ್ನು ಹೆಚ್ಚಿಸಿಕೊಂಡಿದೆ. ಪ್ರಿಟೋರಿಯಸ್ ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಸತತ ಅರ್ಧಶತಕಗಳೊಂದಿಗೆ ವಿಧ್ವಂಸ ಸೃಷ್ಟಿಸಿದ್ದಾರೆ. ಅವರು ಪ್ರಸ್ತುತ 415 ರನ್‌ಗಳೊಂದಿಗೆ ಟೂರ್ನಮೆಂಟ್‌ನ ಟಾಪ್ ಸ್ಕೋರರ್ ಆಗಿದ್ದಾರೆ. 69.16 ರ ಪ್ರಭಾವಶಾಲಿ ಸರಾಸರಿ ಮತ್ತು 182.01ರ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಪಂದ್ಯದೊಂದಿಗೆ, ಪ್ರಿಟೋರಿಯಸ್ ಶತಕ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ವಾಷಿಂಗ್ಟನ್ ಫ್ರೀಡಂನ ಮಿಚೆಲ್ ಓವನ್ ಅವರ ಹೆಸರಿನಲ್ಲಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed