Audition: ‘ಸರಿಗಮಪ’ ಆಡಿಷನ್ ಮೂಲಕ ಸ್ಟಾರ್ ಆಗುವ ಅವಕಾಶ ಮಿಸ್ ಮಾಡ್ಕೋಬೇಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಸರಿಗಮಪ ಆಡಿಷನ್ಸ್ ಬೆಂಗಳೂರು


Last Updated:

ಜೀ ಟಿವಿಯ ‘ಸರಿಗಮಪ’ ರಿಯಾಲಿಟಿ ಶೋ ಬೆಂಗಳೂರಿಗೆ ಬಂದಿದೆ. ಜುಲೈ 19 ರಂದು ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜಿನಲ್ಲಿ ಆಡಿಷನ್ ನಡೆಯಲಿದೆ. ನೋಂದಣಿಗೆ 9152915218 ಗೆ ಮಿಸ್ಡ್ ಕಾಲ್ ನೀಡಿ.

ಸರಿಗಮಪ ಆಡಿಷನ್ಸ್ ಬೆಂಗಳೂರು
ಸರಿಗಮಪ ಆಡಿಷನ್ಸ್ ಬೆಂಗಳೂರು

ಬೆಂಗಳೂರು: ನಿಮಗೆ ಹಾಡಲು (Sing) ಇಷ್ಟವಿದೆಯೇ? ನಿಮ್ಮ ಸುಂದರ ಧ್ವನಿಯನ್ನು (Voice) ಕೇಳಿ ಇಡೀ ದೇಶವೇ ಬೆರಗಾಗಬೇಕೆಂದು ಆಸೆ ಪಡುತ್ತೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಜೀ ಟಿವಿಯ ಅತ್ಯಂತ ಜನಪ್ರಿಯ ಸಂಗೀತ ರಿಯಾಲಿಟಿ ಶೋ (Reality Show) ‘ಸರಿಗಮಪ’ ಹೊಸ ಸೀಸನ್‍ನೊಂದಿಗೆ ಮತ್ತೆ ಬಂದಿದೆ. ಈ ಬಾರಿ ಸಂಗೀತದ (Music) ಹಬ್ಬವನ್ನು ಸೃಷ್ಟಿಸಲು 100ಕ್ಕೂ ಹೆಚ್ಚು ಕಲಾವಿದರು ಒಂದಾಗುತ್ತಿದ್ದಾರೆ. ಈಗಾಗಲೇ ವಾರಣಾಸಿ, ದೆಹಲಿ, ಮುಂಬೈನಂತಹ ನಗರಗಳಲ್ಲಿ ಸಾವಿರಾರು ಗಾಯಕರು ಈ ಆಡಿಷನ್‍ಗೆ ಸಾಕ್ಷಿಯಾಗಿದ್ದಾರೆ. ಈಗ ಈ ಮ್ಯಾಜಿಕ್ ಬೆಂಗಳೂರಿಗೆ ಲಗ್ಗೆ ಇಟ್ಟಿದೆ. ನಿಮ್ಮೊಳಗಿನ ಸಂಗೀತ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ಇದಕ್ಕಿಂತ ದೊಡ್ಡ ವೇದಿಕೆ ಮತ್ತೊಂದಿಲ್ಲ.

ಆಡಿಷನ್ ಸ್ಥಳ ಮತ್ತು ಸಮಯ

ಬೆಂಗಳೂರಿನಲ್ಲಿ ಆಡಿಷನ್ ಜುಲೈ 19 ರಂದು ನಡೆಯಲಿದೆ.

ಸ್ಥಳ: ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜು, ಪಿ. ಕಳಿಂಗ ರಾವ್ ರಸ್ತೆ, ಸಂಪಂಗಿರಾಮನಗರ (ಟೌನ್ ಹಾಲ್ ಬಳಿ), ಬೆಂಗಳೂರು – 560027.

ನೋಂದಣಿ ಮಾಡುವುದು ಹೇಗೆ?

ನೀವು ಆಡಿಷನ್ ನೀಡಲು ಕಾಯುತ್ತಿದ್ದೀರಾ? ನೋಂದಣಿ ಮಾಡುವುದು ತುಂಬಾ ಸುಲಭ.9152915218 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ, ಎಸ್‍ಎಂಎಸ್ ಮೂಲಕ ಆಡಿಷನ್ ಲಿಂಕ್ ಪಡೆದುಕೊಳ್ಳಿ.ನಿಮ್ಮ ವಿವರಗಳು ಮತ್ತು ಎರಡು ಆಡಿಯೋ ಅಥವಾ ವಿಡಿಯೋ ಕ್ಲಿಪ್‍ಗಳನ್ನು 8655780787 ಸಂಖ್ಯೆಗೆ ಕಳುಹಿಸಿ.



Source link

Leave a Reply

Your email address will not be published. Required fields are marked *