Last Updated:
ಬಿಗ್ ಬಾಸ್ ಖ್ಯಾತಿಯ ನಟಿ ಮೋಕ್ಷಿತಾ ಪೈ ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ರುಕ್ಮಿಣಿ ರಾಧಾ ಕೃಷ್ಣ ಅನ್ನುವ ಹೆಸರನ್ನೆ ಇಟ್ಟಿದ್ದಾರೆ. ಇದರಲ್ಲಿ ರಾಧಾ ಪಾತ್ರ ಒಪ್ಪಲು ಕಾರಣ ಏನು ಅನ್ನೋದನ್ನ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಖ್ಯಾತಿಯ ನಟ ಮೋಕ್ಷಿತಾ ಪೈ (Mokshitha Pai) ಸದ್ಯ ಕಿರುತೆರೆಯಲ್ಲಿ ಜಗ್ಧಾತ್ರಿ ಅನ್ನೋ ಸೀರಿಯಲ್ ಮಾಡ್ತಿದ್ದಾರೆ. ಇದರ ನಡುವೆ ಇದೀಗ ಒಂದು ಚಿತ್ರ ಒಪ್ಪಿದ್ದಾರೆ. ಇದಕ್ಕೆ ರುಕ್ಮಿಣಿ ರಾಧಾ ಕೃಷ್ಣ (Rukmini Radhakrishna) ಅನ್ನುವ ಹೆಸರಿಟ್ಟಿದ್ದಾರೆ. ಇದರಲ್ಲಿ ಎರಡು ಪಾತ್ರ ಬರುತ್ತವೆ. ರುಕ್ಮಿಣಿ ಅನ್ನೋದು ಒಂದು ಪಾತ್ರವಾದರೆ, ರಾಧಾ ಅನ್ನೋದು ಇನ್ನೂ ಒಂದು ಪಾತ್ರವೇ ಆಗಿದೆ. ಇದರಲ್ಲಿ ರಾಧಾ ಪಾತ್ರವನ್ನೆ ಮೋಕ್ಷಿತಾ ಪೈ (Mokshitha Pai) ಆಯ್ಕೆ ಮಾಡಿಕೊಂಡಿದ್ದಾರೆ. ಈ ಒಂದು ಪಾತ್ರವನ್ನೆ ಯಾಕೆ ಆಯ್ಕೆ ಮಾಡಿಕೊಂಡೆ ಅನ್ನೋದನ್ನ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ರುಕ್ಮಿಣಿ ರಾಧಾ ಕೃಷ್ಣ ಸಿನಿಮಾ
(ಚಿತ್ರ ಕೃಪೆ: ಮೋಕ್ಷಿತಾ ಪೈ ಇನ್‌ಸ್ಟಾಗ್ರಾಮ್)
ಆದರೆ, ಇವರ ಕಂಟೆಂಟ್ ಚೆನ್ನಾಗಿದೆ. ಅದು ಹಾಡಿನ ವಿಚಾರದಲ್ಲೆ ಗೊತ್ತಾಗುತ್ತದೆ. ಅದಕ್ಕೇನೆ ಒಳ್ಳೆ ಮೊತ್ತಕ್ಕೇನೆ ಲಹರಿ ಸಂಸ್ಥೆ ಈ ಚಿತ್ರದ ಹಾಡುಗಳ ಹಕ್ಕು ಖರೀದಿಸಿದೆ. ಕೆ.ಕಲ್ಯಾಣ್ ಸಾಹಿತ್ಯದ ಒಂದು ಹಾಡು ರಿಲೀಸ್ ಕೂಡ ಆಗಿದೆ. ಸುನಾದ್ ಗೌತಮ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.
ರುಕ್ಮಿಣಿ ರಾಧಾ ಕೃಷ್ಣ ಚಿತ್ರದಲ್ಲಿ ಎರಡು ಪಾತ್ರಗಳಿವೆ. ರುಕ್ಮಿಣಿ ಹಾಗೂ ರಾಧಾ ಅನ್ನೋದು ಗೊತ್ತೇ ಆಗುತ್ತದೆ. ಆದರೆ, ಡೈರೆಕ್ಟರ್ ಪ್ರಾಣ್ ಸುವರ್ಣ ಒಂದು ಕೆಲಸ ಮಾಡಿದ್ದಾರೆ.
ಮೋಕ್ಷಿತಾ ಪೈ ಇಲ್ಲಿ ರಾಧಾ ಪಾತ್ರವನ್ನ ಒಪ್ಪಲು ಕಾರಣ ಇದೆ. ರಾಧಾ ಸೋಲ್‌ಮೇಟ್ ಅಲ್ವೇ? ಹಾಗೆ ರುಕ್ಮಿಣಿ ಇಲ್ಲಿ ಕೃಷ್ಣನ ಜೊತೆಗೆ ಇರೋಳು. ಆದರೆ ಇವರೆಡೂ ಪಾತ್ರಗಳಲ್ಲಿ ನಾನು ರಾಧಾ ಪಾತ್ರವನ್ನೆ ಆಯ್ಕೆ ಮಾಡಿಕೊಂಡೆ ನೋಡಿ.
ಆಗ ಡೈರೆಕ್ಟರ್ ಪ್ರಾಣ್ ಸುವರ್ಣ ಮತ್ತು ನಾಯಕ ಭರತ್ ಕುಮಾರ್ ಮುಖ ನೋಡಿಕೊಂಡಿದ್ದಾರೆ. ಕಾರಣ, ಇವರು ಮೊದಲೇ ಅಂದುಕೊಂಡಿದ್ದರಂತೆ, ರಾಧಾ ಪಾತ್ರವನ್ನ ಮೋಕ್ಷಿತಾ ಅವರಿಗೆ ಕೊಡ್ಬೇಕು ಅಂತಲೇ ನಿರ್ಧಾರ ಮಾಡಿದ್ದರಂತೆ.
ರಾಧಾ ಪಾತ್ರ ಒಪ್ಪಿರೋದು ಯಾಕೆ
ಹಾಗೆ ಮೋಕ್ಷಿತಾ ಆಯ್ಕೆ ಹಾಗೂ ಡೈರೆಕ್ಟರ್ ಪ್ರಾಣ್ ಸುವರ್ಣ ಆಯ್ಕೆ ಇಲ್ಲಿ ಒಂದಾಗಿದೆ. ಈ ವಿಚಾರವವನ್ನ ಮೋಕ್ಷಿತಾ ಪೈ ಚಿತ್ರದ ಪ್ರೆಸ್ ಮೀಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ರುಕ್ಮಿಣಿ ಪಾತ್ರವನ್ನ ನಟಿ ರಿಯಾ ಸಚ್‌ದೇವ್ ಮಾಡಿದ್ದಾರೆ. ರಾಧಾ ಪಾತ್ರದಲ್ಲಿ ಮೋಕ್ಷಿತಾ ಪೈ ಇದ್ದಾರೆ. ಮೆಜೆಸ್ಟಿಕ್-2 ಚಿತ್ರದ ನಾಯಕ ನಟ ಭರತ್ ಕುಮಾರ್ ಈ ಚಿತ್ರದಲ್ಲಿ ಕೃಷ್ಣನ ಪಾತ್ರ ಮಾಡಿದ್ದಾರೆ.
ಈ ರಾಧಾ ಮತ್ತು ರುಕ್ಮಿಣಿ ನಡುವೆ ಈ ಕೃಷ್ಣ ಇದ್ದಾರೆ. ಇವರ ಚಿತ್ರದ ರಾಧೇಯಕ್ಕುಂ ಕಣ್ಣಾನುಕ್ಕುಂ ಅನ್ನುವ ವಿಡಿಯೋ ಸಾಂಗ್ ರಿಲೀಸ್ ಆಗಿದೆ. ಇದನ್ನ ಕೆ.ಕಲ್ಯಾಣ್ ಬರೆದಿದ್ದಾರೆ. ರಜತ್ ಹೆಗ್ಡೆ, ಕವಿತಾ ರಮೇಶ್ ಇದನ್ನ ಹಾಡಿದ್ದಾರೆ. ಇನ್ನುಳಿದಂತೆ ಈ ಹಾಡು ಎಲ್ಲರ ಗಮನ ಸೆಳೆಯುವಂತೆ ಇದೆ ಅಂತ ಹೇಳಬಹುದು.
Bangalore [Bangalore],Bangalore,Karnataka














