Aparichita Movie: 48 ವರ್ಷದ ಹಿಂದೆ ಹಿಂದಿಗೂ ರಿಮೇಕ್ ಆಗಿತ್ತು ಈ ಕನ್ನಡ ಸಿನಿಮಾ | | ACTPnews

ಸುರೇಶ್ ಹೆಬ್ಳಿಕರ್ ಅಪರಿಚಿತ ಚಿತ್ರದ ಆ ದಿನಗಳು


Last Updated:

ಅಪರಿಚಿತ ಸಿನಿಮಾದ ಸ್ಕ್ರಿಪ್ಟ್ ಓದಿದಾಗ ಸುರೇಶ್ ಹೆಬ್ಳಿಕರ್ ಅವರಿಗೆ ಎಲ್ಲ ಡೌಟ್‌ಗಳು ಕ್ಲೀಯರ್ ಆದವು. ಕಾಶಿನಾಥ್ ಅವರಿಗೆ ಸಿನಿಮಾ ಮಾಡೋಕೆ ಬರ್ತದೋ ಇಲ್ವೋ ಅನ್ನುವ ಡೌಟ್ ಕೂಡ ಇವರಿಗೆ ಇತ್ತು. ಆದರೂ ಸ್ಕ್ರಿಪ್ಟ್ ಕೊಡಿ ಅಂತ ಕೇಳಿದ್ದರು. ಮುಂದೇ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.

ಸುರೇಶ್ ಹೆಬ್ಳಿಕರ್ ಅಪರಿಚಿತ ಚಿತ್ರದ ಆ ದಿನಗಳು
ಸುರೇಶ್ ಹೆಬ್ಳಿಕರ್ ಅಪರಿಚಿತ ಚಿತ್ರದ ಆ ದಿನಗಳು

ಸುರೇಶ್ ಹೆಬ್ಳಿಕರ್, (Suresh Heblikar) ಕಾಶಿನಾಥ್ (Kashinath) ಮತ್ತು ರಾಮಚಂದ್ರ ಅವರು ಮಾತನಾಡುತ್ತ ಕುಳಿತಿದ್ದರು. ಆಗ ಕಾಶಿನಾಥ್ ಅವರು ಒಂದು ಮಾತು ಹೇಳಿದರು. ನಾನು ಒಂದು ಚಿತ್ರ ಮಾಡ್ಬೇಕು ಅಂದುಕೊಂಡಿದ್ದೇನೆ. ಅದನ್ನ ನೀನು ಮಾಡ್ಬೇಕು ಅಂತ ಹೇಳಿದರು. ಆದರೆ, ಸುರೇಶ್ ಹೆಬ್ಳಿಕರ್ (Suresh Heblikar) ಅವರಿಗೆ ಡೌಟ್ ಇತ್ತು. ಇವರಿಗೆ ಸಿನಿಮಾ (Movie) ಮಾಡೋಕೆ ಬರ್ತದೋ ಇಲ್ವೋ ಅಂತ ಅನುಮಾನ ಇತ್ತು. ಆದರೂ ಒಂದು ದಿನ ಕಾಶಿನಾಥ್ ಅವರು ಕೊಟ್ಟ ಸ್ಕ್ರಿಪ್ಟ್ ಅನ್ನ ಓದಿದರು. ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.

ಅಪರಿಚಿತ ಕತೆ ಓದಿದಾಗ..

ಅಪರಿಚಿತ ಚಿತ್ರದ ಸ್ಕ್ರಿಪ್ಟ್ ಅನ್ನ ಕಾಶಿನಾಥ್ ಅವರು ಕೊಟ್ಟರು. ಸುರೇಶ್ ಹೆಬ್ಳಿಕರ್ ಅದನ್ನ ಓದಿದರು. ಓದಿ ಆದ್ಮೇಲೆ ಇವರಲ್ಲಿ ಒಂದು ಹೊಸ ಉತ್ಸಾಹವು ಬಂತ್ತು. ಅಷ್ಟೆ ಖುಷಿ ಕೂಡ ಆಯಿತು.

Suresh Heblikar Kashinath Aparichita movie unknown Facts

ಕಾಶಿನಾಥ್ ಸ್ಕ್ರಿಪ್ಟ್ ಓದಿ ಶಾಕ್ ಆದೆ

ಕಾಶಿನಾಥ್ ಅವರಿಗೆ ಹೇಳಿದರು. ಕಾಶಿನಾಥ್ ಅವರೇ ನೀವು ತುಂಬಾನೆ ಚೆನ್ನಾಗಿ ಸ್ಕ್ರಿಪ್ಟ್ ಮಾಡಿದ್ದೀರಾ, ಇದು ತುಂಬಾನೆ ಚೆನ್ನಾಗಿದೆ. ಈ ಚಿತ್ರ ನಾನು ಮಾಡುವೆ ಅಂತ ಹೇಳಿದರು.

ಕಣ್ಣಿಗೆ ಕಟ್ಟುವ ರೀತಿ ಸ್ಕ್ರಿಪ್ಟ್

ಕಾಶಿನಾಥ್ ಅವರು ಕಣ್ಣಿಗೆ ಕಟ್ಟುವ ರೀತಿ ಈ ಕತೆ ಮಾಡಿದ್ದರು. ಅಪರಿಚಿತ ಚಿತ್ರದ ಸ್ಕ್ರಿಪ್ಟ್ ಅನ್ನ ಓದಿದಾಗಲೇ ಸುರೇಶ್ ಹೆಬ್ಳಿಕರ್ ಅವರಿಗೆ ಸಿನಿಮಾನೇ ನೋಡಿದ ಅನುಭವ ಆಗಿತ್ತು.

1978 ರಲ್ಲಿ ಚಿತ್ರ ರಿಲೀಸ್

ಅಪರಿಚಿತ ಚಿತ್ರ ಮಾರ್ಚ್-26, 1978 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರ ಬಂದು ಈಗ 48 ವರ್ಷ ಆಗಿದೆ. ಈ ಚಿತ್ರವನ್ನ ಕಾಶಿನಾಥ್ ಅವರು ಡೈರೆಕ್ಷನ್ ಮಾಡಿದ್ದರು. ಕತೆನೂ ಇವರೇ ಮಾಡಿದ್ದರು. ನಿರ್ಮಾಪಕರಲ್ಲಿ ಇವರೂ ಒಬ್ಬರಾಗಿದ್ದರು.

ರಕ್ಷಿತಾ ಅವರ ತಂದೆ ಬಿ.ಸಿ.ಗೌರಿಶಂಕರ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದರು. ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನ ಮಾಡಿದ್ದರು. ಚಿತ್ರದಲ್ಲಿ ಸುರೇಶ್ ಹೆಬ್ಳಿಕರ್, ಶೋಭಾ, ಸುಂದರ ಕೃಷ್ಣ ಅರಸ್ ಅಭಿನಯಿಸಿದ್ದರು.

Suresh Heblikar Kashinath Aparichita movie unknown Facts

ಹಿಂದಿ ಭಾಷೆಗೂ ರೀಮೇಕ್
ಹಿಂದಿ ಭಾಷೆಗೂ ರೀಮೇಕ್

ಕನ್ನಡದ ಅಪರಿಚಿತ ಚಿತ್ರವು ಹಿಂದಿ ಭಾಷೆಗೂ ರೀಮೇಕ್ ಆಗಿತ್ತು. ವಿಶೇಷವೆಂದ್ರೆ ಈ ಚಿತ್ರವನ್ನ ಕಾಶಿನಾಥ್ ಅವರೇ ಹಿಂದಿ ಭಾಷೆಯಲ್ಲಿ ಡೈರೆಕ್ಷನ್ ಮಾಡಿದ್ದರು.

ಬೇಶಕ್ ಅಂತಲೇ ಈ ಚಿತ್ರಕ್ಕೆ ಹೆಸರಿಟ್ಟಿದ್ದರು. ಮಿಥುನ್ ಚಕ್ರವರ್ತಿ ಈ ಚಿತ್ರದಲ್ಲಿ ನಟಿಸಿದ್ದರು. ಯೋಗಿತಾ ಬಾಲಿ ನಟಿಸಿದ್ದರು. ಶಕ್ತಿ ಕಪೂರ್, ಅಮರೀಶ್ ಪುರಿ ಈ ಚಿತ್ರದಲ್ಲಿ ಅಭಿನಯಿಸಿದ್ದರು.

ತೆಲುಗು-ಮಲೆಯಾಳಂ ಅಲ್ಲೂ ರಿಲೀಸ್

ಈ ಚಿತ್ರ ಮಲೆಯಾಳಂ ಭಾಷೆಯಲ್ಲಿ ರೀಮೇಕ್ ಆಯಿತು. ಅನೋ ಅಥೋ ಅವಲೋ ಅಂತಲೇ ಇದಕ್ಕೆ ಹೆಸರಿಟ್ಟಿದ್ದರು. ಆದರೆ ಈ ಚಿತ್ರದ ತೆಲುಗು ವಿಚಾರಕ್ಕೆ ಬಂದಾಗ ಅಲ್ಲಿ ರೀಮೇಕ್ ಏನು ಆಗಲಿಲ್ಲ. ಬದಲಾಗಿ ಡಬ್ ಆಯಿತು.

ತೆಲುಗು ಡಬ್ ಆದ ಅಪರಿಚತ ಚಿತ್ರಕ್ಕೆ ಅಲ್ಲಿ ಅಪರಿಚಿತುಲು ಅಂತಲೇ ಶೀರ್ಷಿಕೆ ಇಟ್ಟಿದ್ದರು. ಹೀಗೆ ಕನ್ನಡದ ಅಪರಿಚಿತ ಚಿತ್ರ ಎಲ್ಲೆಡೆ ಸದ್ದು ಮಾಡ್ತು.

ಕನ್ನಡದ ಮಹಾನ್ ನಿರ್ದೇಶಕ ಕಾಶಿನಾಥ್ ಅವರಿಗೆ ಈ ಅಪರಿಚಿತ ಎರಡನೇ ಚಿತ್ರವೇ ಆಗಿತ್ತು. ಒಬ್ಬ ನಿರ್ದೇಶಕರಾಗಿ ಈ ಚಿತ್ರಕ್ಕೂ ಮೊದಲು ಅಪರೂಪದ ಅತಿಥಿಗಳು ಅಂತ ಒಂದು ಚಿತ್ರ ಮಾಡಿದ್ದರು. ಅಪರಿಚಿತ ಇವರ ಎರಡನೇ ಚಿತ್ರವಾಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed