America-White House: ಡೊನಾಲ್ಡ್ ಟ್ರಂಪ್ ಇದ್ದಾಗಲೇ ಶ್ವೇತಭವನದ ಹೊರಗೆ ಶೂಟೌಟ್​, 30 ಸುತ್ತಿನ ಭೀಕರ ಗುಂಡಿನ ದಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಶ್ವೇತಭವನದ ಪಶ್ಚಿಮ ಭಾಗದಲ್ಲಿರುವ ಗೇಟ್ 17ರ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ  ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಮೂರು ಸುತ್ತು ಗುಂಡು ಹಾರಿಸಿದ್ದಾನೆ. 30ಕ್ಕೂ ಹೆಚ್ಚು ಗುಂಡು ಹಾರಿಸಿದ ಅಪರಿಚಿತ, ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗ್ತಿದೆ.

News18
News18

ಅಮೆರಿಕಾ (ಮೇ 24): ಅಮೆರಿಕದ (America) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ಅತ್ಯಂತ ಭದ್ರತೆಯ ಶ್ವೇತಭವನದ (White House) ಕಾಂಪೌಂಡ್‌ನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು ವರದಿ ಆಗಿದೆ. ಶ್ವೇತಭವನದ ಸಂಕೀರ್ಣದ ಹೊರಗೆ 17ನೇ ಬೀದಿ ಮತ್ತು ಪೆನ್ಸಿಲ್ವೇನಿಯಾ ಅವೆನ್ಯೂ ವಾಯುವ್ಯದ ಮೂಲೆಯಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಸೇವಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಸೀಕ್ರೆಟ್ ಸರ್ವಿಸ್ ಏಜೆಂಟರು ತಕ್ಷಣ ಇಡೀ ಪ್ರದೇಶವನ್ನು ಲಾಕ್‌ಡೌನ್‌ ಮಾಡಿದ್ದಾರೆ. ಘಟನೆ ನಡೆದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದ ನಿವಾಸದೊಳಗೆ ಇದ್ದರು ಎಂದು ತಿಳಿದು ಬಂದಿದೆ.

ಶ್ವೇತಭವನದಲ್ಲಿ ಗುಂಡಿನ ದಾಳಿ-ಆಗಿದ್ದೇನು?

ಫಾಕ್ಸ್ ನ್ಯೂಸ್ ವರದಿಯ ಪ್ರಕಾರ, ಶ್ವೇತಭವನದ ಪಶ್ಚಿಮ ಭಾಗದಲ್ಲಿರುವ ಗೇಟ್ 17ರ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ  ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಮೂರು ಸುತ್ತು ಗುಂಡು ಹಾರಿಸಿದ್ದಾನೆ. 30ಕ್ಕೂ ಹೆಚ್ಚು ಗುಂಡು ಹಾರಿಸಿದ ಅಪರಿಚಿತ, ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗ್ತಿದೆ. ತಕ್ಷಣ ಎಚ್ಚೆತ್ತ ಶ್ವೇತಭವನದ ಭದ್ರತಾ ಪಡೆಗಳು  ಗುಂಡು ಹಾರಿಸಿ ಶಂಕಿತನನ್ನು ಸ್ಥಳದಲ್ಲೇ ಕೊಂದಿದ್ದಾರೆ ಎಂದು ವರದಿ ಆಗಿದೆ.

ಗುಂಡಿನ ದಾಳಿ ಮಾಡಿದ ಶಂಕಿತ ಸಾವು

ಗುಂಡಿನ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಶಂಕಿತ ವ್ಯಕ್ತಿ ಮತ್ತು ಇನ್ನೊಬ್ಬರು ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯಾಗಿದ್ದು, ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆಯುತ್ತಿರುವಾಗ ಶಂಕಿತ ಸಾವನ್ನಪ್ಪಿದ್ದಾನೆ. ಗಾಯಗೊಂಡ ನಾಗರಿಕನ ಸ್ಥಿತಿಯೂ ಗಂಭೀರವಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ಘಟನೆಯಲ್ಲಿ ಯಾವುದೇ ರಹಸ್ಯ ಸೇವಾ ಏಜೆಂಟ್‌ಗಳು ಗಾಯಗೊಂಡಿಲ್ಲ.

ಗುಂಡಿನ ಸದ್ದು ಕೇಳಿದ ತಕ್ಷಣ ಶ್ವೇತಭವನದ ಭದ್ರತಾ ಸಿಬ್ಬಂದಿ ಲಾಕ್‌ಡೌನ್ ಘೋಷಿಸಿದ್ರು. ರಾಷ್ಟ್ರೀಯ ಗಾರ್ಡ್ ಪಡೆಗಳು ಆ ಪ್ರದೇಶವನ್ನು ಸುತ್ತುವರೆದಿದೆ.

ಅದೇ ಸಮಯದಲ್ಲಿ ಶ್ವೇತಭವನದ  ಮೇಲೆ ನಿಂತು ಸಾಮಾಜಿಕ ಮಾಧ್ಯಮಕ್ಕಾಗಿ ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ಎಬಿಸಿ ನ್ಯೂಸ್ ಮುಖ್ಯ ವರದಿಗಾರ್ತಿ ಸೆಲೀನಾ ವಾಂಗ್, ಗುಂಡಿನ ಸದ್ದು ಕೇಳಿದಾಗ ರೂಮ್ ಒಳಗೆ ಓಡಿದ್ದಾರೆ. ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಸೇಫ್

ಗುಂಡಿನ ದಾಳಿ ನಡೆದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದೊಳಗಿದ್ದರು. ಇರಾನ್ ಜೊತೆಗಿನ ಪ್ರಮುಖ ಒಪ್ಪಂದದ ಕುರಿತು ಮಾತುಕತೆಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಕೋರನು ಶ್ವೇತಭವನದ ಒಳಭಾಗವನ್ನು ಪ್ರವೇಶಿಸಲು ಸಾಧ್ಯವಾಗಲಿಲ್ಲ ಮತ್ತು ಟ್ರಂಪ್ ಯಾವುದೇ ಅಪಾಯದಲ್ಲಿಲ್ಲ ಎಂದು ಭದ್ರತಾ ಮೂಲಗಳು ಸ್ಪಷ್ಟಪಡಿಸಿವೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports