Sanvi Sudeepa: ಕಾಲಿವುಡ್‌ಗೆ ಕಾಲಿಟ್ಟ ಕಿಚ್ಚನ ಮಗಳು; ಸಿ.ಎಂ. ವಿಜಯ್ ಮಗನ ಚಿತ್ರದಲ್ಲಿ ಭರ್ಜರಿ ಗಾಯನ! | | ACTPnews

Kichcha Sudeepa Daughter Sanvi Sudeepa Sigma Movie First Tamil Song Sulochana Released


ಸಾನ್ವಿ ಫಸ್ಟ್ ತಮಿಳು ಸಾಂಗ್

ಸಾನ್ವಿ ಸುದೀಪ್ ಹಿಂದಿ ಮತ್ತು ಇಂಗ್ಲಿಷ್ ಹಾಡುಗಳನ್ನು ಚೆನ್ನಾಗಿ ಹಾಡ್ತಾರೆ. ಇವರದ್ದೇ ಒಂದು ಬ್ಯಾಂಡ್ ಕೂಡ ಇದೆ. ಆದರೆ, ಸಿನಿಮಾ ಹಾಡು ಅಂತ ಬಂದಾಗ ಅದು ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಹಾಡೇ ಆಗಿದೆ.

ಸಾನ್ವಿ ಫಸ್ಟ್ ತಮಿಳು ಸಾಂಗ್

(ಚಿತ್ರ ಕೃಪೆ: ಜೇಸನ್ ಸಂಜಯ್ ಇನ್​ಸ್ಟಾಗ್ರಾಮ್)

ಈ ಹಾಡು ಅಲ್ಲದೆ ಬೇರೆ ಕನ್ನಡ ಚಿತ್ರದ ಹಾಡು ಅಂತ ಬಂದಾಗ ಅಲ್ಲಿ ಮ್ಯಾಂಗೋ ಪಚ್ಚದ ಚಿತ್ರ ಬರುತ್ತದೆ. ಈ ಚಿತ್ರದ ಅರಗಿಣಿಯೆ ಅನ್ನುವ ಹಾಡು ಹಾಡಿದ್ದಾರೆ.

ಸಿಗ್ಮಾ ಚಿತ್ರದಲ್ಲಿ ಗಾಯನ

ಸಾನ್ವಿ ಸುದೀಪ್ ಈ ಎರಡೂ ಚಿತ್ರಗಳ ಹಾಡಿನ ಯಶಸ್ಸಿನ ಬಳಿಕ ಮತ್ತೊಂದು ಚಿತ್ರಕ್ಕೆ ಹಾಡಿದ್ದಾರೆ. ಅದು ಈಗಾಗಲೇ ಹೇಳಿದಂತೆ ಸಿಗ್ಮಾ ಚಿತ್ರವೇ ಆಗಿದೆ.
ಸುಲೋಚನಾ ಸಾಂಗ್

ಸಿಗ್ಮಾ ಚಿತ್ರದಲ್ಲಿ ಸುಲೋಚನಾ ಅನ್ನುವ ಹಾಡಿದೆ. ಇದನ್ನ ಸೂಪರ್ ಸುಬ್ಬು ಬರೆದಿದ್ದಾರೆ. ಈ ಗೀತೆಯನ್ನ ಸಾನ್ವಿ ಸುದೀಪ್ ಹಾಡಿದ್ದಾರೆ.

ಈ ಹಾಡಿನ ಅಡಿಯೋ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಒಂದು ಮೋಹಕ ಫೀಲ್ ಇದೆ. ಆ ಫೀಲ್ ಅನ್ನ ಸಾನ್ವಿ ಸುದೀಪ್ ಸಖತ್ ಆಗಿಯೇ ಇಲ್ಲಿ ಕ್ಯಾರಿ ಮಾಡಿದ್ದಾರೆ.

Kichcha Sudeepa Daughter Sanvi Sudeepa Sigma Movie First Tamil Song Sulochana Released

ಕಾಲಿವುಡ್‌ಗೆ ಕಾಲಿಟ್ಟ ಕಿಚ್ಚನ ಮಗಳು

(ಚಿತ್ರ ಕೃಪೆ: ಸಿಗ್ಮಾ ಸಿನಿಮಾ ಟೀಮ್)

ಈ ಮೂಲಕ ಸಾನ್ವಿ ಸುದೀಪ್ ಈಗ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಸಿಂಗರ್ ಆಗಿಯೇ ಇಲ್ಲೂ ಧೂಳ್ ಎಬ್ಬಿಸೋ ಸಾಧ್ಯತೆನೂ ಇದೆ. ಆ ರೀತಿನೇ ಈ ಸುಲೋಚನಾ ಹಾಡಿದೆ ಅಂತಲೇ ಹೇಳಬಹುದು.

ಸಿಗ್ಮಾ ಸಿನಿಮಾ

ಈ ಚಿತ್ರವನ್ನ ಇಳಯದಳಪತಿ ವಿಜಯ್ ಪುತ್ರ ಜೇಸನ್ ಸಂಜಯ್ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದಲ್ಲಿ ಸಂದೀಪ್ ಕಿಶನ್ ಹಾಗೂ ಫರಿಯಾ ಅಬ್ದುಲ್ಲಾ ಲೀಡ್ ರೋಲ್ ಅಲ್ಲಿದ್ದಾರೆ.

ಈ ಚಿತ್ರ ಸದ್ದು ಮಾಡ್ತಾನೇ ಇದೆ. ಸಿ.ಎಂ.ಪುತ್ರ ಜೇಸನ್ ಸಂಜಯ್ ಚಿತ್ರ ಅಂತಲೇ ಹೆಚ್ಚು ಸೌಂಡ್ ಮಾಡ್ತಿದೆ. ಈ ಚಿತ್ರದ ಹಾಡು ಮತ್ತು ಟ್ರೈಲರ್ ಕೂಡ ರಿಲೀಸ್ ಆಗಿವೆ.

ಸಿಗ್ಮಾ ರಿಲೀಸ್

ಸಿಗ್ಮಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಇದೇ ವರ್ಷ ಈ ಚಿತ್ರ ತೆರೆ ಕಾಣುತ್ತಿದೆ. ಅಕ್ಟೋಬರ್‌-2 ರಂದು ಈ ಸಿನಿಮಾವನ್ನ ರಿಲೀಸ್ ಮಾಡಲಾಗುತ್ತಿದೆ.

ಈ ಡೇಟ್ ಕೂಡ ಈಗಾಗಲೇ ರಿವೀಲ್ ಆಗಿದೆ. ಡೈರೆಕ್ಟರ್ ಜೇಸನ್ ಸಂಜಯ್ ಮೊದಲ ನಿರ್ದೇಶನದ ಚಿತ್ರದ ಇದಾಗಿದೆ.

ವಿದೇಶದಲ್ಲಿ ಸಿನಿಮಾ ಕಲಿತು ಬಂದ ಜೇಸನ್ ಸಂಜಯ್ ಆ ಕಲಿಕೆಯನ್ನ ಸಿಗ್ಮಾ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed