ಕನ್ನಡದಲ್ಲಿ ಈ ಚಿತ್ರದ ಟೈಟಲ್ ಸಂಗಾತಿ ಅಂತ ಹೇಳಿಲ್ಲ. ಇಂಗ್ಲಿಷ್ ಅಲ್ಲೂ ಇದನ್ನ ಹೇಳಿಲ್ಲ. ಆದರೆ, ಪ್ರೀತಿ ಅಂತ ಬಂದ್ರೆ, ಇದೆ ಅರ್ಥ ಸೂಕ್ತ ಅನಿಸುತ್ತದೆ. ಇನ್ನು ರಿಯಲ್ ಟೈಟಲ್ ಮ್ಯಾಟರ್‌ಗೆ ಬರೋದಾದರೆ, ಈ ಚಿತ್ರಕ್ಕೆ ‘ಪಾರ್ಟ್ನರ್’ ಅಂತ ಟೈಟಲ್ ಇಟ್ಟಿದ್ದಾರೆ.
ಇದು ಪಕ್ಕಾ ಫ್ಯಾಮಿಲಿ ಸಿನಿಮಾ
ಡೈರೆಕ್ಟರ್ ಶಿವತೇಜಸ್ ಇದಕ್ಕೆ ಉಪ ಶೀರ್ಷಿಕೆನೂ ಮಾಡಿಕೊಂಡಿದ್ದಾರೆ. ‘ಟುಗೆದರ್ ಫಾರೆವರ್’ ಅನ್ನೋದು ಈ ಚಿತ್ರದ ಉಪ ಶೀರ್ಷಿಕೆ ಆಗಿದೆ. ಎರಡೂ ಸೇರಿ ಈ ಚಿತ್ರದ ಟೈಟಲ್ ಹೀಗಿದೆ; ‘ಪಾರ್ಟ್ನರ್-ಟುಗೆದರ್ ಫಾರೆವರ್’ ಅನ್ನೋದು ಈ ಸಿನಿಮಾದ ಟೈಟಲ್ ಆಗಿದೆ.
ಬೃಂದಾ ಆಚಾರ್ಯ ಈ ಚಿತ್ರದ ನಾಯಕಿ ಆಗಿದ್ದಾರೆ. ಅಜಯ್ ರಾವ್ ಈ ಸಿನಿಮಾದ ನಾಯಕರಾಗಿದ್ದಾರೆ. ಇವರ ಜೋಡಿಯ ಈ ಚಿತ್ರದ ಒಂದು ಇಂಟ್ರಸ್ಟಿಂಗ್ ಪೋಸ್ಟರ್ ಕೂಡ ಹೊರ ಬಂದಿದೆ.
ಪಾರ್ಟ್ನರ್ ಚಿತ್ರದ ಪೋಸ್ಟರ್ ಜೊತೆಗೆ ಒಂದು ಪ್ರಶ್ನೆಯನ್ನು ಅಜಯ್ ರಾವ್ ಕೇಳಿದ್ದಾರೆ. ಇಂದಿನಿಂದ ಈ ಪಾರ್ಟ್ನರ್ ನಿಮ್ಮವ. ಒಂದು ಶಾಶ್ವತ ಸಾಂಗತ್ಯದ ಪ್ರೀತಿಯ ಕತೆಯನ್ನ ಹೇಳ್ತಿದ್ದೇವೆ.
ಅಜಯ್ ರಾವ್ “ಪಾರ್ಟ್ನರ್” ಡೈರೆಕ್ಟರ್ ಜೊತೆಗೆ ಮಾತುಕತೆ
ಆದರೆ, ನಿಮ್ಮ ಪಾರ್ಟ್ನರ್ ಯಾರು? ಅವರ ಬಗ್ಗೆ DM ಮಾಡಿ ಅಂತಲೂ ಅಜಯ್ ರಾವ್ ಹೇಳಿದ್ದಾರೆ. ಈ ಪಾರ್ಟ್ನರ್ ಚಿತ್ರವನ್ನ ಡೈರೆಕ್ಟರ್ ಶಿವತೇಜಸ್ ಡೈರೆಕ್ಷನ್ ಮಾಡಿದ್ದಾರೆ.
ನಮ್ಮ ಈ ಪಾರ್ಟ್ನರ್ ಚಿತ್ರವನ್ನ ಹಬ್ಬಳ ಸೀಸನ್ ಅಲ್ಲಿಯೇ ರಿಲೀಸ್ ಮಾಡುತ್ತೇವೆ. ಈ ಚಿತ್ರಕ್ಕೆ ನಕುಲ್ ಅಭಯಂಕರ್ ಸಂಗೀತ ಕೊಟ್ಟಿದ್ದಾರೆ. ಸುಜ್ಞಾನ್ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ರೋಮ್ಯಾಂಟಿಕ್ ಕತೆ ಇದೆ. ಫ್ಯಾಮಿಲಿ ಡ್ರಾಮಾ ಕೂಡ ಇದೆ.
ಸದ್ಯದ ದಿನಗಳಲ್ಲಿ ಆ್ಯಕ್ಷನ್ ಸಿನಿಮಾಗಳ ಹಾವಳಿ ಇದೆ. ಥ್ರಿಲ್ಲರ್ ಚಿತ್ರಗಳೂ ಇವೆ. ಆದರೆ, ಈ ಚಿತ್ರ ಪ್ರೀತಿಯ ಅನುಭವ ಕೊಡುತ್ತದೆ ಅಂತ ಡೈರೆಕ್ಟರ್ ಶಿವತೇಜಸ್ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹೇಳಿಕೊಂಡಿದ್ದಾರೆ.
ಪಾರ್ಟ್ನರ್ ಚಿತ್ರಕ್ಕೆ ಶಿವತೇಜಸ್ ಅವರೇ ಟೈಟಲ್ ಇಟ್ಟಿದ್ದಾರೆ. ಇದನ್ನ ಅಜಯ್ ರಾವ್ ಸೇರಿದಂತೆ ಎಲ್ಲರೂ ಮೆಚ್ಚಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ನಡೀತಾ ಇದೆ.
ಸದ್ಯಕ್ಕೆ ಚಿತ್ರದ ಒಂದೇ ಒಂದು ಪೋಸ್ಟರ್ ಬಿಟ್ಟಿದ್ದೇವೆ. ಮುಂದೆ ಒಂದು ವಿಡಿಯೋ ಸಾಂಗ್ ಕೂಡ ರಿಲೀಸ್ ಮಾಡುತ್ತೇವೆ. ಸೆಪ್ಟೆಂಬರ್ ಇಲ್ಲವೆ ಅಕ್ಟೋಬರ್ ಅಲ್ಲಿ ರಿಲೀಸ್ ಪ್ಲಾನಿಂಗ್ ಇದೆ.
ನಮ್ಮ ಈ ಪಾರ್ಟ್ನರ್ ಚಿತ್ರ ತುಂಬಾನೆ ಚೆನ್ನಾಗಿ ಬಂದಿದೆ. ಈಗಾಗಲೇ ನೋಡಿದವರೆಲ್ಲ ಚೆನ್ನಾಗಿದೆ ಅಂತಲೇ ಹೇಳಿದ್ದಾರೆ. ನಕುಲ್ ಅಭಯಂಕರ್ ಅವರ ಸಂಗೀತದ ಹಾಡುಗಳು ಉತ್ತಮವಾಗಿವೆ.
ಈ ಹಾಡುಗಳು ಜನಕ್ಕೂ ಇಷ್ಟ ಆಗುತ್ತವೆ. ಜನ ಚಿತ್ರವನ್ನು ಬಹುವಾಗಿಯೇ ಮೆಚ್ಚಿಕೊಳ್ಳುತ್ತಾರೆ. ಆ ರೀತಿನೇ ನಮ್ಮ ಚಿತ್ರ ಇದೆ ಅಂತಲೇ ಶಿವತೇಜಸ್ ಹೇಳಿಕೊಂಡಿದ್ದಾರೆ.












