Air India: ಏರ್​ ಇಂಡಿಯಾ ಪೈಲಟ್​ ಕುಡಿದಿದ್ರಾ? ದಿಢೀರ್​ 300 ಅಡಿ ಆಳಕ್ಕೆ ಕುಸಿದ ವಿಮಾನ, ಹಲವು ಪ್ರಯಾಣಿಕರಿಗೆ ಗಾಯ / Air India Scare: Plane Drops 300 Feet Mid-Air | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದಿಢೀರ್​ ಕುಸಿದ ವಿಮಾನ


Last Updated:

ಫುಕೆಟ್ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ದೊಡ್ಡ ದುರಂತ ಸಂಭವಿಸಿದೆ. ವಿಮಾನ ಇದ್ದಕ್ಕಿದ್ದಂತೆ 300 ಅಡಿಗಳಷ್ಟು ಪ್ರಕ್ಷುಬ್ಧ ಸ್ಥಿತಿಯಲ್ಲಿ ಕುಸಿದಿದೆ. ಇದನ್ನು ಕಂಡು ಪ್ರಯಾಣಿಕರು ಗಾಬರಿಯಾಗಿದ್ದು, ಕೆಲವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ.

ದಿಢೀರ್​ ಕುಸಿದ ವಿಮಾನ
ದಿಢೀರ್​ ಕುಸಿದ ವಿಮಾನ

ಆಗಸ್ಟ್ 4ರಂದು ಫುಕೆಟ್‌ನಿಂದ ದೆಹಲಿಗೆ ಹಾರುತ್ತಿದ್ದ ಏರ್ ಇಂಡಿಯಾ (Air India) ವಿಮಾನ AI2379 ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತ್ತು. ಗಾಳಿಯ ಮಧ್ಯದಲ್ಲಿ ವಿಮಾನ ಇದ್ದಕ್ಕಿದ್ದಂತೆ ಸುಮಾರು 300 ಅಡಿ ಕೆಳಗೆ ದಿಢೀರ್​​ ಇಳಿದಿದೆ. ಈ ಘಟನೆಯಿಂದ ಪ್ರಯಾಣಿಕರು ಮತ್ತು ಸಿಬ್ಬಂದಿ ಆತಂಕಗೊಂಡಿದ್ದು, ಅಲ್ಲದೇ ಅವರು ಆರೋಗ್ಯ ಸಮಸ್ಯೆಗೂ (Health Issue) ತುತ್ತಾಗಿದ್ದರು. ಈ ವಿಮಾನ ದೆಹಲಿಯಲ್ಲಿ ಇಳಿದ ನಂತರ ಪೈಲಟ್‌ನ ಡೋಪ್ ಪರೀಕ್ಷೆ ನಡೆಸಲಾಯಿತು. ಆದರೆ ಇದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed