Actress Aishwarya Pisse: ಖ್ಯಾತ ಕಿರುತೆರೆ ನಟಿ ಡಿವೋರ್ಸ್! ಇನ್ಸ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಎಚ್ಚರಿಕೆ ಕೊಟ್ಟ ಐಶ್ವರ್ಯಾ ಪಿಸ್ಸೆ! | | ACTPnews

ನಟಿ ಐಶ್ವರ್ಯಾ ಪಿಸ್ಸೆ (ಚಿತ್ರಕೃಪೆ: ಐಶ್ವರ್ಯಾ ಪಿಸ್ಸೆ Instagram)

[ad_1]

Last Updated:

Actress Aishwarya Pisse: ಕನ್ನಡದ ಖ್ಯಾತ ಕಿರುತೆರೆ ನಟಿ ತಮ್ಮ ಪತಿಯಿಂದ ಡಿವೋರ್ಸ್‌ ಪಡೆದುಕೊಂಡಿದ್ದಾರೆ! ಈ ಬಗ್ಗೆ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದು, ತಮ್ಮ ವೈಯಕ್ತಿಕ ನಿರ್ಧಾರ ಮತ್ತು ಖಾಸಗಿತವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.

ನಟಿ ಐಶ್ವರ್ಯಾ ಪಿಸ್ಸೆ (ಚಿತ್ರಕೃಪೆ: ಐಶ್ವರ್ಯಾ ಪಿಸ್ಸೆ Instagram)
ನಟಿ ಐಶ್ವರ್ಯಾ ಪಿಸ್ಸೆ (ಚಿತ್ರಕೃಪೆ: ಐಶ್ವರ್ಯಾ ಪಿಸ್ಸೆ Instagram)

ಕನ್ನಡದ ಖ್ಯಾತ ಕಿರುತೆರೆ ನಟಿ (Kannada television actress) ತಮ್ಮ ಪತಿಯಿಂದ (husband) ಡಿವೋರ್ಸ್‌ (divorce) ಪಡೆದುಕೊಂಡಿದ್ದಾರೆ! ಈ ಬಗ್ಗೆ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದು, ತಮ್ಮ ವೈಯಕ್ತಿಕ ನಿರ್ಧಾರ ಮತ್ತು ಖಾಸಗಿತವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ. ಕನ್ನಡ (Kannada Serial) ಹಾಗೂ ತೆಲುಗು ಸೀರಿಯಲ್‌ಗಳಲ್ಲಿ (elugu serial) ನಟಿಸಿ ಮನೆ ಮಾತಾಗಿರುವ ನಟಿ ಐಶ್ವರ್ಯಾ ಪಿಸ್ಸೆ (Aishwarya Pisse) ತಮ್ಮ ಡಿವೋರ್ಸ್ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ತೆರೆ ಮೇಲಿನ ಜೀವನಕ್ಕೂ ಮತ್ತು ತೆರೆ ಹಿಂದಿನ ಜೀವನಕ್ಕೂ ಇರುವ ವ್ಯತ್ಯಾಸ ತಿಳಿದುಕೊಂಡು, ವದಂತಿ ಹರಡುವುನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ ಡಿವೋರ್ಸ್

ಖ್ಯಾತ ಕಿರುತೆರೆ ನಟಿ ಐಶ್ವರ್ಯಾ ಪಿಸ್ಸೆ ತಮ್ಮ ಡಿವೋರ್ಸ್ ವಿಚಾರವನ್ನು ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ, ಫಾಲೋವರ್ಸ್‌ಗಳಿಗೆ ಹಾಗೂ ಹಿತೈಷಿಗಳಿಗೆ, ನನ್ನ ವೈಯಕ್ತಿಕ ಜೀವನದ ಸುತ್ತ ಹರಡುತ್ತಿರುವ ಅನಗತ್ಯ ವದಂತಿಗಳು ಮತ್ತು ಊಹಾಪೋಹಗಳಿಗೆ ತಕ್ಷಣ ತೆರೆ ಎಳೆಯುವ ಉದ್ದೇಶದಿಂದ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವುದು ಅಗತ್ಯವೆಂದು ಭಾವಿಸಿದ್ದೇನೆ ಅಂತ ಹೇಳಿದ್ದಾರೆ.

ಒಂದೂವರೆ ವರ್ಷಗಳಿಂದ ಪ್ರತ್ಯೇಕ ವಾಸ

ನಾನು ಮತ್ತು ನನ್ನ ಪತಿ ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಸಾಕಷ್ಟು ಯೋಚನೆ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ, ನಾವು ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆದಿದ್ದೇವೆ. ಇದು ನಮ್ಮಿಬ್ಬರ ವೈಯಕ್ತಿಕ ನಿರ್ಧಾರವಾಗಿದ್ದು, ಈ ಹಂತದಲ್ಲಿ ನಮಗೆ ಅಗತ್ಯವಿರುವ ಖಾಸಗಿತನ ಮತ್ತು ನೆಮ್ಮದಿಯನ್ನು ಗೌರವಿಸಿ, ನಮ್ಮ ಆಯ್ಕೆಯನ್ನು ಎಲ್ಲರೂ ಮಾನ್ಯ ಮಾಡಬೇಕೆಂದು ವಿನಂತಿಸುತ್ತೇನೆ.

ಎಚ್ಚರಿಕೆ ಕೊಟ್ಟ ನಟಿ

ವೀಕ್ಷಕರು, ಫಾಲೋವರ್ಸ್, ಲೈಕ್ಸ್ ಅಥವಾ ಎಂಗೇಜ್‌ಮೆಂಟ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಕಥೆಗಳನ್ನು ಸೃಷ್ಟಿಸುವುದು, ದಾರಿ ತಪ್ಪಿಸುವ ವಿಡಿಯೋಗಳನ್ನು ಪ್ರಕಟಿಸುವುದು, ನನ್ನ ಧಾರಾವಾಹಿಯ ದೃಶ್ಯಗಳನ್ನು ಸಂದರ್ಭಕ್ಕೆ ಸಂಬಂಧವಿಲ್ಲದ ರೀತಿಯಲ್ಲಿ ಬಳಸುವುದು ಅಥವಾ ನನ್ನ ವೈಯಕ್ತಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಕಾನೂನಿನ ದೃಷ್ಟಿಯಿಂದ ಸ್ವೀಕಾರಾರ್ಹವಲ್ಲ. ಇಂತಹ ಕೃತ್ಯಗಳು ಮುಂದುವರೆದರೆ ಸಂಬಂಧಪಟ್ಟವರ ವಿರುದ್ಧ ಗಂಭೀರ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಐಶ್ವರ್ಯಾ ಪಿಸ್ಸೆ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ

ನನ್ನ ಕೆಲಸವೇ ನನ್ನ ವೈಯಕ್ತಿಕ ಜೀವನ, ನನ್ನ ಪ್ರಯತ್ನ, ಜೀವನ ನನ್ನ ಖಾಸಗಿ ವಿಚಾರ. ಸುಳ್ಳು ಹಾಗೂ ಮಾನಹಾನಿಕರ ವಿಷಯಗಳನ್ನು ಸೂಕ್ತ ಕಾನೂನು ಮಾರ್ಗಗಳ ಮೂಲಕ ಎದುರಿಸಲಾಗುವುದು. ಇಂತಹ ಕೃತ್ಯಗಳು ಮುಂದುವರೆದರೆ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಅಂತ ಐಶ್ವರ್ಯಾ ಪಿಸ್ಸೆ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡ, ತೆಲುಗು ಧಾರಾವಾಹಿಗಳಲ್ಲಿ ನಟನೆ

ನಟಿ ಐಶ್ವರ್ಯಾ ಪಿಸ್ಸೆ ಅವರು 20109ರಲ್ಲಿ ಹರಿವಿನಯ್ ಎಂಬುವರನ್ನು ವಿವಾಹವಾಗಿದ್ದರು. ಇನ್ನು ಅನುರೂಪ, ಸರ್ವ ಮಂಗಳ ಮಾಂಗಲ್ಯೇ, ಸುಂದರಿ, ಮಾಂಗಲ್ಯ, ಪುನರ್ ವಿವಾಹ ಮುಂತಾದ ಕನ್ನಡದ ಹಲವು ಧಾರಾವಾಹಿ, ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾದಲ್ಲಿ ಐಶ್ವರ್ಯಾ ಪಿಸ್ಸೆ ಅಭಿನಯಿಸಿದ್ದಾರೆ. ಇನ್ನು ತೆಲುಗಿನ ಹಲವು ಧಾರಾವಾಹಿಗಳಲ್ಲೂ ಐಶ್ವರ್ಯಾ ಪಿಸ್ಸೆ ನಟಿಸಿ, ಸೈ ಎನಿಸಿಕೊಂಡಿದ್ದಾರೆ.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed