Last Updated:
ದಿ ಫೈನಲ್ ಎಕ್ಸಿಟ್ ಹಾಗೂ ಘೋಸ್ಟ್ ಚಿತ್ರಗಳಲ್ಲಿನ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ನಟಿ ಅನನ್ಯಾ ರಾಜ್ (Actress Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
ಬಾಲಿವುಡ್‌ನ ಘೋಸ್ಟ್, ತಗ್ಗೆದೇ ಲೇ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದ ಉದಯೋನ್ಮುಖ ನಟಿ ಅನನ್ಯಾ ರಾಜ್ (Ananya Raj) 27ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯುವ ನಟಿಯ ಅಕಾಲಿಕ ಸಾವಿನ ಸುದ್ದಿ ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಹಾಗೆಯೇ ಅನನ್ಯಾ ರಾಜ್ ಅವರಿಗೆ ಇದ್ದಕ್ಕಿದ್ದಂತೆ ಏನಾಯಿತು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.














