Actor : ಡೈರೆಕ್ಟರ್ ಆದ ಹೀರೋ! ಯಾವ ಸಿನಿಮಾ? ಯಾರದು ಆ ಸ್ಟಾರ್ ನಟ? | | ACTPnews

Tollywood Ram Pothineni RAMO23 New Movie Latest Updates


ಡೈರೆಕ್ಟರ್ ಆದ ಹೀರೋ

ರಾಮ್ ಪೋತಿನೇನಿ ಹೀರೋ ಅನ್ನೋದು ಗೊತ್ತೇ ಇದೆ. ಇಸ್ಮಾರ್ಟ್ ಶಂಕರ್ ಚಿತ್ರದಿಂದ ತೆಲುಗು ಚಿತ್ರ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.

ಈ ಚಿತ್ರದ ಪೋಸ್ಟರ್

(ಚಿತ್ರ ಕೃಪೆ: ರಾಮ್ ಪೋತಿನೇನಿ ಇನ್‌ಸ್ಟಾಗ್ರಾಮ್)

ಡಬಲ್ ಇಸ್ಮಾರ್ಟ್ ಚಿತ್ರದಲ್ಲೂ ಧಮಾಕಾ ಮಾಡಿದ್ದಾರೆ. ಆದರೆ, ಇದೀಗ ರಾಮ್ ಪೋತಿನೇನಿ ಇನ್ನೂ ಒಂದು ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರ ಇವರ ಸಿನಿ ಜೀವನದ 23 ನೇ ಸಿನಿಮಾ ಆಗಿದೆ.

RAMO23 ಸಿನಿಮಾ

RAMO23 ಅನ್ನೋದು ತಾತ್ಕಾಲಿಕವಾಗಿ ಇಟ್ಟ ಟೈಟಲ್ ಆಗಿದೆ. ಈ ಚಿತ್ರದ ಇನ್ನೂ ಒಂದು ವಿಶೇಷ ಅಂದ್ರೆ, ಅದು ಡೈರೆಕ್ಷನ್ ವಿಚಾರವೇ ಆಗಿದೆ.

ಈ ಚಿತ್ರದ ಮೂಲಕವೇ ರಾಮ್ ಪೋತಿನೇನಿ ಡೈರೆಕ್ಟರ್ ಆಗುತ್ತಿದ್ದಾರೆ. ಈ ಚಿತ್ರದ ನಾಯಕರೂ ಇವರೇ ಆಗಿದ್ದಾರೆ. ಡೈರೆಕ್ಷನ್ ಕೂಡ ಇವರೇ ಮಾಡುತ್ತಿದ್ದಾರೆ.

ಇದು ಎಂತಹ ಸಿನಿಮಾ

ರಾಮ್ ಪೋತಿನೇನಿ ಡೈರೆಕ್ಷನ್ ಮಾಡ್ತಿರೋ ಈ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವೇ ಆಗಿದೆ. ಇದರ ಚಿತ್ರೀಕರಣ ಜೂನ್ ತಿಂಗಳಿನಿಂದಲೇ ಶುರು ಆಗುತ್ತಿದೆ.

2026 ಡಿಸೆಂಬರ್ ತಿಂಗಳಲ್ಲಿಯೇ ಈ ಚಿತ್ರವನ್ನ ತೆರೆಗೆ ತರುವ ಪ್ಲಾನ್ ಕೂಡ ಇದೆ. ಅದನ್ನೂ ಈಗಲೇ ಹೇಳಿಕೊಳ್ಳಲಾಗಿದೆ. ಈ ಚಿತ್ರವನ್ನ ರಾಮ್ ಪೋತಿನೇನಿ ತಮ್ಮ ರಾಪೋ ಸಿನಿಮ್ಯಾಟಿಕ್ಸ್ ನಿರ್ಮಾಣ ಸಂಸ್ಥೆ ಮೂಲಕವೇ ನಿರ್ಮಿಸುತ್ತಿದ್ದಾರೆ.

Tollywood Ram Pothineni RAMO23 New Movie Latest Updates

ರಾಮ್ ಪೋತಿನೇನಿ ಚಿತ್ರಗಳು

(ಚಿತ್ರ ಕೃಪೆ: ರಾಮ್ ಪೋತಿನೇನಿ ಇನ್‌ಸ್ಟಾಗ್ರಾಮ್)

ಅತಿ ಶೀಘ್ರದಲ್ಲಿ…

ಈ ಚಿತ್ರದ ಮಾಹಿತಿ ಸದ್ಯ ಇಷ್ಟಿದೆ. ಆದರೆ, ಇತರ ವಿವರ ಅಂದ್ರೆ, ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿ ಇನ್ನಷ್ಟೆ ಹೊರ ಬೀಳಬೇಕಿದೆ. ಅದನ್ನು ಆದಷ್ಟು ಬೇಗ ರಿವೀಲ್ ಮಾಡ್ತೀವಿ ಅಂತ ಸ್ವತಃ ರಾಮ್ ಪೋತಿನೇನಿ ಹೇಳಿಕೊಂಡಿದ್ದಾರೆ.

ಈಗಾಗಲೇ ಹೇಳಿದಂತೆ ರಾಮ್ ಪೋತಿನೇನಿ ಇಲ್ಲಿವರೆಗೂ 22 ಚಿತ್ರಗಳನ್ನ ಮಾಡಿದ್ದಾರೆ. ಇದರಲ್ಲಿ ಇಸ್ಮಾರ್ಟ್ ಶಂಕರ್ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿದೆ. ಡಬಲ್ ಇಸ್ಮಾರ್ಟ್ ಚಿತ್ರವೂ ಬಾಕ್ಸ್ ಆಫೀಸ್ ಅಲ್ಲಿ ಫುಲ್ ಸೌಂಡ್ ಮಾಡಿದೆ.

ರಾಮ್ ಪೋತಿನೇನಿ ಚಿತ್ರಗಳು

ರಾಮ್ ಪೋತಿನೇನಿ ತುಂಬಾನೆ ಆ್ಯಕ್ಟೀವ್ ಆಗಿದ್ದಾರೆ. 2006 ರಿಂದ 2026 ಅವಧಿಯಲ್ಲಿ ದೇವದಾಸು (ಫಸ್ಟ್ ಸಿನಿಮಾ), ಹೈಪರ್, ಮಸಾಲಾ, ರೆಡ್, ಸ್ಕಂದ ಚಿತ್ರವನ್ನ ಮಾಡಿದ್ದಾರೆ. ಇಷ್ಟೆಲ್ಲ ಚಿತ್ರ ಆದ್ಮೇಲೆ ಈಗ ಡೈರೆಕ್ಷನ್‌ಗೆ ಕೈ ಹಾಕಿದ್ದಾರೆ.

ಇವರಿಗೆ ಚಿತ್ರಗಳಿಗೆ ಹಾಡು ಬರೆಯೋದು ಗೊತ್ತಿದೆ. ಈ ಹಿಂದೆ ಆಂಧ್ರ ಕಿಂಗ್ ತಾಲೂಕಾ ಸಿನಿಮಾಗೆ ಸಾಹಿತ್ಯ ಬರೆದಿದ್ದರು. ಇದನ್ನು ಜನ ಮೆಚ್ಚಿಕೊಂಡರು. ಇದೇ ರಾಮ್ ಪೋತಿನೇನಿ ಇದೀಗ ಡೈರೆಕ್ಷನ್‌ಗೆ ಕೈ ಹಾಕಿದ್ದಾರೆ.

ಈ ಚಿತ್ರದ ಪೋಸ್ಟರ್

ರಾಮ್ ಪೋತಿನೇನಿ ಡೈರೆಕ್ಷನ್ ಮಾಡ್ತಿರೋ ಈ ಚಿತ್ರದ ಪೋಸ್ಟರ್ ಇಂಟ್ರಸ್ಟಿಂಗ್ ಆಗಿದೆ. ಜಾಕೆಟ್ ಧರಿಸಿ, “V” ಕಟ್ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಪೋಸ್ಟರ್ ರಿಲೀಸ್ ಆಗಿದೆ. ಇದರ ಜೊತೆಗೆ ರಾಮ್ ಪೋತಿನೇನಿ ಡೈರೆಕ್ಷನ್ ವಿಚಾರವೂ ರಿವೀಲ್ ಆಗಿದೆ. ಇನ್ನುಳಿದಂತೆ ರಾಮ್ ಪೋತಿನೇನಿ ಮೊದಲ ಚಿತ್ರದಲ್ಲಿ ಏನೆಲ್ಲ ಹೇಳ್ತಾರೆ ಅನ್ನುವ ಕುತೂಹಲವೂ ಈಗಲೇ ಶುರು ಆಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed