Government Jobs: SSLC ಕಲಿತರೆ ಸಾಕು, ಪರೀಕ್ಷೆಯೂ ಇಲ್ಲ; ಆಯ್ಕೆ ಆದರೆ 69 ಸಾವಿರ ಸಂಬಳ, 35 ವರ್ಷದವರಿಗೂ ಅವಕಾಶ! | | ACTPnews

ಕೋರ್ಟ್‌ ಹುದ್ದೆಗಳು


Last Updated:

ಕರ್ನಾಟಕ ಹೈಕೋರ್ಟ್ ಗ್ರೂಪ್ D ನೇಮಕಾತಿ ಅಧಿಸೂಚನೆ, ಬೆಂಗಳೂರು ಧಾರವಾಡ ಕಲಬುರಗಿ ಹುದ್ದೆಗಳು, SSLC ಪಾಸ್ ಅಭ್ಯರ್ಥಿಗಳಿಗೆ ಮೇ 22 ರಿಂದ ಜೂನ್ 21, 2026ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅವಕಾಶ

ಕೋರ್ಟ್‌ ಹುದ್ದೆಗಳು
ಕೋರ್ಟ್‌ ಹುದ್ದೆಗಳು

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನಲ್ಲಿ (High Court) ಸ್ಥಿರ ಸರ್ಕಾರಿ ಉದ್ಯೋಗ ಬಯಸುತ್ತಿರುವ SSLC ಪಾಸಾದ ಅಭ್ಯರ್ಥಿಗಳಿಗೆ ಇದೊಂದು ಅಪರೂಪದ ಅವಕಾಶ. ಕರ್ನಾಟಕ ಹೈಕೋರ್ಟ್ 2026ರ ಗ್ರೂಪ್ D ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರು, ಧಾರವಾಡ (Dharwad) ಮತ್ತು ಕಲಬುರಗಿ ಈ ಮೂರು ಕಡೆಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ (Application) ಆಹ್ವಾನಿಸಲಾಗಿದೆ.

ಎಷ್ಟು ಸಂಬಳ ಇದೆ?

ಖಾಲಿ ಇರುವ ಹುದ್ದೆಗಳ ವಿವರ ನೋಡಿದರೆ ಗುಮಾಸ್ತ, ವಾಚ್‌ಮ್ಯಾನ್, ಸ್ವೀಪರ್ ಮತ್ತು ಲಿಫ್ಟ್ ಅಟೆಂಡಂಟ್ ಸೇರಿದಂತೆ ಹಲವು ಸಹಾಯಕ ಹುದ್ದೆಗಳಿವೆ. ವೇತನ ಶ್ರೇಣಿ ₹19,900 ರಿಂದ ₹63,200 ಹಾಗೂ ₹21,700 ರಿಂದ ₹69,100 ವರೆಗೆ ಇದ್ದು, ಜೊತೆಗೆ DA, HRA, TA ಸೇರಿದಂತೆ ಹೆಚ್ಚುವರಿ ಭತ್ಯೆಗಳೂ ಲಭ್ಯ.

ಅರ್ಹತೆಗಳೇನು?

ಅರ್ಹತೆ ವಿಷಯದಲ್ಲಿ SSLC (10ನೇ ತರಗತಿ) ತೇರ್ಗಡೆ ಕನಿಷ್ಠ ಶೈಕ್ಷಣಿಕ ಅರ್ಹತೆ. ವಯೋಮಿತಿ 18 ರಿಂದ 40 ವರ್ಷ. OBC ಅಭ್ಯರ್ಥಿಗಳಿಗೆ 3 ವರ್ಷ ಮತ್ತು SC/ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ವಿನಾಯಿತಿ ಇದೆ. ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು ಎಂಬುದೇ ಈ ಹುದ್ದೆಗಳಿಗಿರುವ ಕಡ್ಡಾಯ ಷರತ್ತು.

ಆಯ್ಕೆ ಪ್ರಕ್ರಿಯೆ ಮೆರಿಟ್‌ ಮೇಲೆ

ಆಯ್ಕೆ ಪ್ರಕ್ರಿಯೆ ಸರಳ. SSLC ಅಂಕಗಳ ಆಧಾರದ ಮೇರೆಗೆ ಮೆರಿಟ್ ಲಿಸ್ಟ್ ತಯಾರಿಸಲಾಗುತ್ತದೆ, ಯಾವುದೇ ಪ್ರತ್ಯೇಕ ಲಿಖಿತ ಪರೀಕ್ಷೆ ಇಲ್ಲ. ಕೆಲವು ಹುದ್ದೆಗಳಿಗೆ ದೈಹಿಕ ಅರ್ಹತೆ ಪರೀಕ್ಷೆ ಇರಬಹುದು. ಅರ್ಜಿ ಶುಲ್ಕ General/OBC ಅಭ್ಯರ್ಥಿಗಳಿಗೆ ₹200 ಮತ್ತು SC/ST ಅಭ್ಯರ್ಥಿಗಳಿಗೆ ₹100. ಶುಲ್ಕ ಪಾವತಿ SBI ಪೇಮೆಂಟ್ ಗೇಟ್‌ವೇ ಮೂಲಕ ಕ್ರೆಡಿಟ್/ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಮಾಡಬಹುದು.
ಹೇಗೆ ಅರ್ಜಿ ಸಲ್ಲಿಸಬೇಕು?

ಅರ್ಜಿ ಸಲ್ಲಿಕೆ ಮೇ 22, 2026 ರಿಂದ ಆರಂಭವಾಗಿದ್ದು, ಕೊನೆಯ ದಿನ ಜೂನ್ 21, 2026 (ರಾತ್ರಿ 11:59 ಗಂಟೆ). ಅರ್ಜಿ ಸಂಪೂರ್ಣ ಆನ್‌ಲೈನ್ ಮಾತ್ರ, ಯಾವುದೇ ಆಫ್‌ಲೈನ್ ಅರ್ಜಿ ಸ್ವೀಕರಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು SSLC ಮಾರ್ಕ್‌ಕಾರ್ಡ್, ಇತ್ತೀಚಿನ ಫೋಟೋ, ಸಹಿ, ಜಾತಿ ಪ್ರಮಾಣಪತ್ರ, ಆಧಾರ್/ವಿಳಾಸ ಪುರಾವೆ ಮತ್ತು ಅಗತ್ಯವಿದ್ದಲ್ಲಿ ಅನುಭವ ಪ್ರಮಾಣಪತ್ರ ಸ್ಕ್ಯಾನ್ ಮಾಡಿ ಸಿದ್ಧಪಡಿಸಿಕೊಳ್ಳಿ. ಒಮ್ಮೆ ಸಲ್ಲಿಸಿದ ಅರ್ಜಿಯನ್ನು ತಿದ್ದುಪಡಿ ಮಾಡಲು ಸಾಧಾರಣ ಅವಕಾಶ ಇರುವುದಿಲ್ಲ. ಹಾಗಾಗಿ ಎಲ್ಲ ವಿವರಗಳನ್ನು ಎರಡು ಬಾರಿ ಪರಿಶೀಲಿಸಿ ಸಲ್ಲಿಸಿ. ಕೊನೆಯ ದಿನ ಸರ್ವರ್ ಸಮಸ್ಯೆ ಬರಬಹುದಾದ್ದರಿಂದ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ. ಅಧಿಕೃತ ವೆಬ್‌ಸೈಟ್: https://judiciary.karnataka.gov.in ಇದರಲ್ಲಿ ಹುದ್ದೆಗಳ ಚೆಕ್‌ ಮಾಡಬಹುದು.



Source link

Leave a Reply

Your email address will not be published. Required fields are marked *