Batwara 1947 Movie: ದೇಶ ವಿಭಜನೆಯ ಕಥೆ-ವ್ಯಥೆ; ‘ಬಟ್ವಾರಾ’ದಲ್ಲಿ ಅಬ್ಬರಿಸಿದ ಸನ್ನಿ ಡಿಯೋಲ್ | | ACTPnews

ದೇಶ ವಿಭಜನೆಯ ಕಥೆ-ವ್ಯಥೆ; ಅಬ್ಬರಿಸಿದ ಸನ್ನಿ ಡಿಯೋಲ್!


Last Updated:

Batwara 1947 Movie: ಸನ್ನಿ ಡಿಯೋಲ್ ಅಬ್ಬರಿಸಿದ್ದಾರೆ. ಬಟ್ವಾರಾ 1947 ಚಿತ್ರದಲ್ಲಿ ಇವರು ದೇಶ ವಿಭಜನೆಯ ಕಥೆ-ವ್ಯಥೆಗೆ ಜೀವ ತುಂಬಿದ್ದಾರೆ. ಈ ಸಿನಿಮಾದ ಟ್ರೈಲರ್ ಅಲ್ಲಿ ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.

ದೇಶ ವಿಭಜನೆಯ ಕಥೆ-ವ್ಯಥೆ; ಅಬ್ಬರಿಸಿದ ಸನ್ನಿ ಡಿಯೋಲ್!
ದೇಶ ವಿಭಜನೆಯ ಕಥೆ-ವ್ಯಥೆ; ಅಬ್ಬರಿಸಿದ ಸನ್ನಿ ಡಿಯೋಲ್!

ಬಾಲಿವುಡ್‌ನ ಬಟ್ವಾರಾ 1947 ಚಿತ್ರದ (Batwara1947 Movie) ಕಂಟೆಂಟ್ ಭಾವ ತೀವ್ರತೆಯಿಂದ ಕೂಡಿದೆ. ಭಾರತ ದೇಶ ವಿಭಜನೆಗೊಂಡಾಗಿನ ಕಥೆ ಮತ್ತು ವ್ಯಥೆಯನ್ನ ಇದು ಹೇಳುತ್ತದೆ. ಆದರೆ, ಕೆಲವು ವಿಚಾರಗಳು ಯಾರಿಗೂ ಗೊತ್ತೇ ಇಲ್ಲ. ಅಂತಹ ಒಂದಷ್ಟು ವಿಷಯಗಳು ಇಲ್ಲಿವೆ. ಶಬಾನಾ ಅಜ್ಮಿ (Shabana Azmi) ಪಾತ್ರ ಇಲ್ಲಿ ಹೃದಯ ತಟ್ಟುತ್ತದೆ. ಸನ್ನಿ ಡಿಯೋಲ್ (Sunny Deol) ಇದರಲ್ಲಿ ಅಬ್ಬರಿಸಿದ್ದಾರೆ. ಪ್ರೀತಿ ಜಿಂಟಾ (Preity Zinta) ಮತ್ತೊಮ್ಮೆ ಸನ್ನಿ ಡಿಯೋಲ್‌ಗೆ ಜೋಡಿ ಆಗಿದ್ದಾರೆ. ಸನ್ನಿ ಡಿಯೋಲ್ ಪುತ್ರ ಕರಣ್ ಮಗನ ಪಾತ್ರವನ್ನೆ ಮಾಡಿದ್ದಾರೆ. ಈ ಒಂದು ಟ್ರೈಲರ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಬಟ್ವಾರಾ 1947 ಸಿನಿಮಾ

ಬಟ್ವಾರಾ ಅಂದ್ರೇನು ಅಂತ ಹೇಳಬೇಕಿಲ್ಲ. ಆದರೆ, ಹಿಂದಿ ಪದದ ಕನ್ನಡದ ಅರ್ಥ ವಿಭಜನೆ ಅಂತಲೇ ಬರುತ್ತದೆ. ಹೆಸರಿಗೆ ತಕ್ಕನಾಗಿಯೇ ಈ ಚಿತ್ರದಲ್ಲಿ ಭಾರತ ದೇಶ ವಿಭಜನೆ ಆದಾಗಿನ ಕತೆ ಇದೆ.

Sunny Deol Preity Zinta Batwara 1947 Movie Trailer Release

ರಾಜ್‌ಕುಮಾರ್ ಸಂತೋಷಿ ಡೈರೆಕ್ಷನ್

ಆ ನೋವಿನ ಕತೆಯನ್ನ ಯಾರೂ ಮರೆಯೋದೇ ಇಲ್ಲ. ಅಷ್ಟು ನೋವು ಇದರಲ್ಲಿ ತುಂಬಿದೆ. ಇಂತಹ ಕತೆಯನ್ನ ಆಮಿರ್ ಖಾನ್ ನಿರ್ಮಾಣ ಮಾಡಿದ್ದಾರೆ. ಸನ್ನಿ ಡಿಯೋಲ್ ಇಲ್ಲಿ ನಾಯಕರಾಗಿದ್ದಾರೆ. ಪ್ರೀತಿ ಜಿಂಟಾ ಪತ್ನಿ ಪಾತ್ರದಲ್ಲಿ ಸಾಥ್ ಕೊಟ್ಟಿದ್ದಾರೆ.

ಲಾಹೋರ್ ಅಲ್ಲಿ ನಡೆಯೋ ಕತೆ

ಭಾರತ ವಿಭಜನೆ ಆದಾಗ ಸಾಕಷ್ಟು ನೋವುಗನ್ನೆ ಅನೇಕರು ಅನುಭವಿಸಿದ್ದಾರೆ. ಪಾಕಿಸ್ತಾನದಲ್ಲಿದ್ದ ಭಾರತೀಯರು, ಭಾರತದಲ್ಲಿದ್ದ ಪಾಕಿಸ್ತಾನಿಗಳು ಹೀಗೆ ಎರಡೂ ಕಡೆಗೂ ಇದ್ದ ಜನರು ಸಾವು-ನೋವುಗಳನ್ನ ಅನುಭವಿಸಿದ್ದಾರೆ.

ಭಾರತ ದೇಶ ಹಿಂದೂಗಳಿಗೆ ಮಾತ್ರ ಇದೆ. ಇದು ಮುಸ್ಲಿಮರಿಗೆ ಅಲ್ವೇ ಅಲ್ಲ ಅನ್ನುವ ಮಾತುಗಳು ಆಗ ಬಂದಿದ್ದವು. ಈ ಒಂದು ಸತ್ಯವನ್ನ ಬಟ್ವಾರಾ 1947 ಚಿತ್ರದ ಟ್ರೈಲರ್ ತೋರಿಸುತ್ತದೆ.

ಸನ್ನಿ ಡಿಯೋಲ್ ಅಬ್ಬರ

ಈ ಚಿತ್ರದಲ್ಲಿ ಶಬಾನಾ ಅಜ್ಮಿ ಪಾತ್ರ ತುಂಬಾನೆ ಭಾವತೀವ್ರತೆಯಿಂದಲೇ ಕೂಡಿದೆ. ದೇಶ ವಿಭಜನೆ ಆದ್ಮೇಲೆ ಭಾರತದಿಂದ ಪಾಕಿಸ್ತಾನಕ್ಕೆ ಸನ್ನಿ ಡಿಯೋಲ್ ಕುಟುಂಬ ಹೋಗುತ್ತದೆ.

Sunny Deol Preity Zinta Batwara 1947 Movie Trailer Release

ಲಾಹೋರ್ ಅಲ್ಲಿ ನಡೆಯೋ ಕತೆ

ಅಲ್ಲಿದ್ದ ಹಿಂದೂ ಮನೆಯನ್ನ ಈ ಫ್ಯಾಮಿಲಿಗೆ ಕೊಟ್ಟಿರುತ್ತಾರೆ. ಆದರೆ, ಆ ಮನೆಯಲ್ಲಿ ಈ ಮೊದಲೇ ಇದ್ದ ಹಿಂದೂ ಫ್ಯಾಮಿಲಿಯ ಅಜ್ಜಿ ಹೋಗಿರೋದೇ ಇಲ್ಲ.

ರಾಜ್‌ಕುಮಾರ್ ಸಂತೋಷಿ ಡೈರೆಕ್ಷನ್

ಈ ಚಿತ್ರವನ್ನ ರಾಜ್‌ಕುಮಾರ್ ಸಂತೋಷಿ ಡೈರೆಕ್ಷನ್ ಮಾಡಿದ್ದಾರೆ. ಇವರೇ ಈ ಚಿತ್ರಕ್ಕೆ ಚಿತ್ರಕತೆನೂ ಬರೆದಿದ್ದಾರೆ. ಅಸ್ಗರ್ ವಜಾಹತ್ ಹಾಗೂ ರಾಜಕುಮಾರ್ ಸಂತೋಷಿ ಈ ಕಥೆಯನ್ನ ಮಾಡಿದ್ದಾರೆ.

ಈ ಚಿತ್ರವನ್ನ ಆಮಿರ್ ಖಾನ್ ಅವರು ನಿರ್ಮಿಸಿದ್ದಾರೆ. ಮುಂದಿನ ತಿಂಗಳು ಆಗಸ್ಟ್-14 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಮ್ಯೂಸಿಕ್ ಮಾಡಿದ್ದಾರೆ.

ಸಂತೋಷ್ ಶಿವನ್ ಕ್ಯಾಮರಾವರ್ಕ್ ಮಾಡಿದ್ದಾರೆ. ಸನ್ನಿ ಡಿಯೋಲ್ ಪುತ್ರ ಕರಣ್ ಡಿಯೋಲ್ ಈ ಚಿತ್ರದಲ್ಲಿ ಮಗನ ರೋಲ್ ಮಾಡಿದ್ದಾರೆ. ಪ್ರೀತಿ ಜಿಂಟಾ ಮತ್ತು ಸನ್ನಿ ಡಿಯೋಲ್ ಈ ಚಿತ್ರದ ಮೂಲಕ ಮತ್ತೊಮ್ಮೆ ಜೋಡಿ ಆಗಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports