Ashwini Gowda: ಕನ್ನಡ ಸ್ಟಾರ್‌ಗಳಲ್ಲಿ ಸಿಎಂ ಆಗುವ ಅರ್ಹತೆ ಯಾರಿಗೆ? ಅಚ್ಚರಿ ಹೇಳಿಕೆ ನೀಡಿದ ಅಶ್ವಿನಿ ಗೌಡ | | ACTPnews

ಆ ಒಂದು ಹೆಸರು ಹೇಳಿದ ಬಿಗ್ ಬಾಸ್ ಅಶ್ವಿನಿ ಗೌಡ!


Last Updated:

ತಮಿಳುನಾಡು ಸಿ.ಎಂ. ದಳಪತಿ ವಿಜಯ್ ತರ ಕನ್ನಡದಲ್ಲಿ ಯಾರು ರಾಜಕೀಯಕ್ಕೆ ಬರಬೇಕು. ಸಿ.ಎಂ. ಯಾರ್ ಆಗ್ಬೇಕು? ಈ ಪ್ರಶ್ನೆಗೆ ಬಿಗ್ ಬಾಸ್ ಖ್ಯಾತಿಯ ನಟಿ ಅಶ್ವಿನಿ ಗೌಡ ಇಂಟ್ರಸ್ಟಿಂಗ್ ಹೆಸರನ್ನೆ ಹೇಳಿದ್ದಾರೆ. ಅದ್ಯಾರು ಅನ್ನೋದು ಇಲ್ಲಿದೆ ಓದಿ.

ಆ ಒಂದು ಹೆಸರು ಹೇಳಿದ ಬಿಗ್ ಬಾಸ್ ಅಶ್ವಿನಿ ಗೌಡ!
ಆ ಒಂದು ಹೆಸರು ಹೇಳಿದ ಬಿಗ್ ಬಾಸ್ ಅಶ್ವಿನಿ ಗೌಡ!

ಕನ್ನಡ ಸ್ಟಾರ್ ನಟರಲ್ಲಿ (Kannada Stars) ಯಾರು ರಾಜಕೀಯಕ್ಕೆ (Politics) ಬರಬೇಕು. ಬಂದು ಯಾರು ಸಿ.ಎಂ. ಆಗ್ಬೇಕು. ಈ ಪ್ರಶ್ನೆಗಳನ್ನ ಪತ್ರಕರ್ತರು ಬಿಗ್ ಬಾಸ್ (Bigg Boss) ಖ್ಯಾತಿಯ ನಟಿ ಅಶ್ವಿನಿ ಗೌಡ (Ashwini Gowda) ಅವರಿಗೆ ಕೇಳಿದ್ದಾರೆ. ಇದಕ್ಕೆ ಅಶ್ವಿನಿ ಗೌಡ ಒಂದು ಹೆಸರು ಹೇಳಿದ್ದಾರೆ. ಈ ಒಂದು ಹೆಸರು ಆಗಾಗ ಕೇಳಿ ಬರ್ತಾನೇ ಇರುತ್ತದೆ. ಆ ಹೆಸರನ್ನೆ ಅಶ್ವಿನಿ ಗೌಡ ಹೇಳಿದ್ದಾರೆ. ಅದ್ಯಾರು ಅನ್ನೋದು ಇಲ್ಲಿದೆ ಓದಿ.

ಯಾವ್ ಸ್ಟಾರ್ ಸಿ.ಎಂ. ಆಗ್ಬೇಕು

ಯಾವ್ ಸ್ಟಾರ್ ಸಿ.ಎಂ. ಆಗ್ಬೇಕು? ಈ ಒಂದು ಪ್ರಶ್ನೆಯನ್ನ ಬಹುಶಃ ಅಶ್ವಿನಿ ಅವರು ನಿರೀಕ್ಷೆ ಮಾಡಿರಲಿಲ್ಲ ಅನಿಸುತ್ತದೆ. ಅದಕ್ಕೇನೆ ಅವರು ಕನ್ನಡ ಸ್ಟಾರ್‌ಗಳಲ್ಲಿ ಯಾರು ಸಿ.ಎಂ. ಆಗ್ಬೇಕು.? ಯಾರು ರಾಜಕೀಯಕ್ಕೆ ಬರಬೇಕು ಅನ್ನೋದನ್ನೆ ಪತ್ರಕರ್ತರು ಅಶ್ವಿನಿ ಗೌಡ ಅವರಿಗೆ ಕೇಳಿದ್ದಾರೆ.
bigg boss ashwini gowda statement on actor darshan entering kannada politics

ಆ ಒಂದು ಹೆಸರು ಹೇಳಿದ ಬಿಗ್ ಬಾಸ್ ಅಶ್ವಿನಿ ಗೌಡ

(ಚಿತ್ರ ಕೃಪೆ: ಅಶ್ವಿನಿ ಗೌಡ ಇನ್‌ಸ್ಟಾಗ್ರಾಮ್)

ಈ ಪ್ರಶ್ನೆಗೆ ಅಶ್ವಿನಿ ಗೌಡ ಅವರು ಮೊದಲು ಕನ್ನಡ ಹೋರಾಟಗಾರ ನಾರಾಯಣ ಗೌಡರ ಹೆಸರನ್ನೆ ತೆಗೆದುಕೊಂಡಿದ್ದಾರೆ. ಅವರು ಕನ್ನಡಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಅವರೇ ಸಿ.ಎಂ. ಆಗ್ಲಿ ಬಿಡಿ. ಯಾರು ಬೇಡ ಅನ್ನೋದಿಲ್ಲ. ಹೀಗೇನೆ ಮೊದಲು ಹೇಳಿದರು.

ವಿಜಯ್ ತರ ಯಾರ್ ಆಗ್ಬೇಕು ಇಲ್ಲಿ..

ಕನ್ನಡ ಸಿನಿಮಾರಂಗ ಅಂತ ಬಂದ್ರೆ ಇಲ್ಲಿ ಯಾವ ಸ್ಟಾರ್ ರಾಜಕೀಯಕ್ಕೆ ಬರಬೇಕು? ದಳಪತಿ ವಿಜಯ್ ತರವೇ ಯಾರು ಸಿ.ಎಂ. ಆಗ್ಬೇಕು ಅಂತಲೇ ಪತ್ರಕರ್ತರು ಮತ್ತೆ ಪ್ರಶ್ನೆ ಮಾಡ್ತಾರೆ.

ಆಗಲೇ ಒಂದಷ್ಟು ಯೋಚನೆ ಮಾಡಿದ ಅಶ್ವಿನಿ ಅವರು ಒಂದು ಹೆಸರು ತೆಗೆದುಕೊಳ್ಳುತ್ತಾರೆ. ಆ ಹೆಸರು ತೆಗೆದುಕೊಳ್ಳುವುದು ಅಲ್ಲದೆ ಅವರು ರಾಜಕೀಯಕ್ಕೆ ಬಂದ್ರೆ ಚೆನ್ನಾಗಿರುತ್ತದೆ ಅಂತಲೇ ಖುಷಿಯಿಂದಲೇ ಹೇಳಿಕೊಳ್ಳುತ್ತಾರೆ.

bigg boss ashwini gowda statement on actor darshan entering kannada politics

ಕನ್ನಡ ಸ್ಟಾರ್‌ಗಳಲ್ಲಿ ಯಾರು ಸಿ.ಎಂ. ಆಗ್ಬೇಕು

(ಚಿತ್ರ ಕೃಪೆ: ಅಶ್ವಿನಿ ಗೌಡ ಇನ್‌ಸ್ಟಾಗ್ರಾಮ್)

ಅಶ್ವಿನಿ ಹೇಳಿದ ಆ ಹೆಸರು ಯಾವುದು

ಅಶ್ವಿನಿ ಗೌಡ ಅವರು ತೆಗೆದುಕೊಂಡ ಹೆಸರು ಯಾವುದು? ಇವರು ಯೋಚನೆ ಏನೋ ಮಾಡಿದರು. ಆದರೆ, ಎರಡು ಆಫ್ಷನ್ ತರ ಏನೂ ಹೇಳೋಕೆ ಹೋಗ್ಲಿಲ್ಲ. ಬದಲಾಗಿ, ನೇರವಾಗಿಯೇ ಒಂದೇ ಹೆಸರನ್ನ ಹೇಳಿದರು.

ಸೆಲೆಬ್ರಿಟಿಗಳನ್ನ ವಿಲನ್ ಥರ ನೋಡ್ತಾರೆ

ಮೈಸೂರಿಗೆ ಅಶ್ವಿನಿ ಗೌಡ ಅವರು ಬರ್ತಾನೇ ಇರ್ತಾರೆ. ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಅಶ್ವಿನಿ ಗೌಡ ಮೊದಲು ಮೈಸೂರಿಗೆ ಬಂದರು. ಚಾಮುಂಡಿ ಬೆಟ್ಟಕ್ಕೆ ಬಂದು ತಾಯಿ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದುಕೊಂಡರು.

bigg boss ashwini gowda statement on actor darshan entering kannada politics

ಅಶ್ವಿನಿ ಹೇಳಿದ ಆ ಹೆಸರು

ಹಾಗೆ ಆಷಾಢ ಶುಕ್ರವಾರ ಅಂತ ಜುಲೈ-24 ರಂದು ಇವರು ಮೈಸೂರಿಗೆ ಬಂದಿದ್ದರು. ತಾಯಿಯ ಚಾಮುಂಡೇಶ್ವರಿಯ ದರ್ಶನ ಪಡೆದುಕೊಂಡಿದ್ದಾರೆ. ಆ ಬಳಿಕ ಮಾಧ್ಯಮಗಳಿಗೂ ಮಾತನಾಡಿದ್ದಾರೆ. ಸೆಲೆಬ್ರಿಟಿಗಳನ್ನ ಬೆಟ್ಟದಲ್ಲಿ ಜನ ವಿಲನ್ ತರವೇ ನೋಡ್ತಾರೆ.

ಕಾರಣ, ಅವರಿಗಿಂತಲೂ ಐದು ನಿಮಿಷ ಮುಂಚೆಯಷ್ಟೆ ನಾವು ತಾಯಿ ದರ್ಶನ ಮಾಡುತ್ತೇವೆ. ಸಾಮಾನ್ಯ ಜನರಂತೆ ನಾವು ಸರದಿ ಸಾಲಿನಲ್ಲಿ ನಿಂತುಕೊಂಡು ತಾಯಿ ದರ್ಶನ ಪಡೆದಿರುತ್ತೇವೆ ಅಂತಲೇ ಹೇಳಿದ್ದಾರೆ. ಇನ್ನುಳಿದಂತೆ ಇದೆ ಸಮಯದಲ್ಲಿಯೇ ದರ್ಶನ್ ರಾಜಕೀಯಕ್ಕೆ ಬರಬೇಕು ಅನ್ನೋದನ್ನು ಅಶ್ವಿನಿ ಗೌಡ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed