Ravneet Singh Bittu: ಕೇಂದ್ರ ಸಚಿವ ದಿಢೀರ್ ರಾಜೀನಾಮೆ! ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರವನೀತ್​ ಸಿಂಗ್​ ಬಿಟ್ಟು


Last Updated:

ದೇಶಾದ್ಯಂತ ನೀಟ್‌ ಜ್ವಾಲೆ ಧಗಧಗಿಸ್ತಿದೆ. ಪರಿಸ್ಥಿತಿ ಹೀಗಿರುವಾಗಲೇ ರೈಲ್ವೆ ಖಾತೆ ರಾಜ್ಯ ಸಚಿವ ತಮ್ಮ ರಾಜೀನಾಮೇ ನೀಡಿದ್ದಾರೆ.

ರವನೀತ್​ ಸಿಂಗ್​ ಬಿಟ್ಟು
ರವನೀತ್​ ಸಿಂಗ್​ ಬಿಟ್ಟು

ದೇಶಾದ್ಯಂತ ನೀಟ್‌ ಜ್ವಾಲೆ ಧಗಧಗಿಸ್ತಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆಗೆ ಕಾಕ್ರೋಚ್​ ಪಾರ್ಟಿ ಹಾಗೂ ಕಾಂಗ್ರೆಸ್‌‌ ಬಿಗಿ ಪಟ್ಟು ಹಿಡಿದಿದೆ. ಪರಿಸ್ಥಿತಿ ಹೀಗಿರುವಾಗಲೇ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು (Ravneet Singh Bittu) ತಮ್ಮ ಹುದ್ದೆಗೆ ರಾಜೀನಾಮೆ (Resignation) ನೀಡಿದ್ದಾರೆ. ಜಾರ್ಜ್ ಕುರಿಯನ್ ನಂತರ ಒಂದು ತಿಂಗಳಿನಲ್ಲಿ ಇದು ಎರಡನೇ ಪ್ರಮುಖ ರಾಜೀನಾಮೆಯಾಗಿದ್ದು, ಮೋದಿ ಸಂಪುಟದಲ್ಲಿ ಪ್ರಮುಖ ಕಾರ್ಯತಂತ್ರದ ಬದಲಾವಣೆಯನ್ನು ಸೂಚಿಸುತ್ತಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಸಿಂಗ್ ಬಿಟ್ಟು ಮುಂದಿನ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂಬ ಊಹಾಪೋಹಗಳ ನಡುವೆ ಶುಕ್ರವಾರ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಂಜಾಬ್ ಬಿಜೆಪಿ ನಾಯಕನ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶುಕ್ರವಾರ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಪ್ರಕಟಣೆಯಲ್ಲಿ ತಿಳಿಸಿದೆ.

ರವನೀತ್​ ಸಿಂಗ್​ ಬಿಟ್ಟು ಅವರು ರಾಜೀನಾಮೆಗೆ ಅಧಿಕೃತ ಕಾರಣವನ್ನು ನೀಡಲಾಗಿಲ್ಲವಾದರೂ, ಪಂಜಾಬ್ ವಿಧಾನಸಭಾ ಚುನಾವಣೆಯ ನಂತರ ರವನೀತ್​​ ಸಿಂಗ್​ ಬಿಟ್ಟು ರಾಜ್ಯ ರಾಜಕೀಯಕ್ಕೆ ಮತ್ತೆ ಪ್ರವೇಶಿಸಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ರವನೀತ್ ಸಿಂಗ್ ಅವರ ರಾಜ್ಯಸಭಾ ಅವಧಿ ಮುಗಿದ ನಂತರ ಹೈಕಮಾಂಡ್ ಅವರಿಗೆ ಹೊಸ ಪಾತ್ರವನ್ನು ಈಗಾಗಲೇ ಗುರುತಿಸಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವ ಹಿನ್ನೆಲೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ರವನೀತ್​ ಸಿಂಗ್​ ಬಿಟ್ಟು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎನ್ನಲಾಗಿದೆ.

2027 ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಬಿಜೆಪಿ ಸರ್ಕಾರ ರಚಿಸುತ್ತದೆ ಎಂದು ರವನೀತ್​ ಬಿಟ್ಟು ಈ ಹಿಂದೆ ವಿಶ್ವಾಸ ವ್ಯಕ್ತಪಡಿಸಿದ್ದರು. ‘ಪಂಜಾಬ್‌ನಲ್ಲಿ ಡಬಲ್ ಎಂಜಿನ್ ಸರ್ಕಾರವನ್ನು ತರುವುದು ಮತ್ತು ನಮ್ಮ ರಾಜ್ಯವನ್ನು ಸಮೃದ್ಧಗೊಳಿಸುವುದು ನಮ್ಮ ಗುರಿಯಾಗಿದೆ. ಏಕತೆ, ಶಿಸ್ತು ಮತ್ತು ಪಂಜಾಬ್‌ನ ಅಭಿವೃದ್ಧಿಯ ಬಲವಾದ ಸಂದೇಶ. ಇಡೀ ಪಕ್ಷದ ನಾಯಕತ್ವವು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಪಂಜಾಬ್‌ನ ಪ್ರತಿಯೊಂದು ವಿಧಾನಸಭಾ ಕ್ಷೇತ್ರ ಮತ್ತು ಪ್ರತಿಯೊಬ್ಬ ಕಾರ್ಯಕರ್ತರಿಗೆ ತಲುಪಿಸಲು ಸಂಪೂರ್ಣವಾಗಿ ಬದ್ಧವಾಗಿದೆ’ ಎಂದು ಹೇಳಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed