City Lights Movie: ಕಂದಮ್ಮ ಹಾಡಿನಲ್ಲಿ ವಿನಯ್-ಮೋನಿಷಾ ಕೆಮಿಸ್ಟ್ರಿ, ಸಿಟಿ ಲೈಟ್ಸ್ ಲವ್ಲಿ ಟ್ರ್ಯಾಕ್ ಔಟ್! | | ACTPnews

ವಿನಯ್-ಮೋನಿಷಾ ಸಖತ್ ಕೆಮೆಸ್ಟ್ರಿ; ಸಿಟಿ ಲೈಟ್ಸ್ ಲವ್ಲಿ ಟ್ರ್ಯಾಕ್ ಔಟ್!


Last Updated:

ದುನಿಯಾ ವಿಜಯ್ ಚಿಕ್ಕ ಮಗಳು ಮೋನಿಷಾ ವಿಜಯ್‌ ಕುಮಾರ್ ನಟನೆಯ ಫಸ್ಟ್ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಕಂದಮ್ಮ ಕಂದಮ್ಮ ಅನ್ನುವ ಈ ಹಾಡಿನಲ್ಲಿ ನಾಯಕ ನಟ ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ಕೆಮಿಸ್ಟ್ರಿ ಸಖತ್ ಆಗಿಯೇ ವರ್ಕ್ ಆಗಿದೆ. ಸಿಟಿ ಲೈಟ್ಸ್ ಚಿತ್ರದ ಈ ಲವ್ಲಿ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ವಿನಯ್-ಮೋನಿಷಾ ಸಖತ್ ಕೆಮೆಸ್ಟ್ರಿ; ಸಿಟಿ ಲೈಟ್ಸ್ ಲವ್ಲಿ ಟ್ರ್ಯಾಕ್ ಔಟ್!
ವಿನಯ್-ಮೋನಿಷಾ ಸಖತ್ ಕೆಮೆಸ್ಟ್ರಿ; ಸಿಟಿ ಲೈಟ್ಸ್ ಲವ್ಲಿ ಟ್ರ್ಯಾಕ್ ಔಟ್!

ದುನಿಯಾ ವಿಜಯ್ (Duniya Vijay) ಅವರ ಚಿಕ್ಕಮಗಳು ಮೋನಿಷಾ ವಿಜಯ್‌ ಕುಮಾರ್ (Monisha Vijay Kumar) ಅಭಿನಯದ ಸಿಟಿ ಲೈಟ್ಸ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ದೊಡ್ಮನೆಯ ವಿನಯ್ ರಾಜ್‌ಕುಮಾರ್ (Vinay Rajkumar) ಜೋಡಿ ಆಗಿದ್ದಾರೆ. ಇವರ ಕೆಮಿಸ್ಟ್ರಿ ಸಖತ್ ಆಗಿಯೇ ವರ್ಕೌಟ್ ಆಗಿದೆ. ಅದು ಕಂದಮ್ಮ ಕಂದಮ್ಮ ಹಾಡಿನಲ್ಲಿಯೇ (Kandamma Kandamma Song) ರಿವೀಲ್ ಆಗಿದೆ. ಈ ಹಾಡಿನ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.

ಕಂದಮ್ಮ ಕಂದಮ್ಮ ಸಾಂಗ್

ಸಿಟಿ ಲೈಟ್ಸ್ ಚಿತ್ರದ ಕಂದಮ್ಮ ಕಂದಮ್ಮ ಹಾಡು ರಿಲೀಸ್ ಆಗಿದೆ. ಇದರಲ್ಲಿ ವಿನಯ್ ರಾಜ್‌ಕುಮಾರ್ ಹಾಗೂ ಮೋನಿಷಾ ವಿಜಯ್ ಕುಮಾರ್ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಆಗಿದೆ.
Duniya Vijay Daughter Monisha Vijay Kumar Vinay Rajkumar City Lights Kandamma Song Release

ಸಿಟಿ ಲೈಟ್ಸ್ ಅಲ್ಲಿ ಏನಿದೆ

ಮೊದಲ ಚಿತ್ರದಲ್ಲಿಯೇ ದುನಿಯಾ ವಿಜಯ್ ಮಗಳು ಮೋನಿಷಾ ತುಂಬಾನೆ ಚೆನ್ನಾಗಿ ಅಭಿನಯಿಸಿದ್ದಾರೆ. ಒಳ್ಳೆ ಎಕ್ಸಪ್ರೆಷನ್ ಕೂಡ ಕೊಟ್ಟಿದ್ದಾರೆ. ಅದು ಈ ಹಾಡಿನಲ್ಲಿಯೇ ಗೊತ್ತಾಗುತ್ತದೆ.

ಸಾಮಾನ್ಯ ಮನೆಯ ಹೆಣ್ಣುಮಗಳಾಗಿಯೇ ಮೋನಿಷಾ ವಿಜಯ್‌ಕುಮಾರ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯ್ ರಾಜ್‌ಕುಮಾರ್ ಕೂಡ ಅಷ್ಟೆ ಚೆನ್ನಾಗಿಯೇ ಸಾಥ್ ಕೊಟ್ಟಿದ್ದಾರೆ.

ಕಂದಮ್ಮ ಹಾಡಿನಲ್ಲಿ ಲವ್ಲಿ ಸ್ಟೋರಿ

ಚಿತ್ರದ ಈ ಕಂದಮ್ಮ ಹಾಡಿನಲ್ಲಿ ಒಂದು ಸ್ಟೋರಿ ಇದೆ. ಅದು ವಿನಯ್ ಮತ್ತು ಮೋನಿಷಾ ವಿಜಯ್‌ ಕುಮಾರ್ ಅವರ ಲವ್ ಸ್ಟೋರಿನೇ ಆಗಿದೆ.

ಹಾಗಾಗಿಯೇ ಇದು ಅಷ್ಟೆ ಚೆನ್ನಾಗಿಯೇ ಕಾಣಿಸುತ್ತಿದೆ. ತುಂಬಾನೆ ಸಹಜವಾಗಿಯೇ ಈ ಒಂದು ಗೀತೆ ಬಂದಿವೆ. ದುನಿಯಾ ವಿಜಯ್ ಈ ಒಂದು ಹಾಡನ್ನ ಚೆನ್ನಾಗಿಯೇ ಪ್ಲಾನ್ ಮಾಡಿದ್ದಾರೆ. ಅಷ್ಟೆ ನೀಟ್ ಆಗಿಯೇ ಕನ್ವೆ ಆಗುವ ಹಾಗೇನೆ ಇದನ್ನ ಎಡಿಟಿಂಗ್ ಕೂಡ ಮಾಡಲಾಗಿದೆ.

ನಾಗಾರ್ಜುನ್ ಶರ್ಮಾ ಸಾಹಿತ್ಯ

ಕಂದಮ್ಮ ಅನ್ನುವ ಹಾಡನ್ನ ನಾಗಾರ್ಜುನ್ ಶರ್ಮಾ ಅವರು ಬರೆದಿದ್ದಾರೆ. ಸಂಜಿತ್‌ ಹೆಗಡೆ ಇದನ್ನ ಹಾಡಿದ್ದಾರೆ. ವಿಶೇಷವೆಂದ್ರೆ ನಾಗಾರ್ಜುನ್ ಶರ್ಮಾ ಪತ್ನಿ ವೈಭವಿ ಈ ಹಾಡನ್ನ ರಿಲೀಸ್ ಮಾಡಿದ್ದಾರೆ. ಈ ಒಂದು ಚಿತ್ರಕ್ಕೆ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ.

Duniya Vijay Daughter Monisha Vijay Kumar Vinay Rajkumar City Lights Kandamma Song Release

ಮೋನಿಷಾ ವಿಜಯ್ ಫಸ್ಟ್ ಸಿನಿಮಾ

ದುನಿಯಾ ವಿಜಯ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ನಿರ್ಮಾಣವನ್ನು ಕೂಡ ಮಾಡಿದ್ದಾರೆ. ಆದರೆ, ವಿಕ್ರಮ್ ಆರ್ಯ ಅವರು ಕೂಡ ಈ ಚಿತ್ರದ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ.

ಸಿಟಿ ಲೈಟ್ಸ್ ಅಲ್ಲಿ ಏನಿದೆ

ದುನಿಯಾ ವಿಜಯ್ ಈ ಚಿತ್ರದಲ್ಲಿ ವಾಸ್ತವಕ್ಕೆ ಹತ್ತಿರವಾದ ವಿಷಯವನ್ನ ಹೇಳುತ್ತಿದ್ದಾರೆ. ಡೈಲಾಗ್ ರೈಟರ್ ಮಾಸ್ತಿ ಅವರು ಈ ಚಿತ್ರಕ್ಕೂ ಕೆಲಸ ಮಾಡಿದ್ದಾರೆ.

ಮೋನಿಷಾ ವಿಜಯ್ ಫಸ್ಟ್ ಸಿನಿಮಾ

ಮೋನಿಷಾ ವಿಜಯ್ ಅಭಿನಯದ ಮೊದಲ ಚಿತ್ರ ಇದಾಗಿದೆ. ವಿದೇಶದಲ್ಲಿ ಸಿನಿಮಾ ಕಲಿತು ಬಂದ್ಮೇಲೆ ಇದೇ ಫಸ್ಟ್ ಟೈಮ್ ಬೆಳ್ಳಿ ತೆರೆ ಮೇಲೆ ಬರ್ತಿದ್ದಾರೆ.

ಮೊದಲ ನಟನೆಯ ಚಿತ್ರದಲ್ಲಿ ಅಪ್ಪನೆ ಡೈರೆಕ್ಟರ್ ಅನ್ನೋದು ವಿಶೇಷವೇ ಆಗಿದೆ. ಈ ಚಿತ್ರದಲ್ಲಿ ಮೋನಿಷಾ ವಿಜಯ್ ಕುಮಾರ್ ಸಾಮಾನ್ಯ ಹುಡುಗಿಯ ರೋಲ್ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಜೋಡಿಯಾಗಿಯೇ ಕಂಗೊಳಿಸುತ್ತಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports