IND vs ENG: ಡಕೆಟ್ ಶತಕವಲ್ಲ, ಕೇವಲ ಮೂರು ಓವರ್‌ಗಳಿಂದ ನಾವು ಸರಣಿ ಕಳೆದುಕೊಂಡೆವು: ಭಾರತದ ಸೋಲಿಗೆ ಶುಭ್​ಮನ್ ಗಿಲ್ ಕೊಟ್ಟ ಕಾರಣವಿದು | ಕ್ರೀಡಾ ಸುದ್ದಿ | ACTPnews

ಶುಭ್​​ಮನ್ ಗಿಲ್


Last Updated:

ಸರಣಿ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಭಾರತದ ಕಳಪೆ ಬೌಲಿಂಗ್‌ನಿಂದಾಗಿ 387 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಕೇವಲ 360 ರನ್‌ಗಳನ್ನು ಗಳಿಸಿ ಪಂದ್ಯವನ್ನು ಸೋತಿತು. ರೋಹಿತ್ ಶರ್ಮಾ (138) ಅವರ ಅಬ್ಬರದ ಶತಕ ಮತ್ತು ಶುಭಮನ್ ಗಿಲ್ (77) ಮತ್ತು ವಿರಾಟ್ ಕೊಹ್ಲಿ (74) ಅವರ ಸೂಪರ್ ಅರ್ಧಶತಕಗಳ ಹೊರತಾಗಿಯೂ, ತಂಡವು ಗೆಲುವು ಸಾಧಿಸಲು ವಿಫಲವಾಯಿತು.

ಶುಭ್​​ಮನ್ ಗಿಲ್
ಶುಭ್​​ಮನ್ ಗಿಲ್

ಭಾರತ ತಂಡ ಯುರೋಪ್​ ಪ್ರವಾಸವನ್ನ ಬಹಳಷ್ಟು ಕೆಟ್ಟದಾಗಿ ಮುಗಿಸಿದೆ. ಪ್ರವಾಸದ ಆರಂಭದಲ್ಲಿ ಐರ್ಲೆಂಡ್ (Ireland)​ ವಿರುದ್ಧ 2 ಪಂದ್ಯಗಳ ಟಿ20 ಸರಣಿ (T20 Series) ಸೋತರೆ, ನಂತರ 5 ಪಂದ್ಯಗಳ ಟಿ20 ಸರಣಿಯನ್ನ 0-4ರಲ್ಲಿ ಕಳೆದುಕೊಂಡಿತ್ತು. ಇದೀಗ ಏಕದಿನ ಸರಣಿಯನ್ನೂ 1-2ರಲ್ಲಿ ಸೋಲು ಕಂಡಿದೆ. ಅಂದರೆ ಇಡೀ ಪ್ರವಾಸದಲ್ಲಿ ಕೇವಲ ಒಂದೇ ಒಂದು ಜಯದೊಂದಿಗೆ ಟೀಮ್ ಇಂಡಿಯಾ ಯುಕೆ ಪ್ರವಾಸವನ್ನ ಮುಗಿಸಿದೆ. ಭಾನುವಾರ ನಡೆದ ಏಕದಿನ ಸರಣಿ (ODI Series) ಕೊನೆಯ ಪಂದ್ಯದಲ್ಲಿ ಭಾರತ ತಂಡ 27 ರನ್​ಗಳಿಂದ ಸೋಲು ಕಂಡಿತು. ಈ ಸೋಲಿಗೆ ಕೊನೆಯ ಮೂರು ಓವರ್‌ಗಳ ಬೌಲಿಂಗ್ ನಮ್ಮ ಸೋಲಿಗೆ ಕಾರಣವಾಯಿತು ನಿರ್ಧರಿಸಿತು ಎಂದು ಭಾರತ ತಂಡದ ಏಕದಿನ ತಂಡದ ನಾಯಕ ಶುಭ್​ಮನ್ ಗಿಲ್ ಹೇಳಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಭಾರತದ ಕಳಪೆ ಬೌಲಿಂಗ್‌ನಿಂದಾಗಿ 387 ರನ್‌ಗಳ ಬೃಹತ್ ಗುರಿಯನ್ನು ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಕೇವಲ 360 ರನ್‌ಗಳನ್ನು ಗಳಿಸಿ ಪಂದ್ಯವನ್ನು ಸೋತಿತು. ರೋಹಿತ್ ಶರ್ಮಾ (138) ಅವರ ಅಬ್ಬರದ ಶತಕ ಮತ್ತು ಶುಭಮನ್ ಗಿಲ್ (77) ಮತ್ತು ವಿರಾಟ್ ಕೊಹ್ಲಿ (74) ಅವರ ಸೂಪರ್ ಅರ್ಧಶತಕಗಳ ಹೊರತಾಗಿಯೂ, ತಂಡವು ಗೆಲುವು ಸಾಧಿಸಲು ವಿಫಲವಾಯಿತು.

ಆ ಮೂರು ಓವರ್‌ಗಳನ್ನು ಚೆನ್ನಾಗಿ ಮಾಡಬೇಕಿತ್ತು

ಪಂದ್ಯದ ನಂತರದ ಸೋಲಿನ ಬಗ್ಗೆ ಮಾತನಾಡಿದ ಶುಭ್​ಮನ್ ಗಿಲ್, ಅಂತಿಮ ಮೂರು ಓವರ್‌ಗಳಲ್ಲಿ ಅವರು ಕಟ್ಟುನಿಟ್ಟಾಗಿ ಬೌಲಿಂಗ್ ಮಾಡಿದ್ದರೆ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. “ಈ ಪಂದ್ಯದಲ್ಲಿ ನಾವು 45 ನೇ ಓವರ್‌ವರೆಗೆ ಉತ್ತಮವಾಗಿ ಮಾಡಿದ್ದೆವು. ಆದರೆ ನಮ್ಮ ಬೌಲಿಂಗ್ ಸ್ಪೆಲ್‌ನ ಕೊನೆಯ ಮೂರು ಓವರ್‌ಗಳಲ್ಲಿ ನಾವು 60 ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟೆವು. ಅಲ್ಲಿಯೇ ಪಂದ್ಯ ನಮ್ಮ ಕೈಯಿಂದ ಜಾರಿತು.

ನಮ್ಮ ಪ್ಲಾನ್ ಕೈಕೊಟ್ಟಿತು

ಆದರೂ ರನ್ ಚೇಸ್ ಸಮಯದಲ್ಲಿ ನಾವು ಕಠಿಣ ಹೋರಾಟ ನಡೆಸಿದೆವು. 40 ಓವರ್‌ಗಳ ನಂತರ ನಮ್ಮ ಕೈಯಲ್ಲಿ ವಿಕೆಟ್‌ಗಳಿದ್ದರೆ, ನಾವು ಗೆಲ್ಲಬಹುದಿತ್ತು. ದೊಡ್ಡ ಗುರಿ ಬೆನ್ನಟ್ಟಿದರೂ, ನಾವು ಯಾವುದೇ ಹಂತದಲ್ಲೂ ಸೋಲನ್ನು ಒಪ್ಪಿಕೊಳ್ಳಲಿಲ್ಲ. ಅದಕ್ಕಾಗಿಯೇ ಪವರ್‌ಪ್ಲೇ ನಂತರ ಆಕ್ರಮಣಕಾರಿಯಾಗಿ ಆಡಲು ಪ್ರಯತ್ನಿಸಿದೆವು. ನಾವು ಈ ರೀತಿ ಆಡಿದರೆ ಮತ್ತು ಕೊನೆಯ 10 ಓವರ್‌ಗಳಲ್ಲಿ 100–110 ರನ್‌ಗಳ ಅಗತ್ಯವಿದ್ದರೆ, ನಾವು ಪಂದ್ಯವನ್ನು ಗೆಲ್ಲಬಹುದು ಎಂದು ಭಾವಿಸಿ, ಸುಮಾರು 6 ರಿಂದ 6.5 ರ ರನ್‌ರೇಟ್ ಅನ್ನು ಕಾಯ್ದುಕೊಂಡೆವು. ಆದರೆ ಕೊನೆಯ ಹಂತದಲ್ಲಿ ಸತತ ವಿಕೆಟ್ ಕಳೆದುಕೊಂಡಿದ್ದು ನಮ್ಮ ಗೆಲುವಿಗೆ ಅಡ್ಡಿಯಾಯಿತು.

ರೋಹಿತ್ ಬ್ಯಾಟಿಂಗ್ ಅದ್ಭುತವಾಗಿತ್ತು

ಸರಣಿಯನ್ನು ಸೋತರೂ, ನಮಗೆ ಅನೇಕ ಸಕಾರಾತ್ಮಕ ಅಂಶಗಳು ಸಿಕ್ಕಿವೆ. ನಮ್ಮ ಎಲ್ಲಾ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದರು, ಆದರೆ ನಮ್ಮ ಬೌಲಿಂಗ್ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಪವರ್‌ಪ್ಲೇ ಸಮಯದಲ್ಲಿ ಲೂಸ್​ ಡಿಲಿವೆರಿಗಳನ್ನ ಮಾಡಿದ್ದಕ್ಕಾಗಿ ನಾವು ತಕ್ಕ ಬೆಲೆ ತೆತ್ತೆವು. ಇಂಗ್ಲೆಂಡ್ ಆರಂಭಿಕರು ಆ ಸಡಿಲ ಎಸೆತಗಳನ್ನು ಅದ್ಭುತವಾಗಿ ಬಳಸಿಕೊಂಡರು ಮತ್ತು ನಮಗೆ ಅವರು ಕಮ್​ಬ್ಯಾಕ್ ಮಾಡಲು ಯಾವುದೇ ಅವಕಾಶವನ್ನು ನೀಡಲಿಲ್ಲ ಎಂದರು.

ಅಲ್ಲದೆ ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ವಿಶೇಷವಾಗಿ ರೋಹಿತ್ ಭಾಯ್ ಶತಕ ಅದ್ಭುತವಾಗಿತ್ತು. ಕೊನೆಯ ಹಂತದಲ್ಲಿ ಪಿಚ್ ಸ್ವಲ್ಪ ನಿಧಾನವಾಯಿತು, ರನ್ ಗಳಿಸುವುದು ಕಷ್ಟಕರವಾಗಿತ್ತು, ಆದರೆ ರೋಹಿತ್ ಬ್ಯಾಟಿಂಗ್ ನೋಡುವುದು ಒಂದು ಅದ್ಭುತ ಅನುಭವ ಎಂದು ಶುಭ್​ಮನ್ ಗಿಲ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed