Prajwal Revanna Parole: ಅಜ್ಜಿ ಅಂತ್ಯಕ್ರಿಯೆಗೆ ಪೆರೋಲ್ ಅರ್ಜಿ ಸಲ್ಲಿಸದ ಪ್ರಜ್ವಲ್ ರೇವಣ್ಣ; ಕಾರಣವೇನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಪ್ರಜ್ವಲ್ ರೇವಣ್ಣ (ಸಂಗ್ರಹ ಚಿತ್ರ)


Last Updated:

ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅಜ್ಜಿ ಚೆನ್ನಮ್ಮ ಅಂತ್ಯಕ್ರಿಯೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಲು ಜೈಲಾಧಿಕಾರಿಗಳು ಅನುಮತಿ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ (ಸಂಗ್ರಹ ಚಿತ್ರ)
ಪ್ರಜ್ವಲ್ ರೇವಣ್ಣ (ಸಂಗ್ರಹ ಚಿತ್ರ)

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ (HD Devegowda) ಪತ್ನಿ ಚೆನ್ನಮ್ಮ (Chennamma) ವಿಧಿವಶ ಹಿನ್ನೆಲೆ ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣ (Prajwal Revanna), ಅಜ್ಜಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಜ್ಜಿ ಅಂತ್ಯಕ್ರಿಯೆಯನ್ನು ವಿಸಿ ಮೂಲಕ ವೀಕ್ಷಿಸಲಿದ್ದಾರೆ. ವಿಸಿ ಮೂಲಕ ಭಾಗಿಗೆ ಪ್ರಜ್ವಲ್ ಅವಕಾಶಕ್ಕೆ ಮನವಿ ಮಾಡಲಾಗಿತ್ತು. ಜೈಲಾಧಿಕಾರಿಗಳು ವಿಸಿ (Video Conference) ಮೂಲಕ ವೀಕ್ಷಣೆಗೆ ಅನುಮತಿ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪತ್ರದ ಮೂಲಕ ಮನವಿ ನೀಡಲು ಸೂಚನೆ

ವಿಡಿಯೋ ಕಾನ್ಫರೆನ್ಸ್ ಅಜ್ಜಿಯ ಅಂತ್ಯಕ್ರಿಯೆ ವೀಕ್ಷಿಸಲು ಜೈಲಾಧಿಕಾರಿಗಳ ಬಳಿ ಮೌಖಿಕವಾಗಿ ಪ್ರಜ್ವಲ್ ಮನವಿ ಮಾಡಿದ್ದರಂತೆ. ಇದರಂತೆ ಪ್ರಜ್ವಲ್ ರೇವಣ್ಣ ಮನವಿಗೆ ಸ್ಪಂದಿಸಿ ಜೈಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಅನುಮತಿ ನೀಡುವುದಾಗಿ ತಿಳಿಸಿ, ಪತ್ರದ ಮೂಲಕ ಅಧಿಕೃತ ಮನವಿ ಸಲ್ಲಿಕೆಗೆ ಸೂಚನೆ ನೀಡಿದ್ದರು ಎಂಬ ಮಾಹಿತಿ ಜೈಲಿನ ಮೂಲಗಳಿಂದ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

ಜೈಲು ಅಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತ್ಯಕ್ರಿಯೆ ವೀಕ್ಷಣೆಗೆ ಅವಕಾಶ ಮನವಿ ಮಾಡಿದ್ದಾರೆ ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಅನ್ಶು ಕುಮಾರ್ ಮಾಹಿತಿ ನೀಡಿದ್ದಾರೆ.

ಕೋರ್ಟ್‌ನಲ್ಲಿ ಟ್ರಯಲ್ ಮುಂದುವರಿಕೆ

ಇದರೊಂದಿಗೆ ಪ್ರಜ್ವಲ್ ರೇವಣ್ಣ ಜೈಲಿನಿಂದಲೇ ಅಜ್ಜಿ ಚೆನ್ನಮ್ಮ ಅಂತ್ಯಕ್ರಿಯೆ ವೀಕ್ಷಣೆ ಸಾಧ್ಯತೆ ಇದೆ. ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರು ಪೆರೋಲ್ ಅರ್ಜಿ ಸಲ್ಲಿಕೆ ಮಾಡಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆಯಾಗಿದ್ದು, ಇನ್ನುಳಿದ ಪ್ರಕರಣಗಳು ಕೋರ್ಟ್‌ನಲ್ಲಿ ಟ್ರಯಲ್ ನಡೆಯುತ್ತಿದೆ. ಹೀಗಾಗಿ ಪೆರೋಲ್ ನೀಡಲು ಅವಕಾಶ ಇಲ್ಲ ಎನ್ನಲಾಗಿದೆ. ಆದ ಕಾರಣ ಕೋರ್ಟ್ ಮೂಲಕ ಪ್ರಜ್ವಲ್ ರೇವಣ್ಣ ಮಧ್ಯಂತರ ಜಾಮೀನು ಪಡೆಯಬೇಕು, ಆದರೆ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು ಜಾಮೀನು ಸಿಗೋದು ಅನುಮಾನ ಎನ್ನಲಾಗಿದೆ. (ವರದಿ: ಚಂದ್ರು, ನ್ಯೂಸ್​18 ಕನ್ನಡ, ಬೆಂಗಳೂರು)

ಒಕ್ಕಲಿಗ ಸಂಪ್ರದಾಯದಂತೆ ಚೆನ್ನಮ್ಮ ಅಂತ್ಯಕ್ರಿಯೆ

ಇನ್ನು, ಕೆಲವೇ ಕ್ಷಣಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮರ ಅಂತ್ಯಕ್ರಿಯೆ ನಡೆಯಲಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಬಳಿಯ ಮಾವಿನಕೆರೆಯಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ ನಡೆಯಲಿದೆ. ಒಕ್ಕಲಿಗ ಸಂಪ್ರದಾಯದಂತೆ ಚೆನ್ನಮ್ಮ ಅಂತ್ಯಕ್ರಿಯೆ ನಡೆಯಲಿದೆ. ಮೇಲುಕೋಟೆ ಪುರೋಹಿತರಾದ ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

ಬಾದಮಿಯಿಂದ ವಿಭೂತಿ

ಹಾಸನದಲ್ಲಿ ಚೆನ್ನಮ್ಮ ಅಂತಿಮ ವಿಧಿವಿಧಾನಕ್ಕೆ ಬಾದಮಿಯಿಂದ ವಿಭೂತಿ ಬಂದಿದೆ. ಬಾದಾಮಿಯಿಂದ 5 ಸಾವಿರ ಕ್ರಿಯಾ ವಿಭೂತಿ ತರಿಸಲಾಗಿದೆ. ಆದಿಚುಂಚನಗಿರಿ ಶಾಖಾ ಮಠದ ಸೂಚನೆಯಂತೆ ವಿಭೂತಿ ತಂದಿದ್ದೇವೆ. ಅಂತ್ಯಸಂಸ್ಕಾರದಲ್ಲಿ ಬಳಸುವ ಕ್ರಿಯಾ ವಿಭೂತಿ

ನ್ಯೂಸ್ 18ಗೆ ಬಾದಮಿ ಮೂಲದ ವಿಭೂತಿ ತಯಾರಕ ವೀರಯ್ಯ ಹೀರೆಮಠ್ ಮಾಹಿತಿ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports