Dam Water Level: ಕರ್ನಾಟಕದ ಡ್ಯಾಂಗಳ ಇಂದಿನ ಸ್ಥಿತಿ ಇದು, ರೈತರ ಪಾಲಿಗೆ ಈ ಮಾಹಿತಿ ಅತ್ಯಗತ್ಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

Dam Water Level: ಕರ್ನಾಟಕದ ಡ್ಯಾಂಗಳ ಇಂದಿನ ಸ್ಥಿತಿ ಇದು, ರೈತರ ಪಾಲಿಗೆ ಈ ಮಾಹಿತಿ ಅತ್ಯಗತ್ಯ! | ಬೆಂಗಳೂರು ನಗರ ನ್ಯೂಸ್ (Bengaluru Urban News)


ಜಲಾಶಯದ ಸದ್ಯದ ಸ್ಥಿತಿಗತಿ ಹೀಗಿದೆ

ಗರಿಷ್ಠ ಮಟ್ಟ: 1633 ಅಡಿ

ಇಂದಿನ ನೀರಿನ ಮಟ್ಟ: 1602.88 ಅಡಿ

ಗರಿಷ್ಠ ಸಾಮರ್ಥ್ಯ: 105.788 ಟಿಎಂಸಿ

ಇಂದಿನ ಸಂಗ್ರಹಣೆ: ಕೇವಲ 25.101 ಟಿಎಂಸಿ

ಹೌದು, ಜಲಾಶಯದ ಒಟ್ಟು ಸಾಮಥ್ರ್ಯದ ಪೈಕಿ ನಾಲ್ಕನೇ ಒಂದು ಭಾಗದಷ್ಟು ನೀರು ಮಾತ್ರ ಸದ್ಯ ಲಭ್ಯವಿದೆ. ಇದು ಮುಂಬರುವ ದಿನಗಳ ಕೃಷಿ ಚಟುವಟಿಕೆಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಳಹರಿವು ಮತ್ತು ಹೊರಹರಿವಿನ ವಿವರ

ಪ್ರಸ್ತುತ ಜಲಾಶಯಕ್ಕೆ ಕೇವಲ 4860 ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ. ಅದೇ ಸಮಯದಲ್ಲಿ, ನದಿ ಮತ್ತು ಕಾಲುವೆಗಳ ಮೂಲಕ ಒಟ್ಟು 656 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವಿನ ಪ್ರಮಾಣ ಕಡಿಮೆ ಇರುವುದರಿಂದ ಜಲಾಶಯದಲ್ಲಿ ನೀರು ಭರ್ತಿಯಾಗಲು ಇನ್ನೂ ಮಳೆಯ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆ.ಆರ್.ಎಸ್. ಜಲಾಶಯ

ದಿನಾಂಕ: 15-07-2026, ಬೆಳಿಗ್ಗೆ 8:00 ಗಂಟೆಗೆ

ಗರಿಷ್ಠ ಮಟ್ಟ: 124.80 ಅಡಿ

ಇಂದಿನ ಮಟ್ಟ: 92.74 ಅಡಿ

ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ

ಇಂದಿನ ಸಾಮರ್ಥ್ಯ: 17.637 ಟಿಎಂಸಿ

ಬಳಕೆಗೆ ಲಭ್ಯವಿರುವ ಸಾಮರ್ಥ್ಯ (Live capacity): 9.258 ಟಿಎಂಸಿ

ಒಳಹರಿವು: 2204 ಕ್ಯೂಸೆಕ್‌ಗಳು

ಹೊರಹರಿವು: 625 ಕ್ಯೂಸೆಕ್‌ಗಳು (ಕಾಲುವೆ ಮತ್ತು ಕುಡಿಯುವ ನೀರು ಪೂರೈಕೆ ಸೇರಿದಂತೆ)

ಕಬಿನಿ ಜಲಾಶಯ

ದಿನಾಂಕ: 15-7-2026, ಬೆಳಿಗ್ಗೆ 8:00 ಗಂಟೆಗೆ

ಗರಿಷ್ಠ ಮಟ್ಟ: 2284.00 ಅಡಿ

ಇಂದಿನ ಮಟ್ಟ: 2270.70 ಅಡಿ (2281.31)

ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ

ಇಂದಿನ ಸಾಮರ್ಥ್ಯ: 12.02 ಟಿಎಂಸಿ (17.82)

ಬಳಕೆಗೆ ಲಭ್ಯವಿರುವ ಸಾಮರ್ಥ್ಯ (Live Cap): 2.21 ಟಿಎಂಸಿ (8.08)

ಒಳಹರಿವು: 2093 ಕ್ಯೂಸೆಕ್ (10158)

ಹೊರಹರಿವು: ನದಿ: 400 ಕ್ಯೂಸೆಕ್ (12000)

ಆಲಮಟ್ಟಿ ಡ್ಯಾಂಗೆ ಬರೋಬ್ಬರಿ 56,765 ಕ್ಯೂಸೆಕ್ ಭಾರಿ ಒಳಹರಿವು ದಾಖಲಾಗಿದ್ದು, ಈಗಾಗಲೇ 87.87 ಟಿಎಂಸಿ (ಶೇಕಡಾ 71) ನೀರು ತುಂಬಿದೆ. ಆದರೆ, ರೈತರ ಕಣ್ಣೀರು ಒರೆಸಬೇಕಿದ್ದ ತುಂಗಭದ್ರಾ ಡ್ಯಾಂನಲ್ಲಿ ಕೇವಲ 24.36 ಟಿಎಂಸಿ (ಶೇಕಡಾ 23) ನೀರು ಮಾತ್ರ ಇದ್ದು, 17,152 ಕ್ಯೂಸೆಕ್ ಒಳಹರಿವು ಇದೆ. ಮಲಪ್ರಭಾ ಡ್ಯಾಂನಲ್ಲಿ ಶೇಕಡಾ 32 ರಷ್ಟು (12.23 ಟಿಎಂಸಿ), ಹಿಡಕಲ್ (ಘಟಪ್ರಭಾ) ಡ್ಯಾಂನಲ್ಲಿ ಶೇಕಡಾ 38 ರಷ್ಟು (19.55 ಟಿಎಂಸಿ), ಹಾಗೂ ನಾರಾಯಣಪುರದಲ್ಲಿ ಶೇಕಡಾ 59 ರಷ್ಟು (19.63 ಟಿಎಂಸಿ) ನೀರು ಸಂಗ್ರಹವಾಗಿದೆ. ಕೃಷ್ಣಾ ಕೊಳ್ಳದಲ್ಲಿ ಒಟ್ಟಾರೆ 82,526 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ರೈತರ ಆತಂಕವೇನು?

ಕಳೆದ ವರ್ಷಗಳಿಗೆ ಹೋಲಿಸಿದರೆ, ಜುಲೈ ಮಧ್ಯಭಾಗದಲ್ಲಿ ಜಲಾಶಯವು ಉತ್ತಮ ಮಟ್ಟದಲ್ಲಿ ಇರಬೇಕಿತ್ತು. ಆದರೆ, ಮಳೆಗಾಲದ ಆರಂಭದಲ್ಲೂ ನೀರಿನ ಸಂಗ್ರಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ರೈತರ ನಿದ್ದೆಗೆಡಿಸಿದೆ. ಬೆಳೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports