Last Updated:
ಕೃಷಿ ತಾಪಂಡ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ . ತಮ್ಮ ನೋವು, ಮಾನಸಿಕ ಸ್ಥಿತಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಟೀಕೆಗಳ ಬಗ್ಗೆ ನಟಿ ಮನಬಿಚ್ಚಿ ಮಾತನಾಡಿದ್ದಾರೆ.
ಇತ್ತೀಚೆಗೆ ಉದ್ಯಮಿ ವೈಶಾಖ್ (Vaishakh) ಸಾವಿನ ಘಟನೆ ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಘಟನೆಯ ಬಳಿಕ ನಟಿ ಕೃಷಿ ತಾಪಂಡ (Actress Krishi Thapanda) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಊಹಾಪೋಹಗಳು ಕೇಳಿಬಂದಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇದೀಗ ಕೃಷಿ ತಾಪಂಡ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ . ತಮ್ಮ ನೋವು, ಮಾನಸಿಕ ಸ್ಥಿತಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎದುರಿಸುತ್ತಿರುವ ಟೀಕೆಗಳ ಬಗ್ಗೆ ನಟಿ ಮನಬಿಚ್ಚಿ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಕೃಷಿ ತಾಪಂಡ, ನನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಇದು ನಿಮಗೆ ಒಂದು ಘಟನೆ ಆಗಿರಬಹುದು. ಆದರೆ ನನಗೆ ತುಂಬಾ ದೊಡ್ಡ ನಷ್ಟ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ನಟಿ ಭಾವುಕರಾಗಿದ್ದಾರೆ.
ಹಾಗೆಯೇ ತಮ್ಮ ಮನಸ್ಥಿತಿಯ ಬಗ್ಗೆ ಮಾತನಾಡಿದ ಕೃಷಿ, ಯಾರಾದರೂ ಹೇಗಿದ್ದೀರಾ? ಎಂದು ಕೇಳಿದರೆ ಏನು ಉತ್ತರ ಕೊಡಬೇಕು ಎನ್ನುವುದೇ ತಿಳಿತಿಲ್ಲ. ನನ್ನ ಮನಸ್ಸು ಒಡೆದು ಹೋಗಿದೆ ಎಂದು ಹೇಳಿಕೊಂಡಿದ್ದಾರೆ.
ನಾನು ಇಷ್ಟಪಟ್ಟು ಕಟ್ಟಿಕೊಂಡಿದ್ದ ಆ ಮನೆಯಲ್ಲಿ ಈಗ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ಅದರ ಬಾಡಿಗೆಯನ್ನು ನಾನೇ ಕಟ್ಟುತ್ತಿದ್ದೇನೆ. ಬದುಕಲು ದುಡಿಯಲೇಬೇಕು ಎಂದು ಹೇಳಿಕೊಂಡಿದ್ದಾರೆ.
ಹಾಗೆಯೇ ಕೆಲವೊಮ್ಮೆ ಹೆಣ್ಣಾಗಿ ಹುಟ್ಟಿದ್ದು ಶಾಪವೇನೋ ಎಂದು ಅನಿಸುತ್ತದೆ. ದಯವಿಟ್ಟು ಬೇರೆಯವರ ನೋವನ್ನು ಅರ್ಥ ಮಾಡಿಕೊಳ್ಳಿ. ಯಾರ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದೆ ನೋಯಿಸುವ ರೀತಿಯಲ್ಲಿ ಮಾತನಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಕೊಡಗು ಮೂಲದ ಕೃಷಿ ತಾಪಂಡ ತಮ್ಮ ವೃತ್ತಿಜೀವನವನ್ನು ಮಾಡೆಲ್ ಆಗಿ ಆರಂಭಿಸಿದರು. 2014ರಲ್ಲಿ ಮಿಸ್ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಆ ಬಳಿಕ ನಟಿಯ ಸಿನಿ ಜರ್ನಿ ಹಂತ ಹಂತವಾಗಿ ಆರಂಭವಾಯಿತು.
ಕೃಷಿ ತಾಪಂಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕಹಿ ಚಿತ್ರದ ಮೂಲಕ. ಈ ಸಿನಿಮಾ ಮೂಲಕ ಅವರು ಸಿನಿ ಪ್ರೇಕ್ಷಕರ ಗಮನ ಸೆಳೆದರು. ಬಳಿಕ 2016ರಲ್ಲಿ ಬಿಡುಗಡೆಯಾದ ಅಕಿರ ಸಿನಿಮಾ ಕೃಷಿ ತಾಪಂಡ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿದ ಚಿತ್ರವಾಗಿದೆ. ನಿರ್ದೇಶಕ ನವೀನ್ ರೆಡ್ಡಿ ನಿರ್ದೇಶನದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ನಟಿ, ಲಾವಣ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಹಾಗೆಯೇ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಗಳಿಸಿತು. ಈ ಚಿತ್ರದ ಬಳಿಕ ಅವರು ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಪರಿಚಿತರಾದರು.
Bangalore [Bangalore],Bangalore,Karnataka
Jul 14, 2026 10:21 PM IST














