Last Updated:
ರಿಲಯನ್ಸ್ ಫೌಂಡೇಶನ್ (Reliance Foundation) ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಯ ದೈನಂದಿನ ಅಗತ್ಯತೆಗಳನ್ನು ಪೂರೈಸುವ ಮೂಲಕ, ಕೇವಲ ಕರ್ತವ್ಯದ ಸ್ಥಳಗಳಲ್ಲಷ್ಟೇ ಅಲ್ಲದೆ ಅದರಾಚೆಗೂ ತನ್ನ ಕಾಳಜಿಯನ್ನು ವಿಸ್ತರಿಸಿದೆ.
ಒಡಿಶಾದ ಪುರಿಯ ಜಗನ್ನಾಥ ರಥಯಾತ್ರೆಯು (Puri Jagannath Rath Yatra) ಭಾರೀ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಒಂಭತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪುರಿ ಜಗನ್ನಾಥ ರಥಯಾತ್ರೆ ಹಿನ್ನೆಲೆ, ದೇಶದ ಹೆಮ್ಮೆಯ ಸಂಸ್ಥೆಯಾದ ರಿಲಯನ್ಸ್ ಫೌಂಡೇಶನ್ (Reliance Foundation) ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಯ ದೈನಂದಿನ ಅಗತ್ಯತೆಗಳನ್ನು ಪೂರೈಸುವ ಮೂಲಕ, ಕೇವಲ ಕರ್ತವ್ಯದ ಸ್ಥಳಗಳಲ್ಲಷ್ಟೇ ಅಲ್ಲದೆ ಅದರಾಚೆಗೂ ತನ್ನ ಕಾಳಜಿಯನ್ನು ವಿಸ್ತರಿಸಿದೆ.
ಯಾತ್ರಾರ್ಥಿಗಳ ಸಂಚಾರ ಮಾರ್ಗದ ಸುಮಾರು 50 ಕಿಲೋಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಯಲ್ಲಿರುವ ಸುಮಾರು 90 ಪೊಲೀಸ್ ಸಹಾಯ ಕೇಂದ್ರಗಳ ಜೊತೆಗೆ, 94 ವಸತಿ ಕೇಂದ್ರಗಳಲ್ಲಿ ಸುಮಾರು 13,975 ಸಿಬ್ಬಂದಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ರಿಲಯನ್ಸ್ ಫೌಂಡೇಶನ್ ಮುಂದಾಗಿದೆ.

ಈ ತಾತ್ಕಾಲಿಕ ತಂಗುದಾಣಗಳಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳನ್ನು ಉತ್ತಮಗೊಳಿಸಲು, ರಿಲಯನ್ಸ್ ಫೌಂಡೇಶನ್ ಎಲ್ಲರೂ ಬಳಸಲು 1,000 ಬಕೆಟ್‌ಗಳು ಮತ್ತು 1,000 ಮಗ್‌ಗಳನ್ನು ಒದಗಿಸಿದೆ. ದೀರ್ಘಾವಧಿಯ ಡ್ಯೂಟಿ ಮುಗಿಸಿ ಬಂದ ಪೊಲೀಸರು ಈ ಸರಳ ವಸ್ತುಗಳ ಸಹಾಯದಿಂದ ಕೈಕಾಲು ತೊಳೆದು ಫ್ರೆಶ್ ಆಗಲು, ಮುಂದಿನ ಶಿಫ್ಟ್‌ಗೆ ರೆಡಿಯಾಗಲು ಮತ್ತು ಹೊಸ ಉತ್ಸಾಹದಿಂದ ಭಕ್ತರ ಸೇವೆ ಮಾಡಲು ಇದು ನೆರವಾಗುತ್ತದೆ. ಈ ಮೂಲಕ ಪೊಲೀಸರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ರಿಲಯನ್ಸ್ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ.
Jul 14, 2026 10:00 PM IST














