Last Updated:
ಇಂಗ್ಲೆಂಡ್ ತಂಡವನ್ನು 258ಕ್ಕೆ ನಿಯಂತ್ರಿಸಿದ ಭಾರತ ನಂತರ ಚೇಸಿಂಗ್ ವೇಳೆ ಆರಂಭಿಕ ಹಿನ್ನಡೆ ಅನುಭವಿಸಿತು. ದೀರ್ಘ ವಿರಾಮದ ನಂತರ ಏಕದಿನ ಸ್ವರೂಪಕ್ಕೆ ಅದ್ಭುತ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿ ಕಣಕ್ಕಿಳಿದ ಹಿರಿಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿರಾಶೆಗೊಂಡರು.
ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭಾರಿ ಹಿನ್ನಡೆ ಅನುಭವಿಸಿದೆ. ಇಂಗ್ಲೆಂಡ್ ತಂಡವನ್ನು 258ಕ್ಕೆ ನಿಯಂತ್ರಿಸಿದ ಭಾರತ ನಂತರ ಚೇಸಿಂಗ್ ವೇಳೆ ಆರಂಭಿಕ ಹಿನ್ನಡೆ ಅನುಭವಿಸಿತು. ದೀರ್ಘ ವಿರಾಮದ ನಂತರ ಏಕದಿನ ಸ್ವರೂಪಕ್ಕೆ ಅದ್ಭುತ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿ ಕಣಕ್ಕಿಳಿದ ಹಿರಿಯ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿರಾಶೆಗೊಂಡರು. ಇಂಗ್ಲೆಂಡ್ ಪಿಚ್ ಪರಿಸ್ಥಿತಿಯ ಲಾಭ ಪಡೆದ ಆತಿಥೇಯ ಬೌಲರ್‌ಗಳು, ಭಾರತದ ದಿಗ್ಗಜರನ್ನ ಸುಲಭವಾಗಿ ಪೆವಿಲಿಯನ್ಗೆ ಕಳಿಸಿದರು.
ಶುಭ್ಮನ್ ಗಿಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಸಾಮಾನ್ಯವಾಗಿ ಏಕದಿನ ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭದಲ್ಲಿ ಸ್ವಲ್ಪ ಸಮಯ ತೆಗೆದುಕೊಂಡು ನಂತರ ಸ್ಫೋಟಕ ಆಟಕ್ಕೆ ಮುಂದಾಗುವ ರೋಹಿತ್ ಶರ್ಮಾ, ಈ ಪಂದ್ಯದಲ್ಲಿ ಚೆಂಡನ್ನು ಸರಿಯಾಗಿ ಟೈಮಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್‌ನ ವೇಗಿಗಳ ಸ್ವಿಂಗ್ ಎದುರಿಸಲು ಹೆಣಗಾಡುತ್ತಿದ್ದರು, ಒಂದೊಂದು ರನ್ ಗಳಿಸುವುದು ಕಷ್ಟಕರವಾಗಿತ್ತು. ಅಂತಿಮವಾಗಿ, ರೋಹಿತ್ ಶರ್ಮಾ 21 ಎಸೆತಗಳನ್ನು ಎದುರಿಸಿ ಕೇವಲ ಒಂದು ಬೌಂಡರಿ ಸಹಾಯದಿಂದ ಕೇವಲ 11 ರನ್ ಗಳಿಸಿ ಔಟಾದರು.
ರೋಹಿತ್ ಶರ್ಮಾ ಔಟಾದ ನಂತರ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದ ವಿರಾಟ್ ಕೊಹ್ಲಿ ಮೇಲೆ ತಂಡವು ಹೆಚ್ಚಿನ ಭರವಸೆ ಹೊಂದಿತ್ತು. ಚೇಸಿಂಗ್ ಕಿಂಗ್ ಎಂದು ಕರೆಯಲ್ಪಡುವ ಕೊಹ್ಲಿ ತಂಡಕ್ಕೆ ಗೆಲುವು ತರಂದುಕೊಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಕ್ರೀಸ್‌ಗೆ ಬಂದ ತಕ್ಷಣ ರನ್ ಗಳಿಸುವ ಮೂಲಕ ಖಾತೆ ತೆರೆದ ಕೊಹ್ಲಿ, ನಂತರ ಇಂಗ್ಲೆಂಡ್ ಬೌಲರ್‌ಗಳ ಲೈನ್ ಮತ್ತು ಲೆಂತ್ ಅನ್ನು ನಿರ್ಣಯಿಸುವಲ್ಲಿ ವಿಫಲರಾದರು. ಕೇವಲ 6 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ ಒಂದೇ ಒಂದು ಬೌಂಡರಿ ಹೊಡೆದು 5 ರನ್ ಗಳಿಸಿ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ಎಲ್‌ಬಿಡಬ್ಲ್ಯೂ ಬೌಲಿಂಗ್‌ಗೆ ಬಲಿಯಾದರು.
ಪವರ್‌ಪ್ಲೇನಲ್ಲಿ ಈ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್‌ಗಳು ಅತಿ ಕಡಿಮೆ ರನ್‌ಗಳ ಅಂತರದಲ್ಲಿ ಔಟಾದ ಕಾರಣ, ಭಾರತ ತಂಡವು ಒತ್ತಡಕ್ಕೆ ಒಳಗಾಯಿತು. ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಜವಾಬ್ದಾರಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಮೇಲೆ ಬಿದ್ದಿದೆ.
ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಆರಂಭಿಕ ಕುಸಿತ ಅನುಭವಿಸಿತ್ತು. 107 ರನ್ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಅನುಭವಿಸಿತ್ತು. ಆದರೆ ಅನುಭವಿ ಜೋ ರೂಟ್ (76*) ಮತ್ತು ಡಾಸನ್ (68) 121 ರನ್‌ಗಳ ಜೊತೆಯಾಟದ ಮೂಲಕ ಆಸರೆಯಾದರು. ಡಾಸೆನ್ 83 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 68 ರನ್‌ಗಳಿಸಿದರೆ, ರೂಟ್ 76 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 76 ರನ್ಗಳಿಸಿ 258 ರನ್‌ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ಭಾರತದ ಪರ ಪಟೇಲ್ 4 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ತಲಾ 2 ವಿಕೆಟ್ ಹಾಗೂ ಜಸ್ಪ್ರೀತ್ ಬುಮ್ರಾ ಮತ್ತು ಶಿವಂ ದುಬೆ ತಲಾ 1 ವಿಕೆಟ್ ಪಡೆದರು.














