Paraak Movie: ಹೊಸ ಅವತಾರದಲ್ಲಿ ಬಂದ ಶ್ರೀಮುರಳಿ, ಪರಾಕ್ ಟೀಸರ್ ಹೇಗಿದೆ? | | ACTPnews

ಹೊಸ ಅವತಾರದಲ್ಲಿ ಬಂದ ಶ್ರೀಮುರಳಿ; ಪರಾಕ್ ಟೀಸರ್ ಸಿಕ್ಕಾಪಟ್ಟೆ ಪ್ರಾಮಿಸಿಂಗ್!


Last Updated:

ಶ್ರೀಮುರಳಿ ಅವರು ಕರ್ಲಿ ಹೇರ್ ಲುಕ್ ಅಲ್ಲಿಯೇ ಇದ್ದಾರೆ. ಇದು ಯಾವ ಚಿತ್ರಕ್ಕೆ ಅನ್ನುವ ಪ್ರಶ್ನೆ ಇತ್ತು. ಇದಕ್ಕೆ ಪರಾಕ್ ಚಿತ್ರದ ಟೀಸರ್ ಉತ್ತರ ಕೊಟ್ಟಿದೆ. ಈ ಟೀಸರ್ ನೋಡಿದ್ರೆ ಆಯಿತು. ಹೊಸ ಭರವಸೆನೂ ಮೂಡುತ್ತದೆ. ಆ ರೀತಿಯ ಒಂದು ಟೀಸರ್‌ನಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.

ಹೊಸ ಅವತಾರದಲ್ಲಿ ಬಂದ ಶ್ರೀಮುರಳಿ; ಪರಾಕ್ ಟೀಸರ್ ಸಿಕ್ಕಾಪಟ್ಟೆ ಪ್ರಾಮಿಸಿಂಗ್!
ಹೊಸ ಅವತಾರದಲ್ಲಿ ಬಂದ ಶ್ರೀಮುರಳಿ; ಪರಾಕ್ ಟೀಸರ್ ಸಿಕ್ಕಾಪಟ್ಟೆ ಪ್ರಾಮಿಸಿಂಗ್!

ಶ್ರೀಮುರಳಿ (Sriimurali) ಅಭಿನಯದ ಪರಾಕ್ ಚಿತ್ರದ (Paraak Movie) ಟೀಸರ್ ಪ್ರಾಮಿಸಿಂಗ್ ಆಗಿದೆ. ಮೊದಲ ನೋಟದಲ್ಲಿಯೇ ಸೆಳೆದು ಬಿಡುತ್ತದೆ. ಈ ಹಿಂದಿನ ಚಿತ್ರಗಳಲ್ಲಿ ಶ್ರೀಮುರಳಿ ಈ ರೀತಿ ಕಾಣಿಸಿಕೊಂಡಿಯೇ ಇಲ್ಲ. ಆದರೆ, ಈ ಚಿತ್ರದಲ್ಲಿ ಶ್ರೀಮುರಳಿ (Sriimurali) ಖಡಕ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಲಾಂಗ್ ಕರ್ಲಿ ಹೇರ್ ಲುಕ್ ಇದೆ. ಶರ್ಟ್ ಲೆಸ್‌ ದೇಹದ ಮೇಲೆ ಕತ್ತಿ ಹಾಗೂ ಮಚ್ಚಿನ ಏಟಿನ ಗಾಯಗಳೂ ಇವೆ. ಇದರೊಟ್ಟಿಗೆ ಎಣ್ಣೆ ಏಟು ಬೇರೆ. ಎಲ್ಲವೂ ಇರೋ ಈ ಒಂದು ಚಿತ್ರ ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನೋದು ತಿಳಿಯುತ್ತದೆ. ತುಂಬಾನೆ ಅಳೆದು ತೂಗಿ ಈ ಪಾತ್ರ ಒಪ್ಪಿದಂತೆ ಇದೆ. ಕಾರಣ ಪರಾಕ್ ಚಿತ್ರದ (Paraak Movie) ಈ ಪಾತ್ರವೇ ಆ ರೀತಿ ಇದೆ. ಲಾಂಗು ಮತ್ತು ಮಚ್ಚು ಇಲ್ಲಿ ಇನ್ನಿಲ್ಲದಂತೆ ಝಳಪಿಸುತ್ತವೆ. ಆದರೆ, ಇಲ್ಲೊಂದು ಟೇಪ್ ರೆಕಾರ್ಡ್ ರ್ ಇದೆ. ‘ಏತಕೆ’ ಅನ್ನುವ ಹಾಡು ಇದರಲ್ಲಿ ಪ್ಲೇ ಆಗುತ್ತದೆ. ಅದನ್ನ ಕೇಳ್ತಾ ಹೋದ್ರೆ ವಿಭಿನ್ನವಾದ ಅನುಭವವೂ ಆಗುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ಲಾಂಗ್ ಹೇರ್ ಸೀಕ್ರೆಟ್ ರಿವೀಲ್

ಶ್ರೀಮುರಳಿ ಅವರು ಕಳೆದ ಕೆಲವು ತಿಂಗಳಿನಿಂದಲು ಲಾಂಗ್ ಹೇರ್ ಅಲ್ಲಿಯೇ ಇದ್ದಾರೆ. ಅವು ಕರ್ಲಿ ಹೇರ್ ಬೇರೆ, ಈ ಲುಕ್ ಯಾಕೆ ಅನ್ನುವ ಪ್ರಶ್ನೆನೂ ಇತ್ತು.
sriimurali acted paraak movie promising first teaser release

ಸಖತ್ ಆ್ಯಕ್ಷನ್ ಮತ್ತು ಟೇಪ್‌ ರೆಕಾರ್ಡರ್

ಆದರೆ, ಉಗ್ರಾಯುಧಮ್ ಚಿತ್ರ ಒಪ್ಪಿದ್ದರು. ಹಾಗಾಗಿಯೇ ಈ ಲುಕ್ ಈ ಚಿತ್ರಕ್ಕೇನೆ ಇರಬೇಕು ಅನ್ನುವ ಅಂದಾಜಿತ್ತು. ಆದರೆ, ಅದು ಪರಾಕ್ ಚಿತ್ರಕ್ಕಾಗಿಯೇ ಅನ್ನೋದು ಇದೀಗ ರಿವೀಲ್ ಆಗಿದೆ.

ಪರಾಕ್ ಚಿತ್ರದಲ್ಲಿ ಸಖತ್ ರೋಲ್

ಡೈರೆಕ್ಟರ್ ಹಾಲೇಶ್ ಕೊಗುಂಡಿ ಈ ಚಿತ್ರದಲ್ಲಿ ನಾಯಕ ನಟ ಶ್ರೀಮುರಳಿ ಅವರಿಗೆ ಸಖತ್ ರೋಲ್ ಬರೆದಿದ್ದಾರೆ. ಅದು ಹೇಗಿದೆ ಅನ್ನೋದನ್ನ ಪರಾಕ್ ಚಿತ್ರದ ಈಗೀನ ಟೀಸರ್ ಹೇಳುತ್ತದೆ.

ಈ ಟೀಸರ್ ಅಲ್ಲಿ ಶ್ರೀಮುರಳಿ ಅವರ ಪಾತ್ರದ ಸಂಪೂರ್ಣ ಚಿತ್ರಣ ಇದೆ. ಲಾಂಗ್ ಕರ್ಲಿ ಹೇರ್ ಸ್ಟೈಲ್, ಮೈತುಂಬಾ ಲಾಂಗ್ ಮತ್ತು ಮಚ್ಚಿನ ಏಟಿನ ಗಾಯಗಳು, ಅದಾಗಲೇ ಎಡಗೈಗೆ ಬಿದ್ದ ಏಟನ್ನ ಹೊಲಿದುಕೊಳ್ಳುತ್ತಿರೋದು ಹೀಗೆ ಸುಮಾರು ವಿಷಯಗಳು ಇದರಲ್ಲಿವೆ.

ಸಖತ್ ಆ್ಯಕ್ಷನ್ ಮತ್ತು ಟೇಪ್‌ ರೆಕಾರ್ಡರ್

ಈ ಚಿತ್ರದಲ್ಲಿ ಟೇಪ್ ರೆಕಾರ್ಡರ್ ಕೂಡ ಮಹತ್ವದ ಪಾತ್ರ ಅನಿಸುತ್ತದೆ. ನಾಯಕ ನಟ ಶ್ರೀಮುರಳಿ ಪಾತ್ರ ಇಲ್ಲಿ ಸಂಗೀತ ಪ್ರೇಮಿನೂ ಅನಿಸುತ್ತದೆ.

sriimurali acted paraak movie promising first teaser release

ಹೊಸ ಅವತಾರದಲ್ಲಿ ಬಂದ ಶ್ರೀಮುರಳಿ

ಆ ರೀತಿಯ ಮಧುರವಾದ ಹಾಡನ್ನೆ ಇಲ್ಲಿ ಪ್ಲೇ ಮಾಡಲಾಗಿದೆ. ‘ಏತಕೆ ಈ ಬಿಗುಮಾನ’ ಅನ್ನುವ ಹಾಡಿನ ಹಿನ್ನೆಲೆಯಲ್ಲಿಯೇ ಆ್ಯಕ್ಷನ್‌ಗಳು ಇಲ್ಲಿ ನಡೆಯುತ್ತದೆ. ಈ ಹಾಡು ಮಧ್ಯದಲ್ಲಿಯೇ ಶುರು ಆಗುತ್ತದೆ. ಆದರೆ, ಇಡೀ ಟೀಸರ್‌ಗೆ ಬೇರೆಯದ್ದೆ ಒಂದು ಸೈಲೆಂಟ್ ಫೀಲ್‌ ಕೊಡುತ್ತದೆ ನೋಡಿ.

ಚರಣ್ ರಾಜ್ ಸಂಗೀತದ ಮೋಡಿ

ಈ ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಮಾಡಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೂ ಇವರೇ ಮ್ಯೂಸಿಕ್ ಮಾಡಿದ್ದರು. ಇಲ್ಲಿ ಬರುವ ಟೇಪ್‌ ರೆಕಾರ್ಡರ್ ನೋಡಿದಾಗ ಆ ಚಿತ್ರ ನೆನಪಿಗೆ ಬರುತ್ತದೆ.

ಶ್ರೀಮುರಳಿ ಅವರ ಕರ್ಲಿ ಹೇರ್ ಲುಕ್ ನೊಡಿದಾಗ, ಮಾರ್ಕ್ ಚಿತ್ರದ ಕಿಚ್ಚ ಸುದೀಪ್ ಲುಕ್ ಕಣ್ಮುಂದೆ ಬರುತ್ತದೆ. ಆದರೆ, ಈ ಕತೆ ಮತ್ತು ಶ್ರೀಮುರಳಿ ಅವರ ಲುಕ್ ಆ್ಯಂಡ್ ಫೀಲ್‌ ಬೇರೆ ರೀತಿನೇ ಇವೆ. ಇಡೀ ಚಿತ್ರದಲ್ಲಿ ಅದನ್ನ ಗಮನಿಸಬಹುದು. ಅಂತಹ ಈ ಚಿತ್ರದ ಟೀಸರ್ ಸದ್ಯ ಹೊಸ ಭರವಸೆ ಮೂಡಿಸುತ್ತಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports