DPL Auction 2026: ಹರಾಜಿನಲ್ಲಿ ಕೊಹ್ಲಿ ಅಣ್ಣನ ಮಗ, ಸೆಹ್ವಾಗ್​ ಪುತ್ರನಿಗೆ ಜಾಕ್​​ಪಾಟ್! ಡಿಪಿಎಲ್​​ ಗರಿಷ್ಠ ಮೊತ್ತ ಪಡೆದ ಆಟಗಾರರ ಲಿಸ್ಟ್ ಇಲ್ಲಿದೆ | ಕ್ರೀಡಾ ಸುದ್ದಿ | ACTPnews

DPL Auction 2026: ಹರಾಜಿನಲ್ಲಿ ಕೊಹ್ಲಿ ಅಣ್ಣನ ಮಗ, ಸೆಹ್ವಾಗ್​ ಪುತ್ರನಿಗೆ ಜಾಕ್​​ಪಾಟ್! ಡಿಪಿಎಲ್​​ ಗರಿಷ್ಠ ಮೊತ್ತ ಪಡೆದ ಆಟಗಾರರ ಲಿಸ್ಟ್ ಇಲ್ಲಿದೆ | ಕ್ರೀಡಾ ಸುದ್ದಿ


ಮೊದಲ ಅವಕಾಶದ ನಿರೀಕ್ಷೆಯಲ್ಲಿ ಆರ್ಯವೀರ್

ಪಂದ್ಯಾವಳಿಯ ಮೂರನೇ ಸೀಸನ್‌ನಲ್ಲಿ ಆರ್ಯವೀರ್ ಕೊಹ್ಲಿ ಅವರನ್ನು ‘ಸಿ’ ವಿಭಾಗದಲ್ಲಿ ಪಟ್ಟಿ ಮಾಡಲಾಗಿದ್ದು, ಅವರು ಮೂಲ ಬೆಲೆ ₹1 ಲಕ್ಷವಿತ್ತು. ಆರ್ಯವೀರ್ ಕೊಹ್ಲಿಯನ್ನ ಡೆಲ್ಲಿ ಕಿಂಗ್ಸ್ ಹರಾಜಿನಲ್ಲಿ ₹1.2 ಲಕ್ಷಕ್ಕೆ ಖರೀದಿಸಿತು. ಡೆಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಲಾದ ಆಟಗಾರರನ್ನು ಒಳಗೊಂಡಿರುವ ‘ಸಿ’ ಅತ್ಯಂತ ಕಡಿಮೆ ವರ್ಗವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.

ಕಳೆದ ಋತುವಿನಲ್ಲಿ, ಆರ್ಯವೀರ್ ಅವರಿಗೆ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್‌ ತಂಡದಲ್ಲಿ ಒಂದೂ ಅವಕಾಶ ಸಿಕ್ಕಿರಲಿಲ್ಲ. ಕಳೆದ ವರ್ಷ ತಂಡವು ಅವರನ್ನು ₹1 ಲಕ್ಷಕ್ಕೆ ಖರೀದಿಸಿತ್ತು. ಈ ಋತುವಿನಲ್ಲಿ, ಅವರು ಹರಾಜಿನಲ್ಲಿ ಹೆಚ್ಚುವರಿಯಾಗಿ ₹20,000 ಪಡೆದರು. ಈ ಋತುವಿನಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಅವರಿಗೆ ಅವಕಾಶ ನೀಡುತ್ತದೆಯೇ ಎಂದು ಕಾದು ನೋಡಬೇಕಿದೆ.

ಸೆಂಟ್ರಲ್ ಡೆಲ್ಲಿ ಕಿಂಗ್ಸ್‌ನಲ್ಲಿ ಯಾವ ಸೂಪರ್‌ಸ್ಟಾರ್‌ಗಳಿದ್ದಾರೆ?

ಅಂಡರ್ 19 ಸೂಪರ್‌ಸ್ಟಾರ್ ಯಶ್ ಧುಲ್ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಆಡಲಿದ್ದಾರೆ. 2026ರ ಋತುವಿಗಾಗಿ ಫ್ರಾಂಚೈಸಿ ಒಂಬತ್ತು ಆಟಗಾರರನ್ನು ಉಳಿಸಿಕೊಂಡಿದೆ. ರಿಟೇನ್ ಆಟಗಾರರ ಪಟ್ಟಿಯಲ್ಲಿ ಯಶ್ ಧುಲ್ (ಮಾರ್ಕ್ಯೂ, ₹15 ಲಕ್ಷ), ಮಣಿ ಗ್ರೆವಾಲ್ (ಎ ಕೆಟಗರಿ, ₹18 ಲಕ್ಷ), ಜಾಂಟಿ ಸಿಧು (ಎ ಕೆಟಗರಿ, ₹10 ಲಕ್ಷ), ಯುಗಲ್ ಸೈನಿ (ಬಿ ಕೆಟಗರಿ, ₹3.8 ಲಕ್ಷ), ಆದಿತ್ಯ ಭಂಡಾರಿ (ಬಿ ಕೆಟಗರಿ, ₹3 ಲಕ್ಷ), ಸಿದ್ಧಾರ್ಥ್ ಜೂನ್ (ಬಿ ಕೆಟಗರಿ, ₹3 ಲಕ್ಷ), ಗವ್ನಿಶ್ ಖುರಾನಾ (ಸಿ ಕೆಟಗರಿ, ₹1 ಲಕ್ಷ), ಜಸ್ವೀರ್ ಸೆಹ್ರಾವತ್ (ಸಿ ಕೆಟಗರಿ, ₹1 ಲಕ್ಷ), ಮತ್ತು ತೇಜಸ್ ಬರೋಕಾ (ಸಿ ಕೆಟಗರಿ, ₹19 ಲಕ್ಷ) ಸೇರಿದ್ದಾರೆ.

ಸೆಹ್ವಾಗ್​ ಮಗನಿಗೆ 3 ಲಕ್ಷ

ಗಮನಾರ್ಹ ಡಿಪಿಎಲ್ 2026ರ ಹರಾಜಿನಲ್ಲಿ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ ಭರ್ಜರಿ ಮೊತ್ತ ಪಡೆದುಕೊಂಡಿದ್ದಾರೆ. ಆರ್ಯವೀರ್ ಸೆಹ್ವಾಗ್ ಅವರನ್ನು ವೆಸ್ಟ್ ಡೆಲ್ಲಿ ಲಯನ್ಸ್ ₹ 3 ಲಕ್ಷಕ್ಕೆ ಖರೀದಿಸಿತು. ಈ ಯುವ ಆಟಗಾರ U23, U19 ಮತ್ತು U16 ಆಟಗಾರರನ್ನು ಒಳಗೊಂಡಿರುವ ಬಿ ವರ್ಗದ ಗುಂಪಿನ ಭಾಗವಾಗಿದ್ದರು. ತನ್ನ ತಂದೆಯಂತೆಯೇ ಆರಂಭಿಕ ಆಟಗಾರನಾಗಿರುವ ಆರ್ಯವೀರ್ 2025 ರಲ್ಲಿ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ಪರ ಡಿಪಿಎಲ್‌ಗೆ ಪಾದಾರ್ಪಣೆ ಮಾಡಿದರು.

ಅವರ ಅಲ್ಪಾವಧಿಯಲ್ಲಿ, ಅವರು ತಮ್ಮ ಭರವಸೆಯ ಪ್ರತಿಭೆ ಮತ್ತು ಕೌಶಲ್ಯದಿಂದ ಅಭಿಮಾನಿಗಳನ್ನು ಮೆಚ್ಚಿಸಿದ್ದರು. ಆದರೆ, ಡಿಪಿಎಲ್ 2026 ರಲ್ಲಿ, 18 ವರ್ಷದ ಯುವ ಆಟಗಾರನ ಮೇ ನಿರೀಕ್ಷೆಗಳು ಹೆಚ್ಚಿವೆ.

600 ಆಟಗಾರರಿಂದ ನೋಂದಣಿ

ಡೆಲ್ಲಿ ಪ್ರೀಮಿಯರ್ ಲೀಗ್ 2026 ಹರಾಜು ಜುಲೈ 1 ರಂದು ರಾಷ್ಟ್ರ ರಾಜಧಾನಿಯಲ್ಲಿ ನಡೆಯಿತು. ಹರಾಜಿಗೆ ಒಟ್ಟು 600 ಆಟಗಾರರು ನೋಂದಾಯಿಸಿಕೊಂಡಿದ್ದರು. ತೇಜಸ್ವಿ ದಹಿಯಾ ಮತ್ತು ಹಿಮ್ಮತ್ ಸಿಂಗ್ ಅವರಂತಹ ಆಟಗಾರರ ಮೇಲೆ ಹಣದ ಸುರಿಮಳೆಯಾಯಿತು. ಪ್ರತಿ ತಂಡಕ್ಕೆ ₹1.5 ಕೋಟಿ (15 ಮಿಲಿಯನ್ ರೂಪಾಯಿ) ಬಜೆಟ್ ಹಂಚಿಕೆ ಮಾಡಲಾಯಿತು. ಹರಾಜಿನಲ್ಲಿ ಭಾಗವಹಿಸುವ ಆಟಗಾರರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ: ಮಾರ್ಕ್ಯೂ, A,B,C ಎಂದು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿತ್ತು.

ತೇಜಸ್ವಿ ದಹಿಯಾಗೆ ಬಂಪರ್

ತೇಜಸ್ವಿ ದಹಿಯಾ 2026 ರ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರರಲ್ಲಿ ಒಬ್ಬರಾದರು. ಅವರನ್ನು ₹40 ಲಕ್ಷಕ್ಕೆ ಔಟರ್ ಡೆಲ್ಲಿ ವಾರಿಯರ್ಸ್ ತಂಡಕ್ಕೆ ಮಾರಾಟವಾದರು. ಆದರೆ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಆರ್‌ಟಿಎಂ ಆಯ್ಕೆಯನ್ನು ಬಳಸಿಕೊಂಡು ಅವರನ್ನು ಮರಳಿ ಪಡೆದುಕೊಂಡಿತು.

ಅವರಲ್ಲದೆ, ಭಾರತೀಯ ವೇಗಿ ಮಯಾಂಕ್ ಯಾದವ್ ಅವರನ್ನು ಈಸ್ಟ್ ದೆಹಲಿ ರೈಡರ್ಸ್ ತಂಡಕ್ಕೆ ₹17 ಲಕ್ಷಕ್ಕೆ ಖರೀದಿ ಮಾಡಿತು. ಪುರಾನಿ ದಿಲ್ಲಿ 6 ಹಿಮ್ಮತ್ ಸಿಂಗ್ ಅವರನ್ನು ₹38 ಲಕ್ಷಕ್ಕೆ ಖರೀದಿಸಲು ಪ್ರಯತ್ನಿಸಿತು, ಆದರೆ ನ್ಯೂ ಡೆಲ್ಲಿ ಟೈಗರ್ಸ್ ತಮ್ಮ ಆರ್‌ಟಿಎಂ ಕಾರ್ಡ್ ಬಳಸಿ ಅವರನ್ನು ಉಳಿಸಿಕೊಂಡಿತು.

ಐಪಿಎಲ್‌ನಲ್ಲಿ ಸಿಎಸ್‌ಕೆ ಸೇರಿದ ನಂತರ ಸಂಚಲನ ಸೃಷ್ಟಿಸಿದ್ದ ವಂಶ್ ಬೇಡಿ ಅವರನ್ನು ಸೆಂಟ್ರಲ್ ದೆಹಲಿ ಕಿಂಗ್ಸ್ ₹21 ಲಕ್ಷಕ್ಕೆ ಖರೀದಿಸಿತು. ದಿಗ್ವೇಶ್ ರಾಠಿ ಅವರ ಮಾರುಕಟ್ಟೆ ಮೌಲ್ಯ ಕುಸಿದು, ಪುರಾನಿ ದಿಲ್ಲಿ 6 ತಂಡಕ್ಕೆ ಕೇವಲ ₹11 ಲಕ್ಷಕ್ಕೆ ಹೋದರು.

ಡಿಪಿಎಲ್ 2026 ಸೀಸನ್ ಜುಲೈ 31 ರಂದು ಪ್ರಾರಂಭವಾಗಿ ಆಗಸ್ಟ್ 30 ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆಯಿದೆ.

ವೆಸ್ಟ್ ಡೆಲ್ಲಿ ಲಯನ್ಸ್ ಹಾಲಿ ಚಾಂಪಿಯನ್

ಹಿಂದಿನ ಋತುವಿನಲ್ಲಿ, 2025 ರಲ್ಲಿ, ನಿತೀಶ್ ರಾಣಾ ನಾಯಕತ್ವದ ವೆಸ್ಟ್ ಡೆಲ್ಲಿ ಲಯನ್ಸ್, ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವನ್ನು ಫೈನಲ್‌ನಲ್ಲಿ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 173 ರನ್ ಗಳಿಸಿತು. ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಡೆಲ್ಲಿ ಲಯನ್ಸ್ 18 ಓವರ್‌ಗಳಲ್ಲಿ ಜಯಗಳಿಸಿತು. ನಾಯಕ ನಿತೀಶ್ ಕುಮಾರ್ 49 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಾಯದಿಂದ 79* ರನ್ ಗಳಿಸುವ ಮೂಲಕ ತಂಡದ ಪರ ಅತ್ಯಧಿಕ ಸ್ಕೋರರ್ ಆಗಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed