Last Updated:
ಶರ್ಮಿಳಾ ಮಾಂಡ್ರೆ ಒಂದು ವಿಶೇಷ ವಿಡಿಯೋ ಗಮನ ಸೆಳೆಯುತ್ತಿದೆ. ನಿಶ್ಚಿತಾರ್ಥಕ್ಕಾಗಿಯೇ ಸೀರೆ ಉಡಿಸಿದವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಕನ್ನಡದ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಇತ್ತೀಚಿಗೆ ಎಂಜೇಗ್ ಆಗಿದ್ದಾರೆ. ತಮಿಳು ಚಿತ್ರರಂದ ನಿರ್ಮಾಪಕ ಸುಧನ್ ಸುಂದರಂ (Sudhan Sundaram) ಜೊತೆಗೆ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಹಾಫ್ ವೈಟ್ ಥೀಮ್ ಅಲ್ಲಿಯೇ ಇವರ ಕಾಸ್ಟೂಮ್ ಇದ್ದವು. ಸುದನ್ ಸುಂದರಂ ಹಾಫ್ ವೈಟ್ ಡ್ರೆಸ್ ತೊಟ್ಟಿದ್ದರು. ಶರ್ಮಿಳಾ ಮಾಂಡ್ರೆ ಅವರು ಹಾಫ್ ವೈಟ್ ಸೀರೆಯುಟ್ಟಿದ್ದರು. ಇದು ಗೊತ್ತಿರೊದೇ ಬಿಡಿ. ಆದರೆ, ಶರ್ಮಿಳಾ ಅವರಿಗೆ ಸೀರೆಯುಡಿಸಿದ್ದು (Saree Draper) ಯಾರು ಗೊತ್ತಾ ? ಆ ಮೇಕ್‌ಅಪ್ ಮ್ಯಾನ್ ಈಗೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ.
ಮೇಕ್‌ಅಪ್ ಮ್ಯಾನ್ ಯಾರು
(ಚಿತ್ರ ಕೃಪೆ: ಪುನೀತ್ ಮೇಕ್‌ಅಪ್ ಮ್ಯಾನ್ ಇನ್‌ಸ್ಟಾಗ್ರಾಮ್)
ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಬಿಡಿ. ಆದರೆ, ಮ್ಯಾಟರ್ ಈಗ ಸೀರೆಯುಡಿಸಿರೋದೇ ಆಗಿದೆ. ಶರ್ಮಿಳಾ ಮಾಂಡ್ರೆ ಅವರಿಗೆ ಪುನೀತ್ ಹೆಸರಿನ ಮೇಕ್‌ಅಪ್ ಆರ್ಟಿಸ್ಟ್ ಸೀರೆಯುಡಿಸಿದ್ದಾರೆ.
ಸೀರೆಯುಡಿಸಲು ಅವಕಾಶ ಮಾಡಿಕೊಟ್ಟಿರೋದಕ್ಕೆ ಥ್ಯಾಂಕ್ಸ್ ಅಂತಲೂ ಪುನೀತ್ ಹೇಳಿಕೊಂಡಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಅಲ್ಲೂ ಹೇಳಿಕೊಂಡಿದ್ದಾರೆ.
ಪುನೀತ್ ಥ್ಯಾಂಕ್ಸ್ ಏನೋ ಹೇಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಅಲ್ಲಿ ಶರ್ಮಿಳಾ ಅವರಿಗೆ ಸೀರೆಗೆ ನೇರಿಗೆ ಹಾಕುವ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.
ಇದನ್ನ ನೋಡಿದ ಶರ್ಮಿಳಾ ಮಾಂಡ್ರೆ ಅವರು ಈ ರೀತಿ ಕಾಮೆಂಟ್ ಬಾಕ್ಸ್ ಅಲ್ಲಿ ಹಾಕಿದ್ದಾರೆ. “Ur talented ” ಅಂತಲೇ ಹೇಳಿದ್ದಾರೆ. ಈ ಮೂಲಕ ಪುನೀತ್ ಅವರ ಕೆಲಸವನ್ನ ಮೆಚ್ಚಿಕೊಂಡಿದ್ದಾರೆ.
ಚಾನ್ಸ್ ಕೊಟ್ಟಿದ್ದಕ್ಕೆ ಥ್ಯಾಂ (ಚಿತ್ರ ಕೃಪೆ: ಪುನೀತ್ ಮೇಕ್‌ಅಪ್ ಮ್ಯಾನ್ ಇನ್‌ಸ್ಟಾಗ್ರಾಮ್) ಕ್ಸ್
ಶರ್ಮಿಳಾ ಮಾಂಡ್ರೆ ಅವರು ಇತ್ತೀಚಿಗೆ ಎಂಗೇಜ್ ಆಗಿದ್ದಾರೆ. ತಮಿಳು ಮಹಾರಾಜ ಚಿತ್ರದ ನಿರ್ಮಾಪಕ ಸುಧನ್ ಸುಂದರಂ ಅವರ ಜೊತೆಗೆ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಸುಧನ್ ಸುಂದರಂ ತಮಿಳು ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿಕೊಂಡಿದ್ದಾರೆ. ತಮಿಳಿನ ಮಹಾರಾಜ ಚಿತ್ರವನ್ನ ಇವರೇ ನಿರ್ಮಾಣ ಮಾಡಿದ್ದಾರೆ. ಇವರು ಪ್ಯಾಷನ್ ಸ್ಟುಡಿಯೋಸ್ ಅನ್ನುವ ಒಂದು ಪ್ರೊಡಕ್ಷನ್ ಹೌಸ್ ಕೂಡ ಮಾಡಿಕೊಂಡಿದ್ದಾರೆ.
ಈ ಮೂಲಕವೇ ತಮಿಳು ಚಿತ್ರಗಳನ್ನ ನಿರ್ಮಿಸುತ್ತಾರೆ. ಇವರ ಮಹಾರಾಜ ಚಿತ್ರದಲ್ಲಿ ವಿಜಯ್ ಸೇತುಪತಿ ಅಭಿನಯಿಸಿದ್ದಾರೆ. ಇದು ಸೂಪರ್ ಹಿಟ್ ಕೂಡ ಆಗಿದೆ. ಶರ್ಮಿಳಾ ವಿಚಾರಕ್ಕೆ ಬಂದ್ರೆ, ದರ್ಶನ್ ಅಭಿನಯದ ಡೆವಿಲ್ ಚಿತ್ರದಲ್ಲಿ ಒಂದು ವಿಶೇಷ ರೋಲ್ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













