Mohammad Amir: ಅಂತೂ ಇಂತೂ ಐಪಿಎಲ್‌ನಲ್ಲಿ ಆಡಲು ಅರ್ಹತೆ ಪಡೆದ ಪಾಕ್ ಬೌಲರ್? ಮುಂದಿನ ಆವೃತ್ತಿಯಲ್ಲಿ ವೇಗಿಯ ಕನಸು ನನಸಾಗುತ್ತಾ | ಕ್ರೀಡಾ ಸುದ್ದಿ | ACTPnews

ಮೊಹಮ್ಮದ್ ಅಮೀರ್


Last Updated:

ಪಾಕಿಸ್ತಾನ ವೇಗದ ಬೌಲರ್ ಮುಂದಿನ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಆಡುಬಹುದು. ಈ ಒಂದು ಕಾರಣದಿಂದಾಗಿ ಐಪಿಎಲ್‌ನಲ್ಲಿ ಆಡುವ ಅವರ ಕನಸು ಈಗ ಈಡೇರಬಹುದು.

ಮೊಹಮ್ಮದ್ ಅಮೀರ್
ಮೊಹಮ್ಮದ್ ಅಮೀರ್

ತಮ್ಮ ವೇಗ (Fast) ಮತ್ತು ಸ್ವಿಂಗ್‌ (Swing) ನಿಂದ ವಿಶ್ವ (World) ದ ಅಗ್ರ ಬ್ಯಾಟರ್ (Batter) ​​ಗಳನ್ನು ತೊಂದರೆಗೊಳಿಸಿದ್ದ ಮೊಹಮ್ಮದ್ ಅಮೀರ್ (Mohammad Amir) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಬೌಲಿಂಗ್ (Bowling) ಇಂದಲ್ಲ, ಬದಲಿಗೆ ಹೊಸ ಪೌರತ್ವ. ಪಾಕಿಸ್ತಾನ (Pakistan) ದ ಮಾಜಿ ವೇಗದ ಬೌಲರ್ (Bowler) ಮೊಹಮ್ಮದ್ ಅಮೀರ್ ಅವರಿಗೆ ಬ್ರಿಟಿಷ್ ಪೌರತ್ವ (British Citizenship) ನೀಡಲಾಗಿದೆ. ಅಧಿಕೃತವಾಗಿ ಬ್ರಿಟಿಷ್ ಪಾಸ್‌ಪೋರ್ಟ್ (Passport) ಹೊಂದಿರುವವರಾಗಿದ್ದಾರೆ. ಇದರೊಂದಿಗೆ, ಇಂಡಿಯನ್ ಪ್ರೀಮಿಯರ್ ಲೀಗ್‌ (IPL) ನಲ್ಲಿ ಆಡುವ ಅವರ ಕನಸು ನನಸಾಗಬಹುದು.

ವರದಿಗಳ ಪ್ರಕಾರ, ಹಲವಾರು ವರ್ಷಗಳ ಹಿಂದೆ ಸಲ್ಲಿಸಲಾದ ಅರ್ಜಿಯ ನಂತರ ಬ್ರಿಟಿಷ್ ಸರ್ಕಾರ ಮೊಹಮ್ಮದ್ ಆಮಿರ್‌ಗೆ ಯುಕೆ ಪಾಸ್‌ಪೋರ್ಟ್ ನೀಡಿದೆ. ಅವರ ಪತ್ನಿ ನರ್ಗಿಸ್ ಖಾನ್ ಈಗಾಗಲೇ ಬ್ರಿಟಿಷ್ ಪ್ರಜೆಯಾಗಿದ್ದು, ಇದು ಆಮಿರ್ ಅವರ ಪೌರತ್ವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗ, ಬ್ರಿಟಿಷ್ ಪ್ರಜೆಯಾದ ನಂತರ, ಆಮಿರ್ ಐಪಿಎಲ್ ಸೇರಿದಂತೆ ವಿವಿಧ ಫ್ರಾಂಚೈಸ್ ಲೀಗ್‌ಗಳಲ್ಲಿ ವಿದೇಶಿ ಆಟಗಾರನಾಗಿ ಆಡಲು ಅರ್ಹರಾಗಿದ್ದಾರೆ.

ಐಪಿಎಲ್ ಪ್ರವೇಶಕ್ಕೆ ದಾರಿ ಸುಗಮ

ಇಲ್ಲಿಯವರೆಗೆ, ಪಾಕಿಸ್ತಾನಿ ಆಟಗಾರರನ್ನು ಐಪಿಎಲ್‌ನಲ್ಲಿ ಆಡುವುದನ್ನು ನಿಷೇಧಿಸಲಾಗಿತ್ತು. ಆದರೆ ಮೊಹಮ್ಮದ್ ಅಮೀರ್ ಬ್ರಿಟಿಷ್ ಪ್ರಜೆಯಾದ ನಂತರ ಪರಿಸ್ಥಿತಿ ಬದಲಾಗಿದೆ. ಅವರನ್ನು ಈಗ ಪಾಕಿಸ್ತಾನಿ ಅಲ್ಲ, ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿರುವ ವಿದೇಶಿ ಆಟಗಾರ ಎಂದು ವರ್ಗೀಕರಿಸಲಾಗುತ್ತದೆ. ಹೀಗಾಗಿ, ಐಪಿಎಲ್ ಫ್ರಾಂಚೈಸಿಗಳು ಮುಂಬರುವ ಆವೃತ್ತಿಯಲ್ಲಿ ಅವರ ಮೇಲೆ ಕಣ್ಣಿಡಬಹುದು. ವರದಿಗಳ ಪ್ರಕಾರ, ಅಮೀರ್‌ಗೆ ಐಪಿಎಲ್‌ನಿಂದ ಆಫರ್ ಬಂದರೆ, ಅವರು ಮುಂದಿನ ಆವೃತ್ತಿಯಲ್ಲಿ ಆಡುವುದನ್ನು ಕಾಣಬಹುದು.

ಅಮೀರ್ ಪಾಕಿಸ್ತಾನ ಪರ 36 ಟೆಸ್ಟ್, 61 ಏಕದಿನ ಮತ್ತು 62 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಮೀರ್​​ಗೆ ವೃತ್ತಿಜೀವನದ ಆರಂಭದಲ್ಲಿ, ಅವರನ್ನು ವಿಶ್ವದ ಅತ್ಯಂತ ಅಪಾಯಕಾರಿ ಯುವ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಅವರ ಸ್ವಿಂಗ್ ಮತ್ತು ಹೊಸ ಚೆಂಡಿನೊಂದಿಗೆ ವಿಕೆಟ್ ಪಡೆಯುವ ಸಾಮರ್ಥ್ಯವು ಅವರಿಗೆ ವಿಶೇಷ ಮನ್ನಣೆಯನ್ನು ಗಳಿಸಿತು.

ಕೌಂಟಿ ಕ್ರಿಕೆಟ್ ಆಡುತ್ತಾರಾ?

ಅಮೀರ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿದ್ದು, ಬ್ರಿಟಿಷ್ ಪಾಸ್‌ಪೋರ್ಟ್ ಪಡೆದ ನಂತರ, ಮುಂಬರುವ ಕೌಂಟಿ ಆವೃತ್ತಿಯಲ್ಲಿ ಸ್ಥಳೀಯ ಆಟಗಾರನಾಗಿ ಆಡಲಿದ್ದಾರೆ. ಅವರು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ನಲ್ಲಿ ವಿದೇಶಿ ಆಟಗಾರನಾಗಿಯೂ ಭಾಗವಹಿಸಲಿದ್ದಾರೆ. ಅನುಭವಿ ಎಡಗೈ ವೇಗದ ಬೌಲರ್‌ಗಳು ಟಿ20 ಕ್ರಿಕೆಟ್‌ನಲ್ಲಿ ಯಾವಾಗಲೂ ಬೇಡಿಕೆಯಲ್ಲಿರುತ್ತಾರೆ. ಮೊಹಮ್ಮದ್ ಅಮೀರ್ ಅವರ ಅನುಭವ ಮತ್ತು ಡೆತ್ ಓವರ್ ಬೌಲಿಂಗ್ ಅವರನ್ನು ಐಪಿಎಲ್ ಫ್ರಾಂಚೈಸಿಗಳಿಗೆ ಆಕರ್ಷಕ ಆಯ್ಕೆಯನ್ನಾಗಿ ಮಾಡಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed