Srividya Raj: ನನ್ನ ಪತಿ ನನ್ನ ಹಂಕ್, ದಿಲೀಪ್ ನೆನಪಲ್ಲಿ ಶ್ರೀವಿದ್ಯಾ! ಆ ವಿಡಿಯೋ ವೈರಲ್ | | ACTPnews

dileep raj wife srividya shares emotional video missing husband


ನನ್ನ ಪತಿ…

ದಿಲೀಪ್ ರಾಜ್ ಎಲ್ಲದರಲ್ಲೂ ಆ್ಯಕ್ಟೀವ್ ಆಗಿದ್ದರು. ಕಾಲೇಜು ದಿನಗಳಲ್ಲಿ ಡ್ಯಾನ್ಸ್ ಟ್ರೂಪ್ ಅಲ್ಲೂ ಇದ್ದರು. ನಾಟಕಗಳನ್ನೂ ಮಾಡ್ತಾ ಇದ್ದರು. ಕಾಲೇಜಿಗೆ ಒಂದಿಲ್ಲ ಒಂದು ಕಪ್ ತೆಗೆದು ಕೊಂಡು ಬರೋರು. ನಟ ನವೀನ್ ಕೃಷ್ಣ ಸೆಕೆಂಡ್ ಇದ್ದರೆ, ದಿಲೀಪ್ ಫಸ್ಟ್ ಇರ್ತಾ ಇದ್ದರು.

ದಿಲೀಪ್ ಹೋಗಿ 6 ದಿನಗಳು…

(ಚಿತ್ರ ಕೃಪೆ: ಶ್ರೀವಿದ್ಯಾ ರಾಜ್ ಇನ್‌ಸ್ಟಾಗ್ರಾಮ್)

ಆ ರೀತಿ ಇದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಪ್ರೀತಿಸಿಯೇ ಮದುವೆ ಆಗಿದ್ದಾರೆ. ಎರಡು ಜೀವ ಒಂದೇ ಹೃದಯದಂತೆ ಬದುಕಿದವರು. ನವೀನ್ ಕೃಷ್ಣ ಕಾಲೇಜು ದಿನಗಳಿಂದಲೂ ಇವರ ಪ್ರೀತಿ ನೋಡಿದ್ದಾರೆ. ದಿಲೀಪ್ ರಾಜ್ ಹೋದ ದಿನ ನವೀನ್ ಕೃಷ್ಣ ಇದನ್ನ ಹೇಳಿಕೊಂಡಿದ್ರು.

ಶ್ರೀವಿದ್ಯಾ…

ದಿಲೀಪ್ ರಾಜ್ ಅವರನ್ನ ಶ್ರೀವಿದ್ಯಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅದೆಷ್ಟು ಅನ್ನೋದು ಇನ್‌ಸ್ಟಾಗ್ರಾಮ್‌ನ ಅವರ ಪೋಸ್ಟ್ ನೋಡಿದ್ರೆ ಸಾಕಾಗುತ್ತದೆ.

ದಿಲೀಪ್ ರಾಜ್ ಅವರ ಜೊತೆಗಿನ ವಿಡಿಯೋವನ್ನೂ ಹಂಚಿಕೊಳ್ಳುತ್ತಿದ್ದಾರೆ. ಮಕ್ಕಳ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಹಿಟ್ಲರ್ ಕಲ್ಯಾಣ್ ಸೀರಿಯಲ್‌ನ ಒಂದು ದೃಶ್ಯವನ್ನ ಶ್ರೀವಿದ್ಯಾ ಹಂಚಿಕೊಂಡಿದ್ದಾರೆ.

ನನ್ನ ಪತಿ ಹಂಕ್..

ಈ ಒಂದು ದೃಶ್ಯವನ್ನ ಹಂಚಿಕೊಂಡ ಶ್ರೀವಿದ್ಯಾ, ನನ್ನ ಪತಿ ಹಂಕ್ ಅಂತಲೇ ಬರೆದುಕೊಂಡಿದ್ದಾರೆ. “Hunk” ಅಂತ ಒಂದೇ ಒಂದು ಪದ ಬರೆದುಕೊಂಡಿದ್ದಾರೆ.

dileep raj wife srividya shares emotional video missing husband

ಒಟ್ಟಿಗೆ ಓಡಾಡಿದ ದಿನಗಳು…

(ಚಿತ್ರ ಕೃಪೆ: ಶ್ರೀವಿದ್ಯಾ ರಾಜ್ ಇನ್‌ಸ್ಟಾಗ್ರಾಮ್)

ಈ ಪದಕ್ಕೂ ಹಂಚಿಕೊಂಡ ವಿಡಿಯೋಗೂ ಸಖತ್ ಸಿಂಕ್ ಆಗುತ್ತದೆ. ಈ ದೃಶ್ಯದಲ್ಲಿ ದಿಲೀಪ್ ರಾಜ್ ಮೆಟ್ಟಿಲು ಇಳಿದು ಕೆಳಗೆ ಬರ್ತಾರೆ. ಬಂದು ಒಂದು ವಾಕ್ ಮಾಡ್ತಾರೆ. ಕೊನೆಗೆ ಒಂದು ಲುಕ್ ಕೊಡ್ತಾರೆ. ತುಂಬಾನೆ ಚಂದನೆಯ ಒಂದು ಸ್ಮೈಲ್ ಕೊಡ್ತಾರೆ. ಈ ಎಲ್ಲವನ್ನು ಶ್ರೀವಿದ್ಯಾ ‘ಹಂಕ’ ಅನ್ನುವ ಒಂದೇ ಪದದಲ್ಲಿ ಕಟ್ಟಿಕೊಟ್ಟಿದ್ದಾರೆ.

ದಿಲೀಪ್ ಹೋಗಿ 6 ದಿನಗಳು…

ದಿಲೀಪ್ ರಾಜ್ ಅವರು ಹೋಗಿ 6 ದಿನಗಳು ಕಳೆದಿವೆ. ಮೇ-13 ರಂದು ಹೃದಯಾಘಾತದಿಂದ ಇವರು ಕೊನೆಯುಸಿರೆಳೆದರು. ಇದರಿಂದ ಇಡೀ ಫ್ಯಾಮಿಲಿ ಆ ಶಾಕ್ ಅಲ್ಲಿಯೇ ಇದೆ.

ಇದನ್ನೂ ಓದಿ: Chiranjeevi Workout: ಮೆಗಾಸ್ಟಾರ್ ಮೆಗಾ ವರ್ಕೌಟ್! ಏನಿದು ಮೆಗಾ 158?

ಮಕ್ಕಳಾದ ಅದಿತಿ ಮತ್ತು ಧೃತಿ ಅಪ್ಪನನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪತ್ನಿ ಶ್ರೀವಿದ್ಯಾ ಕೂಡ ದಿಲೀಪ್ ರಾಜ್ ನೆನಪಿನಲ್ಲಿಯೇ ಇದ್ದಾರೆ. ಪತಿ ಜೊತೆಗಿನ ವಿಡಿಯೋಗಳನ್ನೆ ಒಂದೊಂದಾಗಿಯೇ ಹಂಚಿಕೊಳ್ಳುತ್ತಿದ್ದಾರೆ.

ಒಟ್ಟಿಗೆ ಓಡಾಡಿದ ದಿನಗಳು…

ಶ್ರೀವಿದ್ಯಾ ಮತ್ತು ದಿಲೀಪ್ ರಾಜ್ ಒಟ್ಟಿಗೆ ಸಾಕಷ್ಟು ಟೈಮ್ ಕಳೆದಿದ್ದಾರೆ. ಫ್ಯಾಮಿಲಿಗೆ ಟೈಮ್ ಕೊಡೋಕೆ ಆಗ್ಲಿಲ್ಲ. ಈಗ ಕೊಡ್ತಾ ಇದ್ದೇನೆ ಅಂತ ದಿಲೀಪ್ ರಾಜ್ ಅವರು ರಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯಸ್ ಪಾಡ್ ಕಾಸ್ಟ್ ಅಲ್ಲಿಯೇ ಹೇಳಿಕೊಂಡಿದ್ದರು.

ಅದರಂತೆ ದಿಲೀಪ್ ಸಿಕ್ಕ ಸಮಯವನ್ನ ಫ್ಯಾಮಿಲಿಗೆ ಕೊಟ್ಟಿದ್ದರು. ಆ ಕ್ಷಣದ ವಿಡಿಯೋವನ್ನ ಶ್ರೀವಿದ್ಯಾ ಈಗ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಪತಿ ದಿಲೀಪ್ ರಾಜ್ ಅವರನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ದಿಲೀಪ್ ರಾಜ್ ಜೊತೆಗೆ ಹಾಡಿರೋ ವಿಡಿಯೋ, ಸಮುದ್ರ ತೀರದಲ್ಲಿ ಕುಳಿತ ಕ್ಷಣಗಳು, ಒಟ್ಟಿಗೆ ನಡೆದುಕೊಂಡು ಬಂದ ವಿಡಿಯೋ ಹೀಗೆ ಸುಮಾರು ವಿಷಯದ ವಿಡಿಯೋಗಳನ್ನು ಹಂಚಿಕೊಳ್ತಾನೇ ಇದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed