ಎಲ್ಡರ್ಬೆರಿ, ಕಡಿಮೆ-ಪ್ರಸಿದ್ಧ ಹಣ್ಣು, ಶೀತ, ಜ್ವರ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಕಾಲೋಚಿತ ಸೋಂಕುಗಳ ವಿರುದ್ಧ ಹೋರಾಡಲು ಪರಿಪೂರ್ಣವಾದ ಸೂಪರ್‌ಫುಡ್ ಎಂದು ಪುರಾತನ ಕಾಲದಿಂದಲೂ ಹೇಳಲಾಗುತ್ತದೆ. ಇತ್ತೀಚಿನ ಅಧ್ಯಯನವು ಎಲ್ಡರ್ಬೆರಿ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದಿದೆ.
ಒಂದು ವಾರದವರೆಗೆ ಪ್ರತಿದಿನ ಸುಮಾರು 12 ಔನ್ಸ್ ಎಲ್ಡರ್‌ಬೆರಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿ ವಾಸಿಸುವ ಸೂಕ್ಷ್ಮಜೀವಿಗಳ ಸಮುದಾಯವನ್ನು ಬದಲಾಯಿಸಬಹುದು ಮತ್ತು ದೇಹದ ಗ್ಲೂಕೋಸ್ ಸಹಿಷ್ಣುತೆ ಮತ್ತು ಕೊಬ್ಬಿನ ಆಕ್ಸಿಡೀಕರಣವನ್ನು ಸುಧಾರಿಸಬಹುದು ಎಂದು ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆ ಹೇಳುತ್ತಿದೆ.
ಎಲ್ಡರ್ಬೆರಿ ಯುರೋಪ್, ಉತ್ತರ ಅಮೆರಿಕಾ, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಲ್ಲಿ ಬೆಳೆಯುವ ಯುರೋಪಿಯನ್ ಅಥವಾ ಕಡು ನೇರಳೆ ಬೆರ್ರಿ ಆಗಿದೆ. ಪ್ರಾಚೀನ ಕಾಲದಿಂದಲೂ, ಇದನ್ನು ಶೀತ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಬಳಸಲಾಗುತ್ತದೆ.
ಎಲ್ಡರ್ಬೆರಿಗಳನ್ನು ಸಾಮಾನ್ಯವಾಗಿ ಕಚ್ಚಾ ರೀತಿಯಲ್ಲಿ ಸೇವಿಸಲಾಗುವುದಿಲ್ಲ ಏಕೆಂದರೆ ಅವುಗಳು ವಿಷಕಾರಿ ಪದಾರ್ಥಗಳು ಅಥವಾ ವಿಷಕಾರಿ ಸೈನೈಡ್-ಉತ್ಪಾದಿಸುವ ಪದಾರ್ಥಗಳನ್ನು ಹೊಂದಿದ್ದು, ಅದು ವಾಕರಿಕೆ, ವಾಂತಿ ಮತ್ತು ತೀವ್ರವಾದ ಅತಿಸಾರವನ್ನು ಉಂಟುಮಾಡಬಹುದು. ಸೋ, ಅವುಗಳನ್ನು ಬೇಯಿಸುವುದರಿಂದ ಅವುಗಳಲ್ಲಿನ ವಿಷಕಾರಿ ಅಂಶ ಹೋಗುತ್ತದೆ ಮತ್ತು ಪೋಷಕಾಂಶಗಳನ್ನು ನೀಡುತ್ತದೆ.
“ಎಲ್ಡರ್ಬೆರಿ ವಾಣಿಜ್ಯಿಕವಾಗಿ ಮತ್ತು ಪೌಷ್ಟಿಕಾಂಶದ ದೃಷ್ಟಿಯಿಂದ ಕಡಿಮೆ ಮೌಲ್ಯಯುತವಾದ ಬೆರ್ರಿ ಆಗಿದೆ. ನಾವು ಈಗ ಮಾನವ ಆರೋಗ್ಯಕ್ಕೆ ಅದರ ಮೌಲ್ಯವನ್ನು ಗುರುತಿಸಲು ಪ್ರಾರಂಭಿಸುತ್ತಿದ್ದೇವೆ ಮತ್ತು ಫಲಿತಾಂಶಗಳು ಬಹಳ ಉತ್ತೇಜಕವಾಗಿವೆ” ಎಂದು ಅಧ್ಯಯನದ ಸಹ-ಲೇಖಕ ಪ್ಯಾಟ್ರಿಕ್ ಸೊಲ್ವರ್ಸನ್ ಹೇಳಿದರು.
ಎಲ್ಡರ್ಬೆರಿ ಸಮೃದ್ಧವಾದ ವಿಟಮಿನ್ ಸಿ, ಫೈಬರ್, ಫೀನಾಲಿಕ್ ಆಮ್ಲ, ಫ್ಲೇವೊನಾಲ್‌ಗಳು ಮತ್ತು ಆಂಥೋಸಯಾನಿನ್‌ಗಳೊಂದಿಗೆ ಉತ್ಕರ್ಷಣ ನಿರೋಧಕಗಳ ಉಗ್ರಾಣವಾಗಿದೆ. ಒಂದು ಕಪ್ (145 ಗ್ರಾಂ) ತಾಜಾ ಹಣ್ಣುಗಳು ಸುಮಾರು 106 ಕ್ಯಾಲೋರಿಗಳು, 26.7 ಗ್ರಾಂ ಕಾರ್ಬೋಹೈಡ್ರೇಟ್‌ಗಳು ಮತ್ತು 1 ಗ್ರಾಂಗಿಂತ ಕಡಿಮೆ ಕೊಬ್ಬು ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ.
ಎಲ್ಡರ್ಬೆರಿ ರಸವನ್ನು ಸೇವಿಸುವ ಜನರಲ್ಲಿ ಫರ್ಮಿಕ್ಯೂಟ್ಸ್ ಮತ್ತು ಆಕ್ಟಿನೋಬ್ಯಾಕ್ಟೀರಿಯಾದಂತಹ ಬ್ಯಾಕ್ಟೀರಿಯಾ ಗುಂಪುಗಳನ್ನು ಒಳಗೊಂಡಂತೆ ಕರುಳಿನ ಸೂಕ್ಷ್ಮಜೀವಿಗಳ ಪ್ರಮಾಣವನ್ನು ಹೆಚ್ಚಿದೆ ಎಂದು ಕಂಡುಬಂದಿದೆ. ಸಂಶೋಧಕರ ಪ್ರಕಾರ, ರಸವು ಬ್ಯಾಕ್ಟೀರಾಯ್ಡ್‌ಗಳಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಕಡಿಮೆ ಮಾಡಿದೆ.
ಇತರ ಪ್ರಯೋಜನಗಳು
ಸುಧಾರಿತ ಚಯಾಪಚಯ: ಈ ಸೂಕ್ಷ್ಮಜೀವಿಯ ಬದಲಾವಣೆಗಳಿಂದಾಗಿ, ಸುಧಾರಿತ ಚಯಾಪಚಯವನ್ನು ಸಹ ಗಮನಿಸಲಾಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಸಕ್ಕರೆ ನಿಯಂತ್ರಣ ಉತ್ತಮ: ಎಲ್ಡರ್ಬೆರಿ ಜ್ಯೂಸ್ ಜನರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸುಮಾರು 24 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ಪ್ರಯೋಗವು ಕಂಡುಹಿಡಿದಿದೆ. ಈ ಜ್ಯೂಸನ್ನು ಸೇವಿಸಿದ ಭಾಗವಹಿಸುವವರು ಇನ್ಸುಲಿನ್ ಮಟ್ಟದಲ್ಲಿ 9 ಪ್ರತಿಶತದಷ್ಟು ಇಳಿಕೆಯನ್ನು ತೋರಿಸಿದರು.
ಕೊಬ್ಬಿನ ನಷ್ಟ: ಹೆಚ್ಚಿನ ಕಾರ್ಬೋಹೈಡ್ರೇಟ್ ಊಟದ ನಂತರ ಮತ್ತು ಜ್ಯೂಸನ್ನು ಸೇವಿಸಿದ ಗುಂಪಿನಲ್ಲಿ ವ್ಯಾಯಾಮದ ಸಮಯದಲ್ಲಿ ಎಲ್ಡರ್ಬೆರಿ ರಸವು ಕೊಬ್ಬಿನ ಆಕ್ಸಿಡೀಕರಣ ಅಥವಾ ಕೊಬ್ಬಿನಾಮ್ಲಗಳ ವಿಭಜನೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಹಣ್ಣು ದೇಹದ ಫ್ಯಾಟ್ ಅನ್ನು ಬೇಗ ಬರ್ನ್ ಮಾಡಲು ಸಹಾಯ ಮಾಡುವುದರಿಂ ತೂಕ ನಷ್ಟಕ್ಕೂ ಈ ಹಣ್ಣು ಉತ್ತಮ ಆಯ್ಕೆ ಎಂದಿದ್ದಾರೆ ತಜ್ಞರು.












