Last Updated:
ತಾರಕ್ ಸುಮ್ನೆ ಅಲ್ಲ. ತುಂಬಾನೆ ಡೆಡಿಕೇಟೆಡ್ ಆಗಿದ್ದಾರೆ. ಅಷ್ಟೆ ಸ್ಟಬನ್ ಆಗಿದ್ದಾರೆ. ನಾನು ಇಲ್ಲಿವರೆಗೂ ನೋಡದ ಹೀರೋ ಇವರು. ಆ ರೀತಿನೇ ಇರೋ ಜೂನಿಯರ್ ಎನ್‌ಟಿಆರ್ ಬಗ್ಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಸಾಕಷ್ಟು ಮಾತನಾಡಿದ್ದಾರೆ. ಇವರ ಇಂಟ್ರಸ್ಟಿಂಗ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜೂನಿಯರ್ ಎನ್‌ಟಿಆರ್ (Junior NTR ) ಸುಮ್ನೆ ಅಲ್ಲ. ತುಂಬಾನೆ ಸ್ಟಬನ್ ಆಗಿದ್ದಾರೆ. ಅದೆಷ್ಟೆ ಕಷ್ಟದಾಯಕವಾಗಿದ್ದರೂ ಸರಿನೇ. ಮಾಡದೆ ಇರೋದಿಲ್ಲ. ಆ ದಿನ ನಾವು ಡ್ರ್ಯಾಗನ್ ಚಿತ್ರ ಲುಕ್ ಟೆನ್ಸ್ ಮಾಡ್ತಾ ಇದ್ದೇವು. ಆಗಲೇ ನನಗೆ ಅನಿಸಿತು. ತಾರಕ್ (Tarak) ಒಂಚೂರು ವೇಟ್ ಲಾಸ್ ಮಾಡಿದ್ರೆ ಚೆನ್ನಾಗಿರುತ್ತದೆ ಅನಿಸಿತು. ಅದನ್ನ ತಾರಕ್ ಮುಂದೆ ಹೇಳಿದಾಗ ಒಪ್ಪಿದರು. ಆ ಕೂಡಲೇ ತಮ್ಮ ಟ್ರೈನರ್ ಅನ್ನ ಕರೆಸಿದರು. ಆರಂಭದ ಎರಡು ತಿಂಗಳಲ್ಲಿಯೇ ಜೂನಿಯರ್ ಎನ್‌ಟಿಆರ್ (Junior NTR) ಸಾಕಷ್ಟು ವೇಟ್ ಲಾಸ್ (Weight loss) ಮಾಡಿಕೊಂಡರು. ಆದರೆ, ಇದರಿಂದ ತಾರಕ್ ಪತ್ನಿ ಕೂಡ ನನ್ನ ಮೇಲೆ ಸಿಟ್ಟಾದರು. ತಾರಕ್ ಅಮ್ಮ ಕೂಡ ಬೇಸರಪಟ್ಟರು. ಹೀಗೆ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಇವರ ಈ ಮಾತುಗಳ ಸಂಪೂರ್ಣ ವಿವರ ಮುಂದೆ ಇದೆ ಓದಿ.
ನಾನು ಬರೆದ ಕ್ರೂರ ವಿಲನ್
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ಆದರೆ, ತಾರಕ್ ತುಂಬಾನೆ ಆಳಕ್ಕೆ ಹೋದ್ರು. ಕೆಲವೇ ಕೆಲವು ತಿಂಗಳಲ್ಲಿ ದೇಹದ 15 ಕೆಜಿ ತೂಕವನ್ನ ಕಳೆದುಕೊಂಡರು. ಇದರಿಂದ ಆರಂಭದಲ್ಲಿ ತುಂಬಾನೆ ವೀಕ್ ಕೂಡ ಅನಿಸಿದರು.
ತಾರಕ್ ಅವರ ತಾಯಿ ಮತ್ತು ಪತ್ನಿ ನನ್ನ ಮೇಲೆ ತುಂಬಾನೆ ಬೇಸರ ಮಾಡಿಕೊಂಡರು. ಅಷ್ಟು ಕಷ್ಟಪಟ್ಟು ತಾರಕ್ ತಮ್ಮ ದೇಹದ ತೂಕ ಇಳಿಸಿಕೊಂಡಿದ್ದಾರೆ ಅಂತಲೂ ಹೇಳ್ತಾ ಇದ್ದರು.
ತಾರಕ್ ಸ್ನೇಹಿತರು ಹಾಗೂ ಆಪ್ತರಿಗೂ ನನ್ನ ಬಗ್ಗೆ ಬೇಸರ ಇತ್ತು. ಆದರೆ, ತಾರಕ್ ನಿಜಕ್ಕೂ ಅದ್ಭುತವಾಗಿ ರೆಡಿ ಆಗಿಯೇ ಕ್ಯಾಮರಾ ಮುಂದೆ ನಿಂತರು. ಇವರ ಲುಕ್ ನಿಜಕ್ಕೂ ಆಶ್ವರ್ಯ ಮೂಡಿಸಿತ್ತು ಅಂತಲೇ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.
ಡ್ರ್ಯಾಗನ್ ಚಿತ್ರದ ಕಥೆ ಸುಮ್ನೆ ಆಗಿಲ್ಲ. ಇದರ ಮೇಲೆ ಚರ್ಚೆಗಳಾಗಿವೆ. ಜೂನಿಯರ್ ಎನ್‌ಟಿಆರ್ ಮತ್ತು ನಾನು ಸುಮಾರು ಚರ್ಚೆಗಳನ್ನ ಮಾಡಿದ್ದೇವೆ. ಚರ್ಚೆಗಳೆಲ್ಲವು ಆದ್ಮೇಲೆ ಕಥೆಯನ್ನ ಒಂದು ಹಂತಕ್ಕೆ ತಂದಿದ್ದೇವೆ.
ಡ್ರ್ಯಾಗನ್ ಗ್ಲಿಂಪ್ಸ್
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ಎಲ್ಲವು ಓಕೆ ಆದ್ಮೇಲೆ ನಮ್ಮ 6 ಜನ ರೈಟರ್ಸ್ ಈ ಚಿತ್ರದ ಕಥೆ ಮೇಲೆ ಕೆಲಸ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹೀರೋ ಅಲ್ಲ. ಪಕ್ಕಾ ವಿಲನ್ ಆಗಿದ್ದಾರೆ.
ಡ್ರ್ಯಾಗನ್ ಚಿತ್ರದಲ್ಲಿ ಲೂಗರ್ ಅನ್ನುವ ಪಾತ್ರವನ್ನ ತಾರಕ್ ಮಾಡಿದ್ದಾರೆ. ಇದು ನಾನು ಬರೆದ ಅತ್ಯಂತ ಕ್ರೂರ ಖಳನಾಯಕನ ಪಾತ್ರವೇ ಆಗಿದೆ.
ಆದರೆ, ಇದನ್ನ ಒಪ್ಪಿಕೊಳ್ಳವುದಕ್ಕೆ ಧೈರ್ಯ ಬೇಕಾಗುತ್ತದೆ. ಅದನ್ನ ತಾರಕ್ ಮಾಡಿದ್ದಾರೆ. ಪಾತ್ರಕ್ಕಾಗಿ ಜೂನಿಯರ್ ಎನ್‌ಟಿಆರ್ ಎಲ್ಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಪಾತ್ರ ಒಪ್ಪುವ ಮುಂಚೆ ಅಷ್ಟೆ ಯೋಚನೆ ಕೂಡ ಮಾಡಿದ್ದಾರೆ ಅನ್ನೋದನ್ನು ಪ್ರಶಾಂತ್ ನೀಲ್ ಇಲ್ಲಿ ಹೇಳಿಕೊಂಡಿದ್ದಾರೆ.
ಡ್ರ್ಯಾಗನ್ ಚಿತ್ರದ ಗ್ಲಿಂಪ್ಸ್ ಮಾತ್ರ ಬಿಟ್ಟಿದ್ದೇವೆ. ಈ ಚಿತ್ರದಲ್ಲಿ ನಾವು ಏನು ಹೇಳೋಕೆ ಹೋಗ್ತಾ ಇದ್ದೇವೆ ಅನ್ನೋದನ್ನ ರಿವೀಲ್ ಮಾಡಿದ್ದೇವೆ.
ನನ್ನ ಮೇಲೆ ಎಲ್ಲರಿಗೂ ಬೇಸರ
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ದೇಶಕ್ಕೆ ಸ್ವತಂತ್ರ ಸಿಕ್ಕ ನಂತರದ ಕಥೆಯನ್ನ ಚಿತ್ರದಲ್ಲಿ ಹೇಳುತ್ತಿದ್ದೇವೆ. ಹೆರಾಯಿನ್ ಸುತ್ತ ಸ್ಟೋರಿ ಇದೆ. ಆದರೆ, ಚಿತ್ರದ ನಾಯಕ ತಾರಕ್ ಇಲ್ಲಿ ಹೀರೋ ಅಲ್ಲ. ಒಬ್ಬ ಕ್ರೂರ ವಿಲನ್ ಅನ್ನೋದನ್ನು ಪ್ರಶಾಂತ್ ನೀಲ್ Galatta Plus ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
May 21, 2026 10:21 PM IST













