OYO: ಮದುವೆಯಾಗದ ಜೋಡಿಗೆ ಇನ್ಮುಂದೆ ಓಯೋಗಿಲ್ಲ ಎಂಟ್ರಿ: ಹೊಸ ರೂಲ್ಸ್‌ ಏನು ಹೇಳುತ್ತೆ ಗೊತ್ತೇ? | Unmarried couples are no longer allowed to enter Oyo: Oyo Company has implemented new rules | ಟ್ರೆಂಡಿಂಗ್ ಸುದ್ದಿ | ACTPnews

ಮದುವೆಯಾಗದ ಜೋಡಿಗೆ ಇನ್ಮುಂದೆ ಓಯೋಗಿಲ್ಲ ಎಂಟ್ರಿ: ಹೊಸ ರೂಲ್ಸ್‌ ಜಾರಿ ಮಾಡಿದ ಓಯೋ ಕಂಪನಿ


Last Updated:

ಹೋಟೆಲ್ ಚೆಕ್ ಇನ್ ಫ್ಲಾಟ್ಫಾರ್ಮ್ ಓಯೋ ತನ್ನ ಪ್ರಗತಿಯನ್ನು ವೇಗವಾಗಿ ಕಂಡುಕೊಳ್ಳುತ್ತಿದೆ, ಅದರಲ್ಲೂ ಹೊಸ ವರ್ಷದಂದು ಓಯೋಗೆ ಭರ್ಜರಿ ಲಾಭ ಬಂದಿದೆ ಎಂಬ ಸುದ್ದಿಗಳು ಕೇಳಿ ಬರ್ತಿವೆ. ಹೊಸ ವರ್ಷದ ಮುನ್ನಾದಿನದಂದು ವಿಶ್ವದಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರು ಓಯೋ ಕೊಠಡಿಗಳನ್ನು ಬಳಸಿದ್ದಾರೆ ಎಂದು ಸ್ವತಃ ಕಂಪನಿಯ ಸಿಇಒ ರಿತೇಶ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ. ಇನ್ನು ಮದುವೆಯಾಗದ ಜೋಡಿಗೆ ಎಂಟ್ರಿ ನಿಷೇಧ ಮಾಡಿರುವ ಹೊಸ ನಿಯಮಗಳು ಇಲ್ಲಿವೆ..

ಮದುವೆಯಾಗದ ಜೋಡಿಗೆ ಇನ್ಮುಂದೆ ಓಯೋಗಿಲ್ಲ ಎಂಟ್ರಿ: ಹೊಸ ರೂಲ್ಸ್‌ ಜಾರಿ ಮಾಡಿದ ಓಯೋ ಕಂಪನಿ
ಮದುವೆಯಾಗದ ಜೋಡಿಗೆ ಇನ್ಮುಂದೆ ಓಯೋಗಿಲ್ಲ ಎಂಟ್ರಿ: ಹೊಸ ರೂಲ್ಸ್‌ ಜಾರಿ ಮಾಡಿದ ಓಯೋ ಕಂಪನಿ

ಇತ್ತೀಚಿನ ವರ್ಷಗಳಲ್ಲಿ ಹೋಟೆಲ್ ಚೆಕ್ ಇನ್ ಫ್ಲಾಟ್ಫಾರ್ಮ್ (Hotel check-in platform) ಓಯೋ (OYO) ತನ್ನ ಪ್ರಗತಿಯನ್ನು ವೇಗವಾಗಿ ಕಂಡುಕೊಳ್ಳುತ್ತಿದೆ, ಅದರಲ್ಲೂ ಹೊಸ ವರ್ಷದಂದು ಓಯೋಗೆ ಭರ್ಜರಿ ಲಾಭ ಬಂದಿದೆ ಎಂಬ ಸುದ್ದಿಗಳು ಕೇಳಿ ಬರ್ತಿವೆ. ಹೊಸ ವರ್ಷದ ಮುನ್ನಾದಿನದಂದು ವಿಶ್ವದಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರು ಓಯೋ ಕೊಠಡಿಗಳನ್ನು ಬಳಸಿದ್ದಾರೆ ಎಂದು ಸ್ವತಃ ಕಂಪನಿಯ ಸಿಇಒ ರಿತೇಶ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ. ಈ ಭರ್ಜರಿ ಲಾಭದ ಬೆನ್ನಲ್ಲೇ ಓಯೋ ತನ್ನ ಚೆಕ್‌ ಇನ್‌ ನೀತಿಯಲ್ಲಿ ದೊಡ್ಡ ಬದಲಾವಣೆಗಳನ್ನು ಹೊರಡಿಸಿದೆ.

ಪ್ರೇಮಿಗಳಿಗೆ ಬಿಗ್‌ ಶಾಕ್‌ ಕೊಟ್ಟ ಓಯೋ

ಭಾರತದಲ್ಲಿ ಜನಪ್ರಿಯವಾದ ಹೋಟೆಲ್ ಚೆಕ್ ಇನ್ ಫ್ಲಾಟ್ಫಾರ್ಮ್ ಓಯೋವನ್ನು ಹೆಚ್ಚು ಬಳಸೋದೆ ಯುವ ಸಮೂಹ ಅದರಲ್ಲೂ ಪ್ರೇಮಿಗಳು. ಆದರೆ ಓಯೋ ಈ ಲವರ್ಸ್‌ಗಳಿಗೆ ಹೊಸ ನಿಯಮದ ಮೂಲಕ ಬಿಗ್‌ ಶಾಕ್‌ ಕೊಟ್ಟಿದೆ.

ಅವಿವಾಹಿತ ಜೋಡಿಗೆ ಇಲ್ಲ ಎಂಟ್ರಿ

ಓಯೋ ಈ ವರ್ಷದ ಆರಂಭದಲ್ಲಿಯೇ ಪ್ರಮುಖವಾದ ನೀತಿಯನ್ನು ಜಾರಿ ಮಾಡಿದ್ದು, ಅವಿವಾಹಿತ ಜೋಡಿಗೆ ಎಂಟ್ರಿ ಇಲ್ಲ ಎಂಬ ಹೊಸ ನಿಯಮವನ್ನು ಘೋಷಣೆ ಮಾಡಿದೆ. ಈ ನಿಯಮದನುಸಾರ ಇನ್ಮುಂದೆ ಮದುವೆಯಾಗದ ಜೋಡಿಗಳಿಗೆ ಓಯೋ ಹೋಟೆಲ್‌ಗೆ ಅವಕಾಶವಿಲ್ಲ.

ಪ್ರೂಫ್‌ ಇದ್ದರೆ ಮಾತ್ರ ಬುಕ್ಕಿಂಗ್

ಪರಿಷ್ಕೃತ ನೀತಿಯ ಅಡಿಯಲ್ಲಿ, ಚೆಕ್-ಇನ್ ಸಮಯದಲ್ಲಿ ಅಥವಾ ಆನ್‌ಲೈನ್‌ ಬುಕ್ಕಿಂಗ್‌ ಮಾಡುವ ವೇಳೆ, ಸಂಬಂಧದ ಮಾನ್ಯ ಪುರಾವೆಗಳನ್ನು ನೀಡಲು ಓಯೋ ಕೇಳಿದೆ. ಒಂದೊಮ್ಮೆ ವಿವಾಹಿತರಲ್ಲ ಎಂದು ತಿಳಿದು ಬಂದಲ್ಲಿ ಬುಕ್ಕಿಂಗ್‌ ರದ್ದು ಮಾಡುವಂತೆ ಕ್ರಮ ತೆಗೆದುಕೊಳ್ಳಲು ನಿಯಮವನ್ನು ಹೊರಡಿಸಿದೆ.

ಓಯೋ ಈ ಕ್ರಮ ತಕ್ಷಣವೇ ಜಾರಿಗೆ ಬರುವಂತೆ ಇದನ್ನು ಖಚಿತಪಡಿಸಿಕೊಳ್ಳಲು ಮೀರತ್‌ನಲ್ಲಿರುವ ತನ್ನ ಪಾಲುದಾರ ಹೋಟೆಲ್‌ಗಳಿಗೆ ನಿರ್ದೇಶನವನ್ನು ನೀಡಿದೆ. ಕೆಲವು ಮೂಲಗಳು, ಓಯೋ ಕಂಪನಿಯು ಹೆಚ್ಚಿನ ನಗರಗಳಲ್ಲಿ ಈ ನಿಯಮವನ್ನು ಜಾತಿಗೆ ತರಲು ಯೋಚಿಸುತ್ತದೆ ಎಂದು ಹೇಳಿವೆ.

ಈ ನಿಯಮ ತರಲು ಕಾರಣವೇನು?

ದೇಶದಾದ್ಯಂತ ಓಯೊ ಹೋಟೆಲ್‌ಗಳು ಪ್ರಯೋಜನಕಾರಿಯಾಗಿದ್ದರೂ, ಹೆಚ್ಚಿನ ಯುವ ಸಮೂಹ ಮತ್ತು ಜನರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಓಯೋ ಮೇಲಿದೆ. ಹಲವರು ಈ ಬಗ್ಗೆ ದೂರ ನೀಡಿದ್ದಾರೆ ಮತ್ತು ಅವಿವಾಹಿತರು ಕೊಠಡಿಗಳನ್ನು ತೆಗೆದುಕೊಂಡು ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ದೂರುಗಳು, ಅರ್ಜಿಗಳ ಬೆನ್ನಲ್ಲೇ ಈಗ ಓಯೋ ಅವಿವಾಹಿತರಿಗೆ ರೂಮ್‌ ನೀಡಲು ಸಾಧ್ಯವಿಲ್ಲ ಎಂಬ ಕಟ್ಟು ನಿಟ್ಟಿನ ಕ್ರಮ ಹೊರಡಿಸಿದೆ. ಆನ್‌ಲೈನ್‌ ಇಲ್ಲಾ ಹೋಟೆಲ್‌ಗೆ ಬಂದು ಬುಕ್‌ ಮಾಡುವಾಗ ಸಂಬಂಧಕ್ಕೆ ಅಗತ್ಯವಾದ ಪ್ರೂಫ್‌ಗಳನ್ನು ಸಲ್ಲಿಸಬೇಕು ಎಂದು ಹೇಳಿದೆ.

ಈ ನೀತಿಗೆ ಬದ್ಧರಾಗಿರುತ್ತೇವೆ: ಓಯೋ

“OYO ಹಿಂದೆ ನಾಗರಿಕ ಸಮಾಜದ ಗುಂಪುಗಳಿಂದ ವಿಶೇಷವಾಗಿ ಮೀರತ್‌ನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮವನ್ನು ಒತ್ತಾಯಿಸುವ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ. ಹೆಚ್ಚುವರಿಯಾಗಿ, ಕೆಲವು ಇತರ ನಗರಗಳ ನಿವಾಸಿಗಳು ಅವಿವಾಹಿತ ದಂಪತಿಗಳಿಗೆ ಓಯೋ ಹೋಟೆಲ್‌ಗಳಲ್ಲಿ ಚೆಕ್-ಇನ್ ಮಾಡಲು ಅವಕಾಶ ನೀಡದಂತೆ ಅರ್ಜಿ ಸಲ್ಲಿಸಿದ್ದಾರೆ” ಎಂದು ಕಂಪನಿ ತಿಳಿಸಿದೆ.

ಓಯೋ ನಾರ್ತ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಪವಾಸ್ ಶರ್ಮಾ ಮಾತನಾಡಿ, “ಓಯೋ ಸುರಕ್ಷಿತ ಮತ್ತು ಜವಾಬ್ದಾರಿಯುತ ಆತಿಥ್ಯ ಪದ್ಧತಿಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ. ನಾವು ವೈಯಕ್ತಿಕ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವಾಗ, ಕಾನೂನು ಜಾರಿ ಮತ್ತು ನಾಗರಿಕರ ಸಲಹೆ ಆಲಿಸುತ್ತೇವೆ ಮತ್ತು ಕೆಲಸ ಮಾಡುವ ನಮ್ಮ ಜವಾಬ್ದಾರಿಯನ್ನು ನಾವು ಗುರುತಿಸುತ್ತೇವೆ. ನಾವು ಈ ನೀತಿ ಮತ್ತು ಅದರ ಪರಿಣಾಮವನ್ನು ನಿಯತಕಾಲಿಕವಾಗಿ ಪರಿಶೀಲಿಸುವುದನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports