Paaru Serial: ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಪಾರು ಸೀರಿಯಲ್ ತಂಡದಲ್ಲಿದ್ದ ಮತ್ತೊಬ್ಬರು ಸಾವು | After Dileep raj another guy from paaru serial team passes away | | ACTPnews

ನಂದೀಶ್


Last Updated:

Paaru Seria: ಪಾರು ಸೀರಿಯಲ್ ನಟ ದಿಲೀಪ್ ರಾಜ್ ಸಾವಿನ ಬೆನ್ನಲ್ಲೇ ಈಗ ಪಾರು ತಂಡದ ಇನ್ನೊಬ್ಬರ ಸದಸದ್ಯ ಮೃತಪಟ್ಟಿದ್ದಾರೆ.

ನಂದೀಶ್
ನಂದೀಶ್

ಪಾರು ಸೀರಿಯಲ್​ (Serial) ಈಗ ಸುದ್ದಿಯಾಗುತ್ತಿದೆ. ಪ್ರಸಾರ ಶುರುವಾಗಿ, ಜನರ ಮೆಚ್ಚುಗೆ ಗಳಿಸಿ ಮುಕ್ತಾಯಗೊಂಡ ಪಾರು ಸೀರಿಯಲ್ ಈಗ ಬೇರೆಯೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಪಾರು (Paaru) ಧಾರಾವಾಹಿಯಲ್ಲಿ ನಟಿಸಿದ್ದ ನಟ ದಿಲೀಪ್ ರಾಜ್ ಅವರ ಸಾವಿನ ಬೆನ್ನಲ್ಲಿಯೇ ಈಗ ಇದೇ ತಂಡದ ಇನ್ನೊಬ್ಬರು ಮೃತಪಟ್ಟಿದ್ದಾರೆ.

ಕನ್ನಡ ಪತ್ರಿಕೋದ್ಯಮಕ್ಕೆ ಮತ್ತೊಂದು ಆಘಾತ ಎದುರಾಗಿದ್ದು ಯುವ ಪತ್ರಕರ್ತರಾಗಿದ್ದ ನಂದೀಶ್‌ ತೀರ್ಥಹಳ್ಳಿ ಮೃತಪಟ್ಟಿದ್ದಾರೆ. ನಂದೀಶ್ ತೀರ್ಥಹಳ್ಳಿ ಅವರು ಕೂಡಾ ಪಾರು ಸೀರಿಯಲ್​ಗಾಗಿ ಕೆಲಸ ಮಾಡಿದವರೇ. ಅವರಿಗೆ ಕೇವಲ 38 ವರ್ಷ.

ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ನಂದೀಶ್ ಅವರು ಸಿನಿಮಾ, ಸಾಹಿತ್ಯ ಎಂದು ಬಣ್ಣದ ಲೋಕದ ಜೊತೆ ನಂಟು ಹೊಂದಿದ್ದರು. ಮೇ 20ರಂದು ಬೆಳಗ್ಗೆ ನಂದೀಶ್ ತೀರ್ಥಹಳ್ಳಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ಸಾಗುವ ಮುನ್ನವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತಾಯಿ, ತಂಗಿ, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ನಂದೀಶ್ ಅಗಲಿದ್ದಾರೆ. ಏಪ್ರಿಲ್ 6, 1988 ರಂದು ಜನಿಸಿದ ನಂದೀಶ್, ಶಿವಮೊಗ್ಗದ ತೀರ್ಥಹಳ್ಳಿಯಲ್ಲೇ ಬೆಳೆದರು. ತುಂಗ ಮಹಾವಿದ್ಯಾಲಯದಲ್ಲಿ ಪದವಿ ಪಡೆದ ನಂದೀಶ್, ‘ಚಿತ್ತಾರ’ದಲ್ಲಿ ಸಿನಿಪತ್ರಕರ್ತರಾಗಿ ಗುರುತಿಸಿಕೊಂಡರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಪಾರು’ ಧಾರಾವಾಹಿಗೆ ಸ್ಕ್ರೀನ್ ಪ್ಲೇ ರೈಟರ್‌ ಆಗಿ, ಕನ್ನಡ ಚಿತ್ರರಂಗದಲ್ಲಿ ಸಂಭಾಷಣೆಕಾರರಾದರು. ಕೆಲವು ದಿನಗಳ ಹಿಂದೆಯಷ್ಟೇ ಪಾರು ಧಾರಾವಾಹಿಯ ದಿಲೀಪ್ ರಾಜ್ ಮೃತಟಪಟ್ಟಿದ್ದರು. ಈಗ ನಂದೀಶ್ ಅವರು ಮೃತಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports