Balan Movie: ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್! | | ACTPnews

ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್!


Last Updated:

ಬಾಲನ್ ದಿ ಬಾಯ್ ಅಂತಿಂತ ಸಿನಿಮಾ ಅಲ್ಲ ಬಿಡಿ. ಇದರ ಟ್ರೈಲರ್ ನೋಡಿದ್ರೆ ಬೆಚ್ಚಿ ಬೀಳ್ತೀರಾ. ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್ ಆಗಿಯೇ ಇದೆ. ಇದರ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.

ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್!
ವೈಲೆನ್ಸ್ ಇಲ್ಲಿ ಅಷ್ಟೆ ಸೈಲೆಂಟ್; ಬಾಲನ್ ಚಿತ್ರದ ಟ್ರೈಲರ್ ಕೊಡ್ತದೆ ಶಾಕ್ ಮೇಲೆ ಶಾಕ್!

ಒಂದು ಊರು, ಒಂದು ಹೆಸರು. ಮತ್ತೊಂದು ಊರು ಮತ್ತೊಂದು ಹೆಸರು. ಅಮ್ಮ ಮತ್ತು ಮಗನ (Mother and Son) ಜೀವನ ಹೀಗೆ ಸಾಗುತ್ತಲೇ ಇರುತ್ತದೆ. ಡಬಲ್ ಬ್ಯಾರಲ್ ಗನ್ ನಿಂದ ಅಮ್ಮ ಅದ್ಯಾರೋ ಅಜ್ಜಿಯನ್ನ (Grandmother) ಶೂಟ್ ಮಾಡಿ ಕೊಂದು ಹಾಕುತ್ತಾಳೆ. ಈ ಕೊಲೆ ಮಾಡಿರೋದಕ್ಕೇನೆ ಅಮ್ಮ ಮತ್ತು ಮಗ ಊರಿಂದ ಊರಿಗೆ ತಲೆಮರೆಸಿಕೊಂಡು ಓಡಾಡ್ತಾರೆ ಅನಿಸುತ್ತದೆ. ಆದರೆ, ಇಲ್ಲಿ ಅಮ್ಮನ ವರ್ತನೆ ನಾರ್ಮಲ್ ಅನಿಸೋದಿಲ್ಲ. ಅಬ್‌ನಾರ್ಮಲ್ ಅನಿಸೋಕೆ ಶುರು ಆಗುತ್ತದೆ. ಬಹು ಭಾಷೆಯಲ್ಲಿ ಬರ್ತಿರೋ ಮಲೆಯಾಳಂ (Malayalam) ಭಾಷೆಯ ಬಾಲನ್ ದಿ ಬಾಯ್ ಚಿತ್ರದ (Balan the Boy Movie) ಟ್ರೈಲರ್ ಇಷ್ಟೆಲ್ಲ ವಿಷಯವನ್ನು ಹೇಳುತ್ತದೆ. ಇತ್ತೀಚಿನ ಕಾನ್ಸ್ ಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಆಗಿದೆ. ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರ ರಿಲೀಸ್‌ಗೆ ಸಜ್ಜಾಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಭಯಂಕರ್ ಬಾಲನ್ ಸಿನಿಮಾ

ಬಾಲನ್ ಚಿತ್ರದ ಪೋಸ್ಟರ್ ನೋಡಿದಾಗ ಇದು ಅಮ್ಮ ಮತ್ತು ಮಗನ ಒಂದು ಬಾಂಧವ್ಯದ ಸಿನಿಮಾ ಅನಿಸುತ್ತದೆ. ಆದರೆ, ಇದರ ಒಳಗೆ ಇರೋ ಕತೆ ಸಸ್ಪೆನ್ಸ್ ಆಗಿದೆ. ಥ್ರಿಲ್ಲಿಂಗ್ ಕತೆ ಇದರಲ್ಲಿದೆ.
Balan The Boy Chidambaram Direction Movie Release Soon

ಭಯಂಕರ್ ಬಾಲನ್ ಸಿನಿಮಾ

ಅಮ್ಮ ಮತ್ತು ಮಗನ ಸಿನಿಮಾ ಇದಾಗಿದೆ. ಮುಗ್ಧ ಮಗನನ್ನ ಕರೆದುಕೊಂಡು ಅಮ್ಮ ಊರು ಊರು ಸುತ್ತಲೇ ಇರ್ತಾಳೆ. ಕಾರಣ ಅಮ್ಮ ನಾರ್ಮಲ್ ಅಲ್ಲ. ಅಬ್‌ನಾರ್ಮಲ್ ಅನಿಸುತ್ತದೆ. ಅಂದ್ರೆ ಸೈಕೋ ಕಿಲ್ಲರ್ ಅಂತಿವಲ್ಲ ಆ ರೀತಿಯೇ ಕಿಲ್ಲರ್ ಈ ಅಮ್ಮ ಅಂತಲೂ ಫೀಲ್ ಆಗುತ್ತದೆ.

ಟ್ರೈಲರ್ ಹೇಳುವ ಅಸಲಿ ಸತ್ಯ

ಬಾಲನ್ ದಿ ಬಾಯ್ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇದನ್ನ ನೋಡ್ತಾ ಹೋದ್ರೆ ನಿಮಗೆ ಭಯ ಹುಟ್ಟುತ್ತದೆ. ಏನಪ್ಪ ಇದು ಅಮ್ಮ ಹಿಂಗಿದ್ದಾರೆ. ಮಗ ಮುಗ್ಧನೇ ಆಗಿದ್ದಾನೆ.

ಆದರೆ, ಅಮ್ಮನ ಕ್ರೈಮ್ ಅಲ್ಲಿ ಈತನೂ ಭಾಗಿನಾ ಅನ್ನಿಸೋಕೆ ಶುರು ಆಗುತ್ತದೆ. ಪ್ರತಿ ಊರಲ್ಲಿ ಒಂದೊಂದು ಹೆಸರು ಇಟ್ಟುಕೊಳ್ಳುತ್ತಾರೆ. ಅಮ್ಮ ಒಂದೊಂದು ಕೆಲಸ ಮಾಡ್ತಾಳೆ.

ಪೊಲೀಸರು ಬೆನ್ನಟ್ಟಿ ಬರುವರು

ಅಮ್ಮ ಮತ್ತು ಮಗನನ್ನ ಹುಡುಕಿಕೊಂಡು ಪೊಲೀಸರು ಬರ್ತಾನೇ ಇರ್ತಾರೆ. ಆದರೆ, ಯಾಕೆ ಅನ್ನೋದು ತಿಳಿಯೋದಿಲ್ಲ. ಅಷ್ಟರಲ್ಲಿ ಒಂದು ಕೊಲೆ ಮಾಡಿರೋ ವಿಷಯವು ಈ ಟ್ರೈಲರ್ ಅಲ್ಲಿ ರಿವೀಲ್ ಆಗುತ್ತದೆ.

Balan The Boy Chidambaram Direction Movie Release Soon

ಟ್ರೈಲರ್ ಹೇಳುವ ಅಸಲಿ ಸತ್ಯ

ಮಲೆಯಾಳಂ ಭಾಷೆಯ ಈ ಚಿತ್ರ ಅದೇ ಪರಿಸರದಲ್ಲಿಯೇ ಇದೆ. ಆದರೆ, ಇದನ್ನ ಕನ್ನಡ, ಹಿಂದಿ, ತಮಿಳು ಹೀಗೆ ಬಹು ಭಾಷೆಯಲ್ಲಿ ಡಬ್ ಮಾಡಲಾಗಿದೆ. ಈ ಎಲ್ಲ ಭಾಷೆಯ ಟ್ರೈಲರ್ ಕೂಡ ರಿಲೀಸ್ ಆಗಿವೆ.

ಜೂನ್-19 ರಂದು ಚಿತ್ರ ರಿಲೀಸ್

ಜೂನ್-19 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಅಧಿಕೃತವಾಗಿಯೇ ಈ ಡೇಟ್ ರಿವೀಲ್ ಆಗಿದೆ. ಕೆವಿಎನ್ ಸಂಸ್ಥೆ ಈ ಚಿತ್ರವನ್ನ ನಿರ್ಮಾಣ ಮಾಡಿದೆ.

‘ಮಂಜುಮ್ಮೆಲ್‌ ಬಾಯ್ಸ್‌’‌ ಚಿತ್ರ ತಂಡವೇ ಈ ಸಿನಿಮಾ ಮಾಡಿದೆ. ‘ಮಂಜುಮ್ಮೆಲ್‌ ಬಾಯ್ಸ್‌’‌ ಮಾಲಿವುಡ್‌ನಲ್ಲಿ ಭಾರೀ ದೊಡ್ಡ ಹೊಸ ಅಲೆಯನ್ನೆ ಎಬ್ಬಿಸಿತ್ತು. ಅದೇ ಚಿತ್ರದ ಡೈರೆಕ್ಟರ್ ಚಿದಂಬರಂ ಈ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ.

ಆವೇಶಂ ನಿರ್ದೇಶಿಸಿದ್ದ ಜಿತು ಮಾಧವನ್‌ ಈ ಚಿತ್ರಕ್ಕೆ ಕತೆ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್ ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಏನೋ ಮಾಡುವಂತೆ ಇದೆ. ಆದರೆ, ಇದರಲ್ಲಿ ವೈಲೆನ್ಸ್ ಅಷ್ಟೆ ಸೈಲೆಂಟ್ ಆಗಿದೆ. ಹಾಗಾಗಿ ಈ ಚಿತ್ರ ಬೇರೆ ರೀತಿಯ ಸಿನಿಮಾ ಅನಿಸುತ್ತಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports