Star Airlines: ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ಮತ್ತೆ ವಿಮಾನ ಹಾರಾಟ, ಫ್ಲೈಟ್ ವೇಳಾ ಪಟ್ಟಿಯ ವಿವರ ಇಲ್ಲಿದೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ಬೀದರ್ ಕಲಬುರಗಿ ವಿಮಾನ


Last Updated:

ಬೆಂಗಳೂರು-ಬೀದರ್, ಬೆಂಗಳೂರು-ಕಲಬುರಗಿ ನೇರ ವಿಮಾನ ಸೇವೆ ಜೂನ್ 1 ಮತ್ತು 10ರಿಂದ ಸ್ಟಾರ್ ಏರ್ ಮೂಲಕ ಪುನರಾರಂಭ, ರಾಜ್ಯ ಸರ್ಕಾರ ಅನುದಾನ, ಉಡಾನ್ ಯೋಜನೆ ನೆರವು, ಪ್ರಯಾಣಿಕರಲ್ಲಿ ಸಂತಸ

ಬೆಂಗಳೂರು ಬೀದರ್ ಕಲಬುರಗಿ ವಿಮಾನ
ಬೆಂಗಳೂರು ಬೀದರ್ ಕಲಬುರಗಿ ವಿಮಾನ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಒಂದು ಭರ್ಜರಿ ಸಿಹಿಸುದ್ದಿ. ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿದ್ದ ಬೆಂಗಳೂರು (Bengaluru)-ಬೀದರ್ ಮತ್ತು ಬೆಂಗಳೂರು-ಕಲಬುರಗಿ (Kalaburagi) ನಡುವಿನ ನೇರ ವಿಮಾನ ಸೇವೆ (Air Service) ಮತ್ತೆ ಪುನರಾರಂಭಗೊಳ್ಳಲಿದೆ. ರಾಜ್ಯ ಸರ್ಕಾರದ (Govt) ವಿಶೇಷ ಪ್ರಯತ್ನ ಮತ್ತು ಅನುದಾನದ ನೆರವಿನಿಂದ ಈ ಮಹತ್ವದ ವಾಯು ಸಂಪರ್ಕಕ್ಕೆ ಮರುಜೀವ ಸಿಕ್ಕಿದ್ದು, ಪ್ರಯಾಣಿಕರಲ್ಲಿ ಸಂತಸ ಮನೆಮಾಡಿದೆ.

ಯಾವಾಗಿಂದ ಸಂಚಾರ?

ದೀರ್ಘ ಕಾಯುವಿಕೆಯ ನಂತರ, ಜೂನ್ 1ರಿಂದ ಬೆಂಗಳೂರು-ಬೀದರ್ ನಡುವೆ ಸ್ಟಾರ್ ಏರ್‍ಲೈನ್ ವಿಮಾನ ಸೇವೆ ಆರಂಭವಾಗಲಿದೆ. ಹಾಗೆಯೇ, ಜೂನ್ 10ರಿಂದ ಬೆಂಗಳೂರು-ಕಲಬುರಗಿ ನಡುವಿನ ವಿಮಾನ ಹಾರಾಟಕ್ಕೂ ಚಾಲನೆ ಸಿಗಲಿದೆ. ಟಿಕೆಟ್ ಬುಕಿಂಗ್ ಪ್ರಕ್ರಿಯೆಯು ಶೀಘ್ರವೇ ಆರಂಭವಾಗಲಿದ್ದು, ಪ್ರಯಾಣಿಕರು ಆನ್‍ಲೈನ್‍ನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ ಎಂದು ವಿಜಯ ಕರ್ನಾಟಕ ವೆಬ್‍ಸೈಟ್ ವರದಿ ಮಾಡಿದೆ.
ವಿಮಾನದ ವೇಳಾಪಟ್ಟಿ ಹೀಗಿದೆ

ಬೆಂಗಳೂರು-ಬೀದರ್: ಬೆಂಗಳೂರಿನಿಂದ ಪ್ರತಿದಿನ ಬೆಳಗ್ಗೆ 6.30ಕ್ಕೆ ಹೊರಡುವ ವಿಮಾನ 7.45ಕ್ಕೆ ಬೀದರ್ ತಲುಪಲಿದೆ. ವಾಪಸ್ ಬೀದರ್‍ನಿಂದ 8.15ಕ್ಕೆ ಹೊರಟು 9.30ಕ್ಕೆ ಬೆಂಗಳೂರು ತಲುಪಲಿದೆ.

ಬೆಂಗಳೂರು-ಕಲಬುರಗಿ: ಬೆಂಗಳೂರಿನಿಂದ ಸಂಜೆ 6ಕ್ಕೆ ಹೊರಟು 7.10ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಸಂಜೆ 7.40ಕ್ಕೆ ಹೊರಟು ರಾತ್ರಿ 8.50ಕ್ಕೆ ಬೆಂಗಳೂರು ತಲುಪಲಿದೆ.

ಈ ಸಂಪರ್ಕ ಯಾಕೆ ಮುಖ್ಯ?

ಕಳೆದ ಅಕ್ಟೋಬರ್ ನಲ್ಲಿ ಸ್ಥಗಿತಗೊಂಡಿದ್ದ ಈ ಸೇವೆಯು ವ್ಯಾಪಾರ, ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿತ್ತು. ಇದೀಗ ಉಡಾನ್ ಯೋಜನೆಯಡಿ ಮತ್ತು ರಾಜ್ಯ ಸರ್ಕಾರದ ವಿಜಿಎಫ್ ನೆರವಿನಿಂದ ವಿಮಾನ ಸೇವೆ ಪುನರಾರಂಭವಾಗುತ್ತಿರುವುದು ಈ ಭಾಗದ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡಲಿದೆ. ಪ್ರಿಯಾಂಕ್ ಖರ್ಗೆ ಮತ್ತು ಈಶ್ವರ್ ಖಂಡ್ರೆ ಅವರ ನಿರಂತರ ಪ್ರಯತ್ನದ ಫಲವಾಗಿ ಮತ್ತೆ ಕಲ್ಯಾಣ ಕರ್ನಾಟಕವು ಬೆಂಗಳೂರಿನೊಂದಿಗೆ ಆಕಾಶ ಮಾರ್ಗದಲ್ಲಿ ಬೆಸೆಯಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed