India vs Afghanistan: ಗುರ್ಬಾಜ್​ ಸಿಡಿಲಬ್ಬರದ ಶತಕವನ್ನ ಸೈಡ್​ಲೈನ್ ಮಾಡಿದ ದುಬೆ, ಗುರ್ನೂರ್! ಭಾರತಕ್ಕೆ ಸಾಧಾರಣ ಗುರಿ ನೀಡಿದ ಅಫ್ಘಾನಿಸ್ತಾನ! | ಕ್ರೀಡಾ ಸುದ್ದಿ | ACTPnews

ರಹಮಾನುಲ್ಲಾ ಗುರ್ಬಾಜ್


Last Updated:

25 ಓವರ್​ಗಳಿಗೆ ಇಳಿಸಲ್ಪಟ್ಟ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 25 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 194 ರನ್‌ಗಳಿಗೆ ಆಲೌಟ್ ಆಯಿತು. ಅಫ್ಘಾನ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಹಮಾನುಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು.

 ರಹಮಾನುಲ್ಲಾ ಗುರ್ಬಾಜ್
ರಹಮಾನುಲ್ಲಾ ಗುರ್ಬಾಜ್

ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ.  ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಅಫ್ಘಾನಿಸ್ತಾನವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಮಳೆಯಿಂದಾಗಿ ಟಾಸ್ ಸುಮಾರು 4 ಗಂಟೆ ವಿಳಂಬವಾಯಿತು. ಹಾಗಾಗಿ ಪಂದ್ಯವನ್ನು 25-25 ಓವರ್ಗಳಿಗೆ ಇಳಿಸಲಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 25 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 194 ರನ್​ಗಳಿಗೆ ಆಲೌಟ್ ಆಯಿತು. ಅಫ್ಘಾನ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ರಹಮಾನುಲ್ಲಾ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು.

ಕಳಪೆ ಆರಂಭ ಪಡೆದ ಅಫ್ಘಾನ್

ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನದ ಆರಂಭ ಕಳಪೆಯಾಗಿತ್ತು. ಐದು ಓವರ್ ಗಳ ಪವರ್ ಪ್ಲೇನಲ್ಲಿ ಅಫ್ಘಾನಿಸ್ತಾನ 27 ರನ್ ಸೇರಿಸಿ ಮೂರು ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್ ನಲ್ಲಿ ಗುರ್ನೂರ್ ಇಬ್ರಾಹಿಂ ಜದ್ರಾನ್ (1) ವಿಕೆಟ್ ಪಡೆದರೆ. ಮೂರನೇ ಓವರ್​ನಲ್ಲಿ ಅರ್ಷದೀಪ್ ಸಿಂಗ್ ಸೆದಿಕುಲ್ಲಾ ಅಟಲ್ (0) ಮತ್ತು ಐದನೇ ಓವರ್ ನಲ್ಲಿ ರಹಮತ್ ಶಾ (4) ವಿಕೆಟ್ ಪಡೆದು ಆಘಾತನ ನೀಡಿದರು.

ಗುರ್ಬಾಜ್ ಸಿಡಿಲಬ್ಬರದ ಶತಕ

ಆದರೆ ನಂತರ ರಹಮಾನುಲ್ಲಾ ಗುರ್ಬಾಜ್ ತಂಡವನ್ನ ಏಕಾಂಗಿಯಾಗಿ ಮುನ್ನಡೆಸಿಕೊಂಡು ಹೋದರು. ಭಾರತದ ಅನಾನುಭವಿ ಬೌಲಿಂಗ್ ದಾಳಿಯನ್ನ ಧ್ವಂಸ ಮಾಡಿದ ಗುರ್ಬಾಜ್​ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟಾರೆ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 102 ರನ್​ಗಳಿಸಿದರು. ಗುರ್ಬಾಜ್ ನಾಲ್ಕನೇ ವಿಕೆಟ್​ಗೆ ಹಶ್ಮತುಲ್ಲಾ ಶಾಹಿದಿ ಜೊತೆ 116 ರನ್ ಗಳ ಜೊತೆಯಾಟ ನೀಡಿದರು. 16ನೇ ಓವರ್ ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಗುರ್ಬಾಜ್ ಬೌಲ್ಡ್ ಆದರು.

ಗುರ್ಬಾಜ್​ ನಂತರ ಅಫ್ಘಾನ್ ರನ್​ಗತಿಗೆ ಕಡಿವಾಣ ಬಿದ್ದಿತು. 17ನೇ ಓವರ್ ನಲ್ಲಿ ಹರ್ಷ್ ದುಬೆ ನಾಯಕ ಶಾಹಿದಿಯನ್ನು ಔಟ್ ಮಾಡಿದರು. ಶಾಹಿದಿ 30 ಎಸೆತಗಳಲ್ಲಿ 3 ಬೌಂಡರಿಗಳನ್ನು ಒಳಗೊಂಡಂತೆ 27 ರನ್ ಗಳಿಸಿದರು. ಅಜ್ಮತುಲ್ಲಾ ಒಮರ್ಝೈ 16 ಎಸೆತಗಳಲ್ಲಿ 3 ಸಿಕ್ಸರ್​​ಗಳ ಸಹಿತ 26, ಮೊಹಮ್ಮದ್ ನಬಿ 14 ಎಸೆತಗಳಲ್ಲಿ 9, ರಶೀದ್ ಖಾನ್ 9 ರನ್​ಗಳಿಸಿದರು.

ಮಿಂಚಿದ ಪದಾರ್ಪಣೆ ಬೌಲರ್ಸ್

ಭಾರತದ ಪರ ಇಂದೇ ಮೊದಲ ಏಕದಿನ ಪಂದ್ಯವನ್ನಾಡಿದ ಗುರ್ನೂರ್ ಬ್ರಾರ್ 27ಕ್ಕೆ3  ಹಾಗೂ ಹರ್ಷ್ ದುಬೆ 47ಕ್ಕೆ3 ಮಿಂಚಿನ ಪ್ರದರ್ಶನ ನೀಡಿದರು. ಅರ್ಷದೀಪ್ ಸಿಂಗ್ 27ಕ್ಕೆ2 ಹಾಗೂ  ನಿತೀಶ್ ಕುಮಾರ್ ರೆಡ್ಡಿ 31ಕ್ಕೆ2 ನಿರ್ಣಾಯಕ  ವಿಕೆಟ್ ಪಡೆದು ಅಫ್ಘಾನ್ ತಂಡ 200ರ ಗಡಿ ದಾಟದಂತೆ ತಡೆದರು.

ಪ್ಲೇಯಿಂಗ್ ಇಲೆವೆನ್

ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ ದುಬೆ, ಗುರ್ನೂರ್ ಬ್ರಾರ್, ಅರ್ಷ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ.

ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಝದ್ರಾನ್, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸೀದಿಕುಲ್ಲಾ ಅಟಲ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಉಮರ್ಜೈ, ಮೊಹಮ್ಮದ್ ನಬಿ, ರಶೀದ್ ಖಾನ್, ಮೊಹಮ್ಮದ್ ಸಲೀಮ್ ಸಫಿ, ಅಲ್ಲಾ ಘಜನ್ಫರ್, ಜಿಯಾ ಉರ್ ರೆಹಮಾನ್ ಶರೀಫಿ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

India vs Afghanistan: ಗುರ್ಬಾಜ್​ ಸಿಡಿಲಬ್ಬರದ ಶತಕವನ್ನ ಸೈಡ್​ಲೈನ್ ಮಾಡಿದ ದುಬೆ, ಗುರ್ನೂರ್! ಭಾರತಕ್ಕೆ ಸಾಧಾರಣ ಗುರಿ ನೀಡಿದ ಅಫ್ಘಾನಿಸ್ತಾನ!



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports