Illegal Mosque: ಜಪಾನ್‌ನಲ್ಲಿ ಅಕ್ರಮ ಮಸೀದಿ ನಿರ್ಮಿಸಿದ ಪಾಕಿಸ್ತಾನ! ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂದ ರಾಯಭಾರ ಕಚೇರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಸೈತಾಮಾ ಪ್ರಾಂತ್ಯದ ಕವಾಗೋದಲ್ಲಿರುವ ಈ ಮಸೀದಿ, ಪರ್ವತ ಅರಣ್ಯ ಭೂಮಿ ಎಂದು ವರ್ಗೀಕರಿಸಲಾದ 4,500 ಚದರ ಮೀಟರ್ ಜಮೀನಿನಲ್ಲಿದೆ. ಈ ಸ್ಥಳವು ನಗರೀಕರಣ ನಿಯಂತ್ರಣ ಪ್ರದೇಶದೊಳಗೆ ಬರುತ್ತದೆ, ಸ್ಥಳೀಯ ಅಧಿಕಾರಿಗಳಿಂದ ವಿಶೇಷ ಅನುಮತಿ ಪಡೆಯದ ಹೊರತು ಯಾವುದೇ ಕಟ್ಟಡದವನ್ನು ಅಕ್ರಮ ಎಂದು ಘೋಷಣೆ ಮಾಡಲಾಗುತ್ತದೆ.

News18
News18

ಟೋಕಿಯೋ: ಜಪಾನ್‌ನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಿರುವ ಪಾಕಿಸ್ತಾನಕ್ಕೆ ಇದೀಗ ಜಾಗತಿಕವಾಗಿ ಮತ್ತೊಂದು ಮುಜುಗರ ಉಂಟಾಗಿದೆ. ಜಪಾನ್‌ನಲ್ಲಿರುವ ಪಾಕಿಸ್ತಾನದ ವಲಸೆಗಾರರಿಗೆ, ಕವಾಗೋ ನಗರದಲ್ಲಿ (Pakistan Builts Mosque Illegal) ಅಕ್ರಮವಾಗಿ ನಿರ್ಮಿಸಲಾದ ಮಸೀದಿಯು ಈಗ ಸಂಕಷ್ಟ ಎದುರಿಸುತ್ತಿದೆ.

ಏಪ್ರಿಲ್‌ನಲ್ಲಿ ಜಪಾನ್‌ನ ಪಾಕಿಸ್ತಾನ ರಾಯಭಾರಿ ಅಬ್ದುಲ್ ಹಮೀದ್ ಅವರ ಸಮ್ಮುಖದಲ್ಲಿ ಉದ್ಘಾಟನೆಗೊಂಡ ಮಸೀದಿ, ಜಪಾನಿನ ಕಾನೂನಿನಡಿಯಲ್ಲಿ ಅಗತ್ಯವಿರುವ ಅನುಮತಿಗಳಿಲ್ಲದೆ ನಿರ್ಮಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ನಿರ್ಧರಿಸಿದ ನಂತರ ಈಗ ಆ ಮಸೀದಿಯನ್ನು ಕೆಡವುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

‘ಪ್ರಶ್ನಾರ್ಹ ಕಟ್ಟಡವನ್ನು ನಗರದ ಅನುಮತಿಯಿಲ್ಲದೆ ನಿರ್ಮಿಸಲಾಗಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ನಗರ ಸಭೆಯ ಅಧಿಕಾರಿಗಳು, ಈ ತಪ್ಪನ್ನು ಸರಿಪಡಿಸುವ ಕೆಲಸದಲ್ಲಿ ಅವರಿಗೆ ಮಾರ್ಗದರ್ಶನ ನೀಡಲು ಬಹಳ ಸಮಯ ಕಳೆದರು ಎಂದು ಅದು ಹೇಳಿದೆ. ಮಸೀದಿಯನ್ನು ಕೆಡವಲು ಸಂಬಂಧಪಟ್ಟವರಿಂದ ಅಧಿಕಾರಿಗಳಿಗೆ ಮನವಿಗಳು ಬಂದಿದ್ದು, ಪ್ರಸ್ತಾವನೆಯನ್ನು ಪರಿಶೀಲನೆಗೆ ಅಂಗೀಕರಿಸಲಾಗಿದೆ ಎಂದು ನಗರ ಸಭೆಯ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: DK Shivakumar: ಡಿಕೆ ಶಿವಕುಮಾರ್‌ಗೆ ಸಿಎಂ ಪಟ್ಟ ಒಲಿಯಲು ಅಸಲಿ ಕಾರಣ ಇದು! ‘ಟ್ರಬಲ್ ಶೂಟರ್’ ನಡೆದ ಕಠಿಣ ಹಾದಿಯ ಮೆಲುಕು

ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಪತ್ತೆಯಾದ ನಂತರ, ಟೋಕಿಯೊದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯು ಸಂದಿಗ್ದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜಪಾನಿನ ಕಾನೂನುಗಳನ್ನು ಉಲ್ಲಂಘಿಸುವ ಯೋಜನೆಗಳೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಎಚ್ಚರಿಕೆಯಿಂದ ಬರೆಯಲಾದ ಎರಡು ಹೇಳಿಕೆಗಳಲ್ಲಿ, ಪಾಕಿಸ್ತಾನ ರಾಯಭಾರ ಕಚೇರಿಯು ಪಾಕಿಸ್ತಾನಿ ಸಮುದಾಯದ ಸದಸ್ಯರು ಜಪಾನಿನ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು, ವಿಶೇಷವಾಗಿ ಪೂಜಾ ಸ್ಥಳಗಳನ್ನು ನಿರ್ಮಿಸುವಾಗ ಎಂದು ಒತ್ತಾಯಿಸಿದೆ.

‘ಜಪಾನ್‌ನಲ್ಲಿ ವಾಸಿಸುವ ಪಾಕಿಸ್ತಾನಿ ಸಮುದಾಯವು ಎಲ್ಲಾ ವಿಷಯಗಳಲ್ಲಿ, ವಿಶೇಷವಾಗಿ ಪೂಜಾ ಸ್ಥಳಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಪಾನಿನ ಕಾನೂನುಗಳನ್ನು ಸಂಪೂರ್ಣವಾಗಿ ಪಾಲಿಸಬೇಕೆಂದು ಪಾಕಿಸ್ತಾನದ ರಾಯಭಾರ ಕಚೇರಿಯು ಮನಃಪೂರ್ವಕವಾಗಿ ವಿನಂತಿಸುತ್ತದೆ ಮತ್ತು ಒತ್ತಿ ಹೇಳುತ್ತದೆ. ಸ್ಥಳೀಯ ಸರ್ಕಾರಗಳಿಂದ ಅಗತ್ಯ ಪರವಾನಗಿಗಳನ್ನು ಪಡೆಯದೆ ಯಾವುದೇ ನಿರ್ಮಾಣ ಯೋಜನೆಯನ್ನು ಪ್ರಾರಂಭಿಸಬಾರದು’ ಎಂದು ಪಾಕಿಸ್ತಾನದ ರಾಯಭಾರ ಕಚೇರಿ ಜೂನ್ 1 ರಂದು X ನಲ್ಲಿ ಪೋಸ್ಟ್ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed