Raj B Shetty: ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! | | ACTPnews

ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ!


Last Updated:

ರಾಜ್ ಬಿ ಶೆಟ್ರು ಹಿಂದಿ ಚಿತ್ರ ಮಾಡಿದ್ದಾರೆ. ಇವರ ಮಾತುಗಳಲ್ಲಿ ಎಲ್ಲೂ ತುಳು ಆ್ಯಕ್ಸಂಟ್ ಇಲ್ವೇ ಇಲ್ಲ. ಅಷ್ಟು ಸಖತ್ ಆಗಿಯೇ ಹಿಂದಿ ಮಾತನಾಡಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಲಿಜಾರ್ಡ್ ಮ್ಯಾನ್ ಅನ್ನೋ ಹೆಸರು ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ!
ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ!

ಬಾಲಿವುಡ್ ಅಲ್ಲೂ ರಾಜ್ ಬಿ ಶೆಟ್ರು (Raj B Shetty) ಕಮಾಲ್ ಮಾಡಿದ್ದಾರೆ. ಅನುರಾಗ್ ಕಶ್ಯಪ್ (Anurag Kashyap) ಅವರ ಚಿತ್ರದಲ್ಲಿ ನಟಿಸಿ ಎಲ್ಲ ದಿಲ್ ಕದ್ದು ಬಿಟ್ಟಿದ್ದಾರೆ. ಬಂದರ್ (Bandar) ಹೆಸರಿನ ಈ ಚಿತ್ರದಲ್ಲಿ ಲಿಜಾರ್ಡ್ ಅನ್ನುವ ಪಾತ್ರ ಮಾಡಿದ್ದಾರೆ. ಇದು ನಿಜಕ್ಕೂ ರಿಯಲಿಸ್ಟಿಕ್ ಆಗಿದೆ. ಎಲ್ಲೂ ಈ ಪಾತ್ರಕ್ಕೆ ಮೇಕ್‌ಅಪ್ ಟಚ್ ಕೂಡ ಇಲ್ಲ. ಅಷ್ಟು ರಿಯಲ್ ಆಗಿಯೇ ಇದೆ. ಈ ಒಂದು ಪಾತ್ರದ ಪಿಂಜರಾ ಹಾಡು ವೈರಲ್ ಆಗಿದೆ. ಈ ಹಾಡಿನ ಮುಂಚೆ ಬರುವ ಶೆಟ್ರ ಹಿಂದಿ ಮಾತುಗಳು ಇಂಟ್ರಸ್ಟಿಂಗ್ ಆಗಿವೆ. ಈ ಸಿನಿಮಾದ ರಾಜ್ ಬಿ ಶೆಟ್ರ (Raj B Shetty) ಪಾತ್ರದ ಸುತ್ತ ಇರೋ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಜ್ ಬಿ ಶೆಟ್ರು ಹಿಂದಿ ಡೈಲಾಗ್

ರಾಜ್ ಬಿ ಶೆಟ್ರು ಹಿಂದಿ ಯಾವಾಗ ಮಾತನಾಡಿದರೋ ಏನೋ? ಆದರೆ, ಬಾಲಿವುಡ್‌ನ ಈ ಬಂದರ್ ಚಿತ್ರದಲ್ಲಿ ಸಖತ್ ಹಿಂದಿ ಮಾತನಾಡಿದ್ದಾರೆ. ಎಲ್ಲೂ ದಕ್ಷಿಣದ ಆ್ಯಕ್ಸಂಟ್ ಬರೋದಿಲ್ಲ.
Raj B Shetty Hindi Bandar Movie Latest Updates

ಮೇ-5 ರಂದು ಚಿತ್ರ ರಿಲೀಸ್

(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್‌ಸ್ಟಾಗ್ರಾಮ್)

ಆ ರೀತಿನೇ ಮಾತನಾಡಿದ್ದಾರೆ. ಜೈಲಿನಲ್ಲಿ ಕೈದಿ ಆಗಿಯೇ ಕಾಣಿಸಿಕೊಳ್ಳುವ ಈ ಪಾತ್ರಕ್ಕೆ ಮೇಕ್‌ಅಪ್ ಕೂಡ ಇಲ್ಲ. ಟಚಪ್ ಕೂಡ ಇಲ್ಲ ಬಿಡಿ. ಆ ರೀತಿಯ ಪಾತ್ರವೇ ಇದಾಗಿದೆ.

ಲಿಜಾರ್ಡ್ ಮ್ಯಾನ್

ರಾಜ್ ಬಿ ಶೆಟ್ರ ಪಾತ್ರದ ಹೆಸರು ಇಲ್ಲಿ ವಿಚಿತ್ರವಾಗಿದೆ. ಲಿಜಾರ್ಡ್ ಮ್ಯಾನ್ ಅನ್ನೋದು ಈ ಪಾತ್ರದ ಹೆಸರು ನೋಡಿ. ಈ ಹೆಸರಿಗೂ ಶೆಟ್ರ ರೂಪಕ್ಕೂ ಸಖತ್ ಆಗಿಯೇ ಸೂಟ್ ಆಗಿದೆ.

ನಟ ಬಾಬಿ ಡಿಯೋಲ್ ಜೊತೆಗೂ ಮಾತುಗಳು ಇವೆ. ನನ್ನ ಏನು ಭಿಕ್ಷುಕ ಅಂದುಕೊಂಡಿದಿಯಾ ಅಂತಲೂ ಹೇಳುವ ಡೈಲಾಗ್ ಕೂಡ ಇಲ್ಲಿ ಬರುತ್ತದೆ. ಇಲ್ಲೊಂದು ಪಿಂಜರಾ ಅನ್ನೂ ಹಾಡು ಬರುತ್ತದೆ. ಇದಂತು ಸಖತ್ ಆಗಿಯೇ ಇದೆ.

ಪಿಂಜರಾ ಹಾಡು

ಪಿಂಜರಾ ಹಾಡಿನಲ್ಲಿ ಶೆಟ್ರು ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಎನರ್ಜಿಯಿಂದಲೇ ಕುಣಿದು ಖುಷಿಪಟ್ಟಿದ್ದಾರೆ. ಆದರೆ, ಎಲ್ಲೂ ಇದರ ಮೇಲೆ ಕರಾವಳಿಯ ಹುಲಿ ಡ್ಯಾನ್ಸ್ ಪ್ರಭಾವ ಇದೆ ಅಂತ ಅನಿಸೋದಿಲ್ಲ. ಆ ರೀತಿನೇ ರಾಜ್ ಬಿ ಶೆಟ್ರು ಇಲ್ಲಿ ಡ್ಯಾನ್ಸ್ ಮಾಡಿದ್ದಾರೆ.

Raj B Shetty Hindi Bandar Movie Latest Updates

ಇಲ್ಲಿ ಬಂದರ್ ಯಾರು?

(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್‌ಸ್ಟಾಗ್ರಾಮ್)

ಈ ಒಂದು ಹಾಡಿನಲ್ಲಿ ಪಿಂಜರಾ (ಪಂಜರ) ಅನ್ನುವ ಪದ ಇಟ್ಟುಕೊಂಡು ಬದುಕಿನ ಸಾಕಷ್ಟು ವಿಷಯ ಹೇಳಲಾಗಿದೆ. ಈ ಒಂದು ಗೀತೆಯಲ್ಲಿ ಬಾಬಿ ಡಿಯೋಲ್ ಪಾತ್ರದ ಚರಿತ್ರೆನೂ ಇದೆ ಅನಿಸುತ್ತದೆ. ಆ ರೀತಿಯನೇ ಈ ಹಾಡಿದೆ. ಆದರೆ, ಇಲ್ಲಿ ಹೈಲೈಟ್ ಅನಿಸೋದು ರಾಜ್ ಬಿ ಶೆಟ್ರ ಡ್ಯಾನ್ಸ್ ಅಂತಲೂ ಹೇಳಬಹುದು.

ಮೇ-5 ರಂದು ಚಿತ್ರ ರಿಲೀಸ್

ಮೇ-5 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರವೂ ಜೋರಾಗಿದೆ. ಈ ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ.

ಬಾಬಿ ಡಿಯೋಲ್ ಸುತ್ತವೆ ಇಡೀ ಕತೆ ಇದೆ. ಆದರೆ, ನಮ್ಮ ಜೀವನದಲ್ಲಿ ನಾವು ಯಾವಾಗ ಮಂಗ ಆಗ್ತೀವಿ ಅನ್ನೋದು ತಿಳಿಯೋದೇ ಇಲ್ಲ ಅನ್ನೋ ಅರ್ಥದ ಮಾತುಗಳು ಇದರಲ್ಲಿವೆ. ಈ ಚಿತ್ರ ಬಾಲಿವುಡ್ ಅಲ್ಲಿ ಏನೋ ಕಮಾಲ್ ಮಾಡುವ ಹಾಗೆ ಇದೆ.

ಹಾಗೆ ರಾಜ್ ಬಿ ಶೆಟ್ರಿಗೆ ಇದು ಮೊದಲ ಹಿಂದಿ ಚಿತ್ರವೇ ಆಗಿದೆ. ಇನ್ನುಳಿದಂತೆ ಬಂದರ್ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಹಾಗೂ ಟೀಸರ್ ಇಂಟ್ರಸ್ಟ್ ಕ್ರಿಯೇಟ್ ಮಾಡಿವೆ. ಹಾಗೆ ಈ ಚಿತ್ರದಲ್ಲಿ ಇರೋ ವಿಷಯವು ನೈಜ ಘಟನೆಗಳನ್ನೆ ಆಧರಿಸಿದೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed