Last Updated:
CBSE: ಕಳೆದ ಎರಡು ದಿನಗಳಿಂದ ಸಿಬಿಎಸ್‌ಇಯ ಮುಖ್ಯ ಸರ್ವರ್‌ಗಳಲ್ಲಿ ಎದುರಾಗಿರುವ ತಾಂತ್ರಿಕ ದೋಷಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿವೆ. ಸಾಮಾನ್ಯ ರಿಸಲ್ಟ್ ಲಿಂಕ್‌ಗಳು ಓಪನ್ ಆಗದ ಕಾರಣ ಹಲವರು ಗೊಂದಲಕ್ಕೊಳಗಾಗಿದ್ದು, ಇದೀಗ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮಂಡಳಿಯು ಪ್ರತ್ಯೇಕವಾದ ಐಟಿ ಸೆಕ್ಯೂರ್ಡ್ ಲಿಂಕ್ ಅನ್ನು ಸಕ್ರಿಯಗೊಳಿಸಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶ (Result) ಪ್ರಕಟವಾದ ಬೆನ್ನಲ್ಲೇ, ತಮ್ಮ ಅಂಕಗಳಿಂದ ತೃಪ್ತರಾಗದ ಲಕ್ಷಾಂತರ ವಿದ್ಯಾರ್ಥಿಗಳು (Students) ಮರುಮೌಲ್ಯಮಾಪನ (Revaluation) ಮತ್ತು ಉತ್ತರ ಪತ್ರಿಕೆಯ ನಕಲು (Photocopy) ಪಡೆಯಲು ಅರ್ಜಿ ಸಲ್ಲಿಸಲು ಮುಗಿಬಿದ್ದಿದ್ದಾರೆ. ಆದರೆ, ಕಳೆದ ಎರಡು ದಿನಗಳಿಂದ ಸಿಬಿಎಸ್‌ಇಯ ಮುಖ್ಯ ಸರ್ವರ್‌ಗಳಲ್ಲಿ ಎದುರಾಗಿರುವ ತಾಂತ್ರಿಕ ದೋಷಗಳು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿವೆ. ಸಾಮಾನ್ಯ ರಿಸಲ್ಟ್ ಲಿಂಕ್‌ಗಳು ಓಪನ್ ಆಗದ ಕಾರಣ ಹಲವರು ಗೊಂದಲಕ್ಕೊಳಗಾಗಿದ್ದು, ಇದೀಗ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಮಂಡಳಿಯು ಪ್ರತ್ಯೇಕವಾದ ಐಟಿ ಸೆಕ್ಯೂರ್ಡ್ ಲಿಂಕ್ ಅನ್ನು ಸಕ್ರಿಯಗೊಳಿಸಿದೆ.
ಮೇ 19 ರಿಂದ ಉತ್ತರ ಪತ್ರಿಕೆಗಳ ನಕಲು ಪಡೆಯುವ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆಯಾದರೂ, ಮುಖ್ಯ ವೆಬ್‌ಸೈಟ್ ಆದ results.cbse.nic.in ನಲ್ಲಿ ಲಾಗಿನ್ ವೈಫಲ್ಯ, ಒಟಿಪಿ ಬಾರದಿರುವುದು ಮತ್ತು ಕ್ಯಾಪ್ಚಾ ಲೋಡ್ ಆಗದಿರುವಂತಹ ಗಂಭೀರ ಸರ್ವರ್ ದೋಷಗಳು ಕಾಣಿಸಿಕೊಂಡಿವೆ. ಕೆಲವೆಡೆ ಪೇಮೆಂಟ್ ಗೇಟ್‌ವೇಗಳು ಸಹ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದು ಪೋಷಕರ ಆತಂಕವನ್ನು ಇಮ್ಮಡಿಗೊಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೆಬ್‌ಸೈಟ್ ಲಾಗ್ ಇನ್ ಆಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ತಾಂತ್ರಿಕ ತಂಡವು ಇದನ್ನು ಸರಿಪಡಿಸಲು ನಿರಂತರವಾಗಿ ಶ್ರಮಿಸುತ್ತಿದೆ.
ಸಾಮಾನ್ಯ ತಪ್ಪು ಲಿಂಕ್‌ಗಳ ಬದಲಾಗಿ, ಸಿಬಿಎಸ್‌ಇ ಮರುಮೌಲ್ಯಮಾಪನ ಮತ್ತು ಅಂಕಗಳ ಮರುಪರಿಶೀಲನೆಗೆ ನೇರವಾಗಿ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕೆಳಗಿನ ಅಧಿಕೃತ ಇಂಟರ್ನಲ್ ಐಟಿ ಲಿಂಕ್ ಅನ್ನು ಬಳಸಬಹುದಾಗಿದೆ:
ವಿದ್ಯಾರ್ಥಿಗಳು ಈ ಪೋರ್ಟಲ್ (https://www.cbse.gov.in/newsite_old/rchk2025.html) ತೆರೆದ ಬಳಿಕ ತಮ್ಮ ಪ್ರವೇಶ ಪತ್ರದಲ್ಲಿರುವ (Admit Card) ರೋಲ್ ನಂಬರ್, 5-ಅಂಕಿಯ ಶಾಲಾ ಕೋಡ್ ಮತ್ತು ಅಡ್ಮಿಟ್ ಕಾರ್ಡ್ ಐಡಿ ವಿವರಗಳನ್ನು ನಮೂದಿಸಿ ಸುಲಭವಾಗಿ ಲಾಗಿನ್ ಆಗಬಹುದು.
ವಿದ್ಯಾರ್ಥಿಗಳು ಮೊದಲು ತಮ್ಮ ಉತ್ತರ ಪತ್ರಿಕೆಯ ಡಿಜಿಟಲ್ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಅರ್ಜಿ ಸಲ್ಲಿಸಬೇಕು. ಇದಕ್ಕೆ ಅರ್ಜಿ ಸಲ್ಲಿಸಲು ಮೇ 22, 2026 ಕೊನೆಯ ದಿನಾಂಕವಾಗಿದೆ. ಈ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಉತ್ತರ ಪತ್ರಿಕೆ ದೊರೆತ ಬಳಿಕ, ಅಧಿಕೃತ ಆನ್ಸರ್ ಕೀ ಜೊತೆಗೆ ಪರಿಶೀಲಿಸಿ, ಅಂಕಗಳ ಎಣಿಕೆಯಲ್ಲಿ ತಪ್ಪುಗಳಿದ್ದಲ್ಲಿ ಮೇ 26 ರಿಂದ ಮೇ 29, 2026 ರೊಳಗೆ ಮರುಪರಿಶೀಲನೆಗೆ (Verification of Marks) ಕೋರಿಕೆ ಸಲ್ಲಿಸಬಹುದು.
ಈ ವರ್ಷ ಜಾರಿಗೆ ತರಲಾದ ಹೊಸ ಆನ್-ಸ್ಕ್ರೀನ್ ಮೌಲ್ಯಮಾಪನ (OSM) ವ್ಯವಸ್ಥೆಯಿಂದಾಗಿ ಅನೇಕ ವಿದ್ಯಾರ್ಥಿಗಳ ಅಂಕಗಳಲ್ಲಿ ಏರುಪೇರಾಗಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವಾಲಯದ ಸೂಚನೆಯ ಮೇರೆಗೆ ಸಿಬಿಎಸ್‌ಇ ದೊಡ್ಡ ನಿರ್ಧಾರ ಕೈಗೊಂಡಿದ್ದು, ಈ ಹಿಂದೆ ₹700 ಇದ್ದ ಉತ್ತರ ಪತ್ರಿಕೆಯ ನಕಲು ಪಡೆಯುವ ಶುಲ್ಕವನ್ನು ಈ ಬಾರಿ ಪ್ರತಿ ವಿಷಯಕ್ಕೆ ಕೇವಲ ₹100 ಕ್ಕೆ ಇಳಿಸಿದೆ. ಇದು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ದೊಡ್ಡ ಮಟ್ಟದ ಆರ್ಥಿಕ ಸಮಾಧಾನ ತಂದಿದೆ.
ವೆಬ್‌ಸೈಟ್‌ನಲ್ಲಿ ಟ್ರಾಫಿಕ್ ಹೆಚ್ಚಿರುವುದರಿಂದ ಲಿಂಕ್ ಓಪನ್ ಆಗದಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ಕಂಪ್ಯೂಟರ್ ಅಥವಾ ಬ್ರೌಸರ್ ಹಿಸ್ಟರಿಯನ್ನು ಕ್ಲಿಯರ್ ಮಾಡಿ (Restart/Refresh) ಅಥವಾ ತಡರಾತ್ರಿ ಹಾಗೂ ಮುಂಜಾನೆಯ ಅವಧಿಯಲ್ಲಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿದರೆ ಸುಲಭವಾಗಿ ಪ್ರಕ್ರಿಯೆ ಪೂರ್ಣಗೊಳಿಸಬಹುದು ಎಂದು ತಾಂತ್ರಿಕ ತಜ್ಞರು ಸಲಹೆ ನೀಡಿದ್ದಾರೆ. ಪರಿಷ್ಕೃತ ಫಲಿತಾಂಶಗಳು ಬಂದ ಬಳಿಕ ಅಪ್‌ಡೇಟ್ ಆದ ಡಿಜಿಟಲ್ ಮಾರ್ಕ್ಸ್‌ಶೀಟ್‌ಗಳು ಡಿಜಿಲಾಕರ್ (DigiLocker) ಆಪ್‌ನಲ್ಲಿ ಲಭ್ಯವಾಗಲಿದ್ದು, ಇವು ಕಾಲೇಜು ಪ್ರವೇಶಾತಿಗಳಿಗೆ ಸಂಪೂರ್ಣ ಸಿಂಧುವಾಗಿರುತ್ತವೆ ಎನ್ನುವುದನ್ನು ತಿಳಿಸಿದ್ದಾರೆ.
12th Revaluation: CBSE ರಿಸಲ್ಟ್ ರೀ ವ್ಯಾಲ್ಯೂಯೇಷನ್ ಗೊಂದಲ; ಸರ್ವರ್ ಬ್ಯುಸಿ ಬರ್ತಿದ್ಯಾ? ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಅಧಿಕೃತ ಪೋರ್ಟಲ್!













