IND vs AFG: ಜಡೇಜಾ ಬದಲಿಗೆ ಹೊಸ ಆಟಗಾರ ಸಿಕ್ಕೇ ಬಿಟ್ರಾ? ಭಾರತ ತಂಡಕ್ಕೆ ಸೇರ್ಪಡೆಯಾದ ಈ ದೇಶೀಯ ಕ್ರಿಕೆಟ್‌ನ ಯಂಗ್​ಸ್ಟಾರ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews

ಟೀಮ್ ಇಂಡಿಯಾ


Last Updated:

ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿರುವ ಈ ಒಬ್ಬ ಆಟಗಾರನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತದೆ. ಕಳೆದ ಕೆಲವು ವರ್ಷಗಳಿಂದ ಅವರು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಟೀಮ್ ಇಂಡಿಯಾ
ಟೀಮ್ ಇಂಡಿಯಾ

ಭಾರತ (India) ಟೆಸ್ಟ್ (Test) ತಂಡ (Team) ಪ್ರಸ್ತುತ ಪರಿವರ್ತನೆಯ ಮೂಲಕ ಸಾಗುತ್ತಿದೆ. ಅನುಭವಿ ಸ್ಪಿನ್ನರ್ (Spinner) ರವಿಚಂದ್ರನ್ ಅಶ್ವಿನ್ (Ravichandran Ashwin) ಕಳೆದ ಆಸ್ಟ್ರೇಲಿಯಾ (Australia) ಪ್ರವಾಸದ ಸಮಯದಲ್ಲಿ ನಿವೃತ್ತರಾದರು. ಇದಾದ ನಂತರ, ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಕೂಡ 2025 ರಲ್ಲಿ ಟೆಸ್ಟ್ ಕ್ರಿಕೆಟ್ (Cricket) ಸ್ವರೂಪದಿಂದ ನಿವೃತ್ತರಾದರು. ಈಗ, ಇನ್ನೂ ಕೆಲವು ಹಿರಿಯ ಆಟಗಾರರು ಮುಂದಿನ ದಿನಗಳಲ್ಲಿ ಟೆಸ್ಟ್ ಸ್ವರೂಪದಿಂದ ನಿವೃತ್ತ (Retired) ರಾಗಬಹುದು. ಆದಾಗ್ಯೂ, ಹಿರಿಯ ಆಟಗಾರರು (Players) ತಂಡವನ್ನು ತೊರೆಯುವ ಮೊದಲು, ಬಿಸಿಸಿಐ (BCCI) ಬದಲಿ ಆಟಗಾರರನ್ನು ಹುಡುಕಬೇಕಾಗಿದೆ. ಆಯ್ಕೆದಾರರು ಈಗಾಗಲೇ ಈ ಕೆಲಸವನ್ನು ಪ್ರಾರಂಭಿಸಿದ್ದಾರೆಂದು ತೋರುತ್ತಿದೆ.

ಜೂನ್ 6 ರಿಂದ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಈ ಟೆಸ್ಟ್ ತಂಡದಲ್ಲಿ ರವೀಂದ್ರ ಜಡೇಜಾ ಅವರನ್ನು ಸೇರಿಸಿಲ್ಲ. ಆಯ್ಕೆದಾರರು ಕೆಲವು ಹೊಸ ಆಟಗಾರರಿಗೆ ಸ್ಥಾನ ನೀಡಿದ್ದಾರೆ.

ಹೊಸ ಮುಖಗಳಿಗೆ ಮಣೆ

ಅಫ್ಘಾನಿಸ್ತಾನ ಸರಣಿಗೆ ಮಾನವ್ ಸುತಾರ್ ಮತ್ತು ಹರ್ಷ್ ದುಬೆ ಅವರಂತಹ ಕೆಲವು ಹೊಸ ಮುಖಗಳನ್ನು ಸೇರಿಸಿಕೊಂಡಿದ್ದಾರೆ. ಪ್ರಸ್ತುತ, ಎಲ್ಲರ ಗಮನ ಹರ್ಷ್ ದುಬೆಯ ಮೇಲಿದೆ. ಅವರನ್ನು ಜಡೇಜಾ ಅವರ ಬದಲಿ ಆಟಗಾರ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಯಾರು ಈ ಹರ್ಷ್ ದುಬೆ? ಅವರನ್ನು ಜಡೇಜಾ ಅವರ ಬದಲಿ ಆಟಗಾರ ಎಂದು ಏಕೆ ಕರೆಯಲಾಗುತ್ತಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ ಓದಿ.

ಹರ್ಷ್ ದುಬೆ ಅದ್ಭುತ ಪ್ರದರ್ಶನ

ದೇಶೀಯ ಕ್ರಿಕೆಟ್‌ನಲ್ಲಿ ವಿದರ್ಭ ಪರ ಆಡುವ ಯುವ ಆಟಗಾರ ಹರ್ಷ್ ದುಬೆ, 2024-25ರ ರಣಜಿ ಟ್ರೋಫಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ಈ ರಣಜಿ ಟ್ರೋಫಿ ಆವೃತ್ತಿಯಲ್ಲಿ ಅವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಕಳೆದ ರಣಜಿ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 69 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಹರ್ಷ್ ದುಬೆ ಹೊಸ ದಾಖಲೆ ನಿರ್ಮಿಸಿದರು.

ಜಡೇಜಾ ಬದಲಿ ಆಟಗಾರ?

ಹರ್ಷ್ ದುಬೆ ಅವರು ಒಬ್ಬ ಅದ್ಭುತ ಬೌಲರ್ ಆಗಿದ್ದು, ವಿದರ್ಭದ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಅವರ ಅದ್ಭುತ ಪ್ರದರ್ಶನವು ಆಯ್ಕೆದಾರರ ಗಮನ ಸೆಳೆದಿದ್ದು, ಅವರು ಈಗ ಟೀಮ್ ಇಂಡಿಯಾದಲ್ಲಿ ಸ್ಥಾನ ಗಳಿಸಿದ್ದಾರೆ. ರವೀಂದ್ರ ಜಡೇಜಾ ಅವರಂತೆ, ಅವರು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಕೊಡುಗೆ ನೀಡಬಲ್ಲರು. ಹೀಗಾಗಿ ಟೀಮ್ ಇಂಡಿಯಾದಲ್ಲಿ ಜಡೇಜಾ ಸ್ಥಾನವನ್ನು ಹರ್ಷ್ ದುಬೆ ತುಂಬುತ್ತಾರೆ ಎಂದು ಹೇಳಲಾಗುತ್ತಿದೆ.

ಪ್ರಥಮ ದರ್ಜೆ ಕ್ರಿಕೆಟ್‌ ರೆಕಾರ್ಡ್ಸ್

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹರ್ಷ್ ದುಬೆ ಅವರ ಅಂಕಿಅಂಶಗಳ ಬಗ್ಗೆ ನೋಡುವುದಾರೆ, ಅವರ ಪ್ರದರ್ಶನವು ಉತ್ತಮವಾಗಿದೆ. ಹರ್ಷ್ ಇದುವರೆಗೆ 27 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 49 ಇನ್ನಿಂಗ್ಸ್‌ಗಳಲ್ಲಿ 133 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 23.26 ಮತ್ತು ಅವರ ಆರ್ಥಿಕ ದರ 3.05 ಆಗಿದೆ. ಅವರು ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಹರ್ಷ್ ದುಬೆ 44 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ 25.65 ರ ಸರಾಸರಿಯಲ್ಲಿ 1026 ರನ್‌ಗಳನ್ನು ಗಳಿಸಿದ್ದಾರೆ. ಈ ವೇಳೆ 9 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಾಗ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs AFG: ಜಡೇಜಾ ಬದಲಿಗೆ ಹೊಸ ಆಟಗಾರ ಸಿಕ್ಕೇ ಬಿಟ್ರಾ? ಭಾರತ ತಂಡಕ್ಕೆ ಸೇರ್ಪಡೆಯಾದ ಈ ದೇಶೀಯ ಕ್ರಿಕೆಟ್‌ನ ಯಂಗ್​ಸ್ಟಾರ್ ಯಾರು ಗೊತ್ತಾ?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed