Abhijeet Dipke Video: ಸಾವಿನ ಸುದ್ದಿ ತಿಳಿದ್ರೂ ಅಜ್ಜಿಯ ಅಂತ್ಯಸಂಸ್ಕಾರಕ್ಕೆ ತೆರಳದ ಅಭಿಜಿತ್ ದೀಪ್ಕೆ! ದೆಹಲಿ ಪೊಲೀಸರಿಂದ ವಿಡಿಯೋ ರಿಲೀಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ)


Last Updated:

Abhijeet Dipke Video: ದೆಹಲಿಯಲ್ಲಿ ಬಂಧನದಲ್ಲಿದ್ದಾಗ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿಯ ಸಾವಿನ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸರು ಭಾನುವಾರ ಬಿಡುಗಡೆ ಮಾಡಿದ್ದಾರೆ.

ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ)
ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ)

ದೆಹಲಿ: ಸಿಜೆಪಿ (CJP) ಮುಖ್ಯಸ್ಥ ಅಭಿಜಿತ್ ದೀಪ್ಕೆ (Abhijeet Dipke) ರಿಲೀಸ್ ಆಗಿದ್ದಾರೆ. ನಿನ್ನೆ ಸಿಜೆಪಿ ನೇತೃತ್ವದಲ್ಲಿ ದೆಹಲಿಯಲ್ಲಿ (Delhi Protest) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಭಿಜಿತ್ ದೀಪ್ಕೆ ಭಾಗಿಯಾಗಲು ತೆರಳುತ್ತಿದ್ದರು. ಆದರೆ ದೆಹಲಿಗೆ ವಿಮಾನದಲ್ಲಿ ಬಂದಿಳಿಯುತ್ತಿದ್ದಂತೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು, ಇಂದು ಕೋರ್ಟ್‌ಗೆ ಹಾಜರುಪಡಿಸಿ, ಬಳಿಕ ರಿಲೀಸ್ ಮಾಡಿದ್ದಾರೆ. ಅತ್ತ ಅಭಿಜಿತ್ ದೀಪ್ಕೆ ಅಜ್ಜಿ ಸಾವಿತ್ರಿಬಾಯಿ ದೀಪ್ಕೆ (Savitribai Dipke) ನಿಧನರಾಗಿದ್ದಾರೆ. ಅಜ್ಜಿಯ ನಿಧನದ ಸುದ್ದಿಯನ್ನೇ ಅಭಿಜಿತ್ ದೀಪ್ಕೆಗೆ ತಿಳಿಸಿಲ್ಲ ಅಂತ ಅವರ ತಾಯಿ ಆರೋಪಿಸಿದ್ದರು. ಆದರೆ ಅಭಿಜಿತ್ ದೀಪ್ಕೆ ತಾಯಿ ಆರೋಪ ಸುಳ್ಳು ಎಂದಿರುವ ದೆಹಲಿ ಪೊಲೀಸರು, ಅದಕ್ಕೆ ಸಂಬಂಧಿಸಿದ ವಿಡಿಯೋ ರಿಲೀಸ್ ಮಾಡಿದ್ದಾರೆ.

ಅಭಿಜಿತ್ ದೀಪ್ಕೆ ವಿಡಿಯೋ ರಿಲೀಸ್

ದೆಹಲಿಯಲ್ಲಿ ಬಂಧನದಲ್ಲಿದ್ದಾಗ ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಅಜ್ಜಿಯ ಸಾವಿನ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುತ್ತಿರುವ ವಿಡಿಯೋವನ್ನು ದೆಹಲಿ ಪೊಲೀಸರು ಭಾನುವಾರ ಬಿಡುಗಡೆ ಮಾಡಿದ್ದಾರೆ. ಅಭಿಜಿತ್ ದೀಪ್ಕೆ ಅವರಿಗೆ ಅವರ ಅಜ್ಜಿ ಸಾವಿತ್ರಿಬಾಯಿ ದೀಪ್ಕೆ ಸಾವು ಮತ್ತು ಅಂತ್ಯಕ್ರಿಯೆಯ ಸಮಯದ ಬಗ್ಗೆ ತಿಳಿಸಲಾಗಿದ್ದು, ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಹಾರಾಷ್ಟ್ರದಲ್ಲಿರುವ ಅವರ ಊರಿಗೆ ಪ್ರಯಾಣಿಸಲು ಸಹಾಯ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಜ್ಜಿ ಸಾವಿನ ವಿಚಾರ ತಿಳಿಸಿದ ಪೊಲೀಸರು

ನೀವು ಅಜ್ಜಿ ಅಂತ್ಯಕ್ರಿಯೆಗೆ ಹೋಗುತ್ತೀರಿ ಅಂತ ನಿರ್ಧಾರ ಮಾಡಿದ್ರೆ ವಿಮಾನ, ಬಸ್ ಅಥವಾ ರೈಲು ವ್ಯವಸ್ಥೆ ಮಾಡಿಕೊಡುತ್ತೇವೆ. ಮನೆಯವರೊಂದಿಗೆ ಫೋನ್‌ನಲ್ಲಿ ಮಾತನಾಡೋದಿದ್ದರೆ ಅದಕ್ಕೂ ವ್ಯವಸ್ಥೆ ಮಾಡುತ್ತೇವೆ ಅಂತ ದೆಹಲಿ ಪೊಲೀಸ್ ಅಧಿಕಾರಿಗಳು ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಪೊಲೀಸರ ಸಹಾಯ ನಿರಾಕರಿಸಿದ ಅಭಿಜಿತ್ ದೀಪ್ಕೆ

ಈ ವಿಡಿಯೋ ಬಿಡುಗಡೆ ಮಾಡಿರುವ ಪೊಲೀಸ್ ಅಧಿಕಾರಿ ನೇಹಾ ಯಾದವ್, ಪೊಲೀಸ್ ಅಧಿಕಾರಿಗಳು ದೀಪ್ಕೆ ಅಜ್ಜಿಯ ಸಾವಿನ ಬಗ್ಗೆ ಮಾಹಿತಿ ಪಡೆದ ಕೂಡಲೇ  ಅವರನ್ನು ಸಂಪರ್ಕಿಸಿ, ಅವರ ಹೆತ್ತವರೊಂದಿಗೆ ಮಾತನಾಡಲು ಬಯಸುತ್ತೀರಾ ಎಂದು ಪದೇ ಪದೇ ಕೇಳಿದರು. ಪೊಲೀಸರು ನೀಡಿದ ಸಹಾಯವನ್ನು ಅವರು ನಿರಾಕರಿಸಿದರು ಎಂದು ಅವರು ಹೇಳಿದ್ದಾರೆ.

ನಾನು ಇಲ್ಲೇ ಇರುತ್ತೇನೆ ಎಂದ ದೀಪ್ಕೆ

ಬಾಟಲಿಯಲ್ಲಿ ನೀರು ಕೊಟ್ಟು ಪೊಲೀಸ್ ಅಧಿಕಾರಿಗಳು ಅಭಿಜಿತ್ ದೀಪ್ಕೆ ಅವರನ್ನು ಸಂತೈಸಿದ್ದಾರೆ. ಪೊಲೀಸರು ದೀಪ್ಕೆಗೆ ಅವರ ಅಜ್ಜಿಯ ನಿಧನದ ಬಗ್ಗೆ ತಿಳಿಸಿ, ಹೋಗಲು ಅವಕಾಶ ನೀಡಿದಾಗ, ಅವರು “ನಾನು ಇಲ್ಲೇ ಇರುತ್ತೇನೆ” ಎಂದು ಹೇಳಿದ್ದಾರೆ.

ಪೊಲೀಸರ ವಿರುದ್ಧ ಆರೋಪಿಸಿದ್ದ ಅನಿತಾ ದೀಪ್ಕೆ

ದೀಪ್ಕೆ ಅವರ ತಾಯಿ ಅನಿತಾ ದೀಪ್ಕೆ ಅವರು ತಮ್ಮ ಮಗನಿಗೆ ಅಜ್ಜಿ ಸಾವಿನ ಬಗ್ಗೆ ತಿಳಿಸಲಾಗಿದೆಯೇ ಎಂಬ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ದೀಪ್ಕೆ ಕುಟುಂಬವು ಆತನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ ಮತ್ತು ಅವನು ಹಿಂತಿರುಗುವವರೆಗೆ ಅಂತ್ಯಕ್ರಿಯೆ ನಡೆಸೋದಿಲ್ಲ ಅಂತ ಅನಿತಾ ಹೇಳಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಪೊಲೀಸರು ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಅಭಿಜಿತ್ ದೀಪ್ಕೆ ಅವರ ಅಜ್ಜಿಯ ಸಾವಿನ ಬಗ್ಗೆ ಮತ್ತು ನಿಗದಿತ ಅಂತ್ಯಕ್ರಿಯೆಯ ಬಗ್ಗೆ ತಿಳಿಸಲಾಗಿತ್ತು ಎಂದು ಪೊಲೀಸರು ವಾದಿಸಿದ್ದಾರೆ. ಮಾನವೀಯ ಆಧಾರದ ಮೇಲೆ ಅವರಿಗೆ ಮನೆಗೆ ಪ್ರಯಾಣಿಸಲು ಸಹಾಯವನ್ನು ಸಹ ನೀಡಲಾಯಿತು ಎಂದು ಹೇಳಿದ್ದಾರೆ.

ನಿನ್ನೆ ನಿಧನರಾಗಿದ್ದ ಸಾವಿತ್ರಿಬಾಯಿ ದೀಪ್ಕೆ

ದೀಪ್ಕೆ ಅವರ ಅಜ್ಜಿ, 85 ವರ್ಷದ ಸಾವಿತ್ರಿಬಾಯಿ ಶಂಕರರಾವ್ ದೀಪ್ಕೆ, ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಬೆಳಿಗ್ಗೆ 11.30 ರ ಸುಮಾರಿಗೆ ನಿಧನರಾದರು. ಅವರು ವಯೋಸಹಜ ಆರೋಗ್ಯ ಸಮಸ್ಯೆಗಳು ಮತ್ತು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಅವರ ಅಂತ್ಯಕ್ರಿಯೆಯನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಿಗದಿಪಡಿಸಲಾಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed