IND vs WIN: 249 ರನ್ ಗಳಿಸಿದ್ರೂ ಮುಗ್ಗರಿಸಿದ ಟೀಂ ಇಂಡಿಯಾ! ವಿಂಡೀಸ್ ವಿರುದ್ಧದ ಸೋಲಿಗೆ ಇದೇ ಕಾರಣ! | | ACTPnews

Image: ANI


Last Updated:

ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳ ಆರ್ಭಟಕ್ಕೆ ಟೀಂ ಇಂಡಿಯಾ ಬೌಲರ್ಗಳು ತತ್ತರಿಸಿ ಹೋಗಿದ್ದಾರೆ.

Image: ANI
Image: ANI

ರಾಂಚಿ ಕ್ರೀಡಾಂಗಣದಲ್ಲಿ ರನ್​​ ಮಳೆ ಹರಿದಿದೆ. ವೆಸ್ಟ್​ ಇಂಡೀಸ್​ ತಂಡ ಭಾರತದ ವಿರುದ್ಧ ಐತಿಹಾಸಿಕ ಜಯ ಸಾಧಿಸಿದೆ. ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies) 6 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಅಬ್ಬರಿಸಿದೆ. ಕೆರೆಬಿಯನ್​ ಕಲಿಗಳ ಆರ್ಭಟಕ್ಕೆ ಶ್ರೇಯಸ್​ ಅಯ್ಯರ್​ (Shreyas Iyer) ಪಡೆ ತತ್ತರಿಸಿ ಹೋಗಿದೆ. 250 ರನ್​ಗಳ ಬೃಹತ್​ ಟಾರ್ಗೆಟ್​ ಅನ್ನು ಬೆನ್ನಟ್ಟಿ ಟೀಂ ಇಂಡಿಯಾಗೆ ಶಾಕ್​ ಕೊಟ್ಟಿದ್ದಾರೆ.

ಭಾರತದ ಬೃಹತ್ ಮೊತ್ತ ವ್ಯರ್ಥ

ರಾಂಚಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಮತ್ತು ನಮನ್ ಧೀರ್ ಸೇರಿದಂತೆ ಎಲ್ಲಾ ಸ್ಪಿನ್ ಬೌಲರ್‌ಗಳು ದುಬಾರಿಯಾದರು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 249 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಹಲವು ರಣತಂತ್ರಗಳನ್ನು ರೂಪಿಸಿದರೂ, ಆದ್ರೆ, ಶಾಯ್ ಹೋಪ್ ಅವರ ಬ್ಯಾಟಿಂಗ್​​ ಎಲ್ಲ ಪ್ಲಾನ್​ಗಳನ್ನು ತಲೆ ಕೆಳಗಾಗುವಂತೆ ಮಾಡಿದೆ.

ವೆಸ್ಟ್ ಇಂಡೀಸ್‌ನ ಸಾರ್ವಕಾಲಿಕ ಗರಿಷ್ಠ ರನ್ ಚೇಸ್

17ನೇ ಓವರ್‌ನಲ್ಲಿ ಕುಲ್ದೀಪ್ ಯಾದವ್ ಸತತ 3 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಾಗ ಕೋಚ್ ಗಂಭೀರ್ ಆತಂಕಗೊಂಡು ಕೈಗಳನ್ನು ಅಲ್ಲಾಡಿಸಿ ನಿರಾಶೆ ವ್ಯಕ್ತಪಡಿಸಿದರು. ಶಾಯ್ ಹೋಪ್ ಕೇವಲ 45 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದರು. ಅವರ ಅದ್ಭುತ ಆಟದಿಂದಾಗಿ ವೆಸ್ಟ್ ಇಂಡೀಸ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಸಾರ್ವಕಾಲಿಕ ಅತಿ ದೊಡ್ಡ ರನ್ ಚೇಸ್ ಅನ್ನು ಯಶಸ್ವಿಯಾಗಿ ಪೂರೈಸಿದೆ.
ಪ್ರಮುಖ ಪಾತ್ರ ವಹಿಸಿದ ಡ್ಯೂ ಫ್ಯಾಕ್ಟರ್

ಶಾಯ್ ಹೋಪ್ ಹೊರತಾಗಿ ಶೆರ್ಫಾನ್ ರುದರ್‌ಫೋರ್ಡ್ ಕೂಡ 37 ಎಸೆತಗಳಲ್ಲಿ 84 ರನ್ ಸಿಡಿಸಿ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ (ಡ್ಯೂ ಫ್ಯಾಕ್ಟರ್) ಪ್ರಮುಖ ಪಾತ್ರ ವಹಿಸಿತು. ಬೌಲಿಂಗ್ ಮಾಡಲು ಕಷ್ಟವಾದ ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್, ತನ್ನ ಅನುಭವವನ್ನು ಬಳಸಿ ದಾಖಲೆಯ ಜಯ ದಾಖಲಿಸಿತು. ಅಲ್ಲದೇ ಟೀಂ ಇಂಡಿಯಾ ಆಟಗಾರರು ಕ್ಯಾಚ್​ಗಳನ್ನು ಬಿಟ್ಟು ಜೀವದಾನ ನೀಡಿದ್ರು. ಈ ಸೋಲು ಭಾರತೀಯ ತಂಡದ ಬೌಲಿಂಗ್ ತಂತ್ರಗಾರಿಕೆಯ ಬಗ್ಗೆ ಗಂಭೀರ ಚಿಂತೆ ಮೂಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed