Last Updated:
ಲೂಸ್ ಮಾದ ಯೋಗಿ ಸದ್ಯ ಬೇಲ್ ಚಿತ್ರದ ಯೋಗಿ ರೆಡ್ಡಿ ಪಾತ್ರದ ಮೂಲಕ ಫ್ಯಾನ್ಸ್ ದಿಲ್ ಕದ್ದಿದ್ದಾರೆ. ಜನರ ಪ್ರೀತಿನೂ ಪಡೆದಿದ್ದಾರೆ. ಇದರ ನಡುವೆ ಇವರ ಫಾರೆವರ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಅದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ..
ಲೂಸ್ ಮಾದ ಯೋಗಿ (Loose Mada Yogi) ಸದ್ಯ ಬೇಲ್ ಚಿತ್ರದ (Bail Movie) ಯೋಗಿ ರೆಡ್ಡಿ ಪಾತ್ರದ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಒಂದು ಪಾತ್ರದಲ್ಲಿ ಯೋಗಿ (Yogi) ಸಖತ್ ಆಗಿಯೇ ಅಬ್ಬರಿಸಿದ್ದಾರೆ. ಈ ವಿಲನ್ ಪಾತ್ರದಲ್ಲಿಯೇ ಮಿಂಚಿದ್ದಾರೆ. ಚಿತ್ರ ನೋಡಿದವರು ಯೋಗಿ ಅಭಿನಯವನ್ನು ಕೊಂಡಾಡಿದ್ದಾರೆ. ಆದರೆ, ಇದೀಗ ಹೊಸ ವಿಷಯ ಏನಂದ್ರೆ, ಯೋಗಿ ಅಭಿನಯದ ಫಾರೆವರ್ ಸಿನಿಮಾದ (Forever Movie) ಎರಡು ಹಂತದ ಚಿತ್ರೀಕರಣ ಆಗಿದೆ. ಈ ಎರಡು ಹಂತದಲ್ಲಿ ಏನೆಲ್ಲ ಆಗಿದೆ ಅನ್ನೋದು ಗೊತ್ತಾಗಿದೆ. ಅದರ ವಿವರ ಇಲ್ಲಿದೆ ಓದಿ.
ಯೋಗಿ 51 ನೇ ಸಿನಿಮಾ
(ಚಿತ್ರ ಕೃಪೆ: ಫಾರೆವರ್ ಸಿನಿಮಾ ಟೀಮ್)
ಈ ಫಸ್ಟ್ ಪೋಸ್ಟರ್ ಅದ್ಧೂರಿ ಆಗಿಯೆ ಹೊರ ಬಂದಿದೆ. ಇದರ ಬೆನ್ನಲ್ಲಿಯೇ ಸಿನಿಮಾದ ಶೂಟಿಂಗ್ ಭರದಿಂದಲೇ ಸಾಗಿದೆ. ಇದನ್ನ ವಿಸ್ತರವಾಗಿ ಹೇಳೋದಾದರೆ, ಈ ಚಿತ್ರದ ಎರಡು ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಈ ಎರಡು ಹಂತದಲ್ಲಿ ಮಾತಿನ ಭಾಗದ ಚಿತ್ರೀಕರಣ ಆಗಿದೆ. ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ನಿರ್ದೇಶನದಲ್ಲಿ ಒಂದು ಹಾಡು ಕೂಡ ಶೂಟ್ ಆಗಿದೆ.
ಈ ಚಿತ್ರದಲ್ಲಿ ಮಸ್ತ್ ಆದ ಆ್ಯಕ್ಷನ್ ಇವೆ. ರವಿ ವರ್ಮಾ ಆ ರೀತಿಯ ಆ್ಯಕ್ಷನ್‌ಗಳನ್ನೆ ಕಂಪೊಸ್ ಮಾಡ್ತಾರೆ. ಬಾಲಿವುಡ್ ಅಲ್ಲೂ ಇವರ ಒಳ್ಳೆ ಹೆಸರು ಮಾಡಿದ್ದಾರೆ.
ಈ ಚಿತ್ರದಲ್ಲಿ ಯೋಗಿಗೆ ಆಕಾಂಕ್ಷ ರಾವ್ ಜೋಡಿ ಆಗಿದ್ದಾರೆ. ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಗೌರವ್ ಶೆಟ್ಟಿ, ವಿಜಯ್ ಚೆಂಡೂರ್, ಕಡ್ಡಿಪುಡಿ ಚಂದ್ರು, ಅನಂತ್, ಅಶ್ವಿನ್ ಪಲ್ಲಕ್ಕಿ, ಮಾಲಾ ಅಭಿನಯಿಸಿದ್ದಾರೆ.
ಫಾರೆವರ್ ಸಿನಿಮಾ
(ಚಿತ್ರ ಕೃಪೆ: ಫಾರೆವರ್ ಸಿನಿಮಾ ಟೀಮ್)
ಈ ಚಿತ್ರದಲ್ಲಿ ಲವ್ ಹಾಗೂ ಸೆಂಟಿಮೆಂಟ್ ಇದೆ. ಈಗಾಗಲೇ ಹೇಳಿದಂತೆ ಆ್ಯಕ್ಷನ್ ಕೂಡ ಇವೆ. ಹೀಗೆ ಪ್ರೇಕ್ಷಕರಿಗೆ ಏನು ಬೇಕೋ ಅದನ್ನ ಈ ಚಿತ್ರದಲ್ಲಿ ನೋಡಬಹುದಾಗಿದೆ. ಯೋಗೇಶ್ ಎಂ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಮೊದಲು ಇವರು ಚಂದ್ರಿಕಾ ಅನ್ನುವ ಚಿತ್ರ ಮಾಡಿದ್ದರು. ಹಾಗೆ ಈಗ ಈ ಫಾರೆವರ್ ಸಿನಿಮಾ ಮಾಡುತ್ತಿದ್ದಾರೆ.
ಲೂಸ್ ಮಾದ ಯೋಗಿ ಚಿತ್ರ ಜೀವನದ 51 ನೇ ಚಿತ್ರ ಇದಾಗಿದೆ. ಎರಡು ಹಂತದ ಶೂಟಿಂಗ್ ಆಗಿದೆ. ಮೂರನೇ ಹಂತದ ಶೂಟಿಂಗ್ ಸದ್ಯದಲ್ಲಿ ಶುರು ಆಗುತ್ತಿದೆ. ಈ ಚಿತ್ರದ ಡೈರೆಕ್ಟರ್ ಯೋಗೇಶ್ ಎಂ ಅವರೆ ಇದಕ್ಕೆ ಕತೆ ಮತ್ತು ಚಿತ್ರಕತೆ ಬರೆದಿದ್ದಾರೆ. ಸಂಭಾಷಣೆಯನ್ನ ರಘು ನಿಡುವಳ್ಳಿ ಬರೆದಿದ್ದಾರೆ. ಪ್ರದ್ಯೂತನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಸಂಕೇತ್ ಛಾಯಾಗ್ರಹಣ ಇದೆ ಅಂತ ಹೇಳಬಹುದು.














