Last Updated:
Sridevi Byrappa: ದಿಢೀರ್ ಆಗಿ ಡಿಯರ್ ಹಸ್ಬೆಂಡ್ ಎಂದಿದ್ದೇಕೆ ಶ್ರೀದೇವಿ ಭೈರಪ್ಪ? ಯುವ ರಾಜ್ಕುಮಾರ್ ಪತ್ನಿಯ ರೀಲ್ಸ್ನಲ್ಲಿ ಏನಿದೆ? ಹಾಗಿದ್ದರೆ ಅವರ ಪೋಸ್ಟ್ನಲ್ಲಿ ಏನಿದೆ? ಶ್ರೀದೇವಿ ಭೈರಪ್ಪ ಹೇಳಿದ್ದೇನು? ಯಾರಿಗೆ? ಇಲ್ಲಿ ಓದಿ.
ಸ್ಯಾಂಡಲ್ವುಡ್ನಲ್ಲಿ (Sandalwood) ಅಣ್ಣಾವ್ರ ಮನೆತನದಲ್ಲಿ ಸುದ್ದಿ ಮಾಡಸಿದ್ದ ಯುವ ರಾಜ್ಕುಮಾರ್ (Yuva Rajkumar) ಅವರ ಡಿವೋರ್ಸ್ (Divorce) ವಿವಾದ ಭಾರೀ ಸುದ್ದಿಯಾಗಿತ್ತು. ಅವರ ಪತ್ನಿ ಗಂಡ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದರೆ ಯುವ ಅವರ ಕೆಲವೊಂದು ಆಡಿಯೋ, ಫೋಟೋಗಳು, ವಿಡಿಯೋಗಳು ವೈರಲ್ ಆಗಿದ್ದವು. ಸದ್ಯ ವಿದೇಶದಲ್ಲಿರುವ ಶ್ರೀದೇವಿ ಭೈರಪ್ಪ (Sridevi Byrappa) ಅವರು ಅಲ್ಲಿಂದಲೇ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಆಗಾಗ ಅವರು ಮದುವೆ, ಮೋಸ, ಸಂಬಂಧ, ಪ್ರೀತಿಗೆ ಸಂಬಂಧಿಸಿ ಪೋಸ್ಟ್ಗಳನ್ನು ಕೂಡಾ ಮಾಡುತ್ತಿರುತ್ತಾರೆ. ಇತ್ತೀಚೆಗೆ ಶ್ರೀದೇವಿ ಭೈರಪ್ಪ ಹಾಕಿರುವ ಪೋಸ್ಟ್ ಕುತೂಹಲ ಮೂಡಿಸಿದೆ. ಅದರಲ್ಲಿ ಅವರು ಕ್ಯಾಪ್ಶನ್ನಲ್ಲಿ ಬರೆದಿರುವ ಸಾಲುಗಳು ಅಭಿಮಾನಿಗಳನ್ನು ಯೋಚಿಸುವಂತೆ ಮಾಡಿದೆ.
ಅಷ್ಟೇ ಅಲ್ಲದೆ ಕಮೆಂಟ್ ಸೆಕ್ಷನ್ನಲ್ಲಿ ತಮ್ಮ ಬೆಂಬಲಕ್ಕೆ ನಿಂತವರಿಗೂ ಶ್ರೀದೇವಿ ಬೈರಪ್ಪ ಪ್ರತಿಕ್ರಿತಿಸಿದ್ದಾರೆ. ಹಾಗಿದ್ದರೆ ಅವರ ಪೋಸ್ಟ್ನಲ್ಲಿ ಏನಿದೆ? ಶ್ರೀದೇವಿ ಭೈರಪ್ಪ ಹೇಳಿದ್ದೇನು? ಯಾರಿಗೆ? ಇಲ್ಲಿ ಓದಿ.
ಅವನ ಫೋನ್ನಲ್ಲಿ ನನ್ನ ಇಂಥಹ 10 ಸಾವಿರ ಫೋಟೋಗಳಿದ್ದವು. ಅದನ್ನು ನೋಡಿ ನಾನೇ ಸ್ಪೆಷಲ್ ಎಂದುಕೊಂಡಿದ್ದೆ. ಆದರೆ ಒಂದು ದಿನ ಅದೇ ರೀತಿ ಬೇರೆ ಹುಡುಗಿಯ ಫೋಟೋ ನೋಡಿದಾಗ ಗೊತ್ತಾಯಿತು. ನಾನು ಆಕೆಗೆ ಒಂದು ವಿಷಯ ಹೇಳಬೇಕು, ನೀನು ಯೇನೂ ಸ್ಪೆಷಲ್ ಅಲ್ಲ, ಆ ಫೋಟೋಗಳ ಮೇಲೆ ಎಷ್ಟು ದೃಷ್ಟಿಬೊಟ್ಟಿಟ್ಟರೂ (ಎವಿಲ್ ಐ ಎಮೋಜಿ) ಹಾಕಿದರೂ ಪ್ರಯೋಜನ ಇಲ್ಲ. ಅಷ್ಟೆ ಎಂದು ನಗುವ ಹಾಗೂ ಕೈಮುಗಿದ ಎಮೋಜಿಯನ್ನು ಹಾಕಿದ್ದಾರೆ.
ಫೋಟೋ ಕ್ರೆಡಿಟ್ನಲ್ಲಿ ಡಿಯರ್ ಹಸ್ಬೆಂಡ್ ಎಂದು ಬರೆದಿದ್ದು ಶ್ರೀದೇವಿ ಅವರು ರೀಲ್ಸ್ಗೆ ಬಳಸಿದ ಅಷ್ಟೂ ಫೋಟೋಗಳು ಯುವ ರಾಜ್ಕುಮಾರ್ ಕ್ಲಿಕ್ಕಿಸಿದ್ದು ಎನ್ನುವ ಹಿಂಟ್ ಕೂಡಾ ಕೊಟ್ಟಿದ್ದಾರೆ.
ಅಪ್ಪು ಸರ್ ಇದ್ದಿದ್ದರೆ ನಿಮ್ಮ ಜೊತೆ ನಿಲ್ಲುತ್ತಿದ್ದರು ಅಲ್ವಾ ಎಂದು Iamaishu ಎನ್ನುವವರು ಕಮೆಂಟ್ ಮಾಡಿದ್ದು, 100000% ಎಂದು ಅದಕ್ಕೆ ಶ್ರೀದೇವಿ ಪ್ರತಿಕ್ರಿಯಿಸಿ ರೆಡ್ ಹಾರ್ಟ್ ಎಮೋಜಿ ಹಾಕಿದ್ದಾರೆ.
ಬಹಳಷ್ಟು ಜನರು ಕಮೆಂಟ್ ಸೆಕ್ಷನ್ನಲ್ಲಿ ಶ್ರೀದೇವಿ ಭೈರಪ್ಪ ಅವರನ್ನು ಬೆಂಬಲಿಸಿದ್ದಾರೆ. ಆದರೆ ಸದ್ಯ ನಟಿ ನೀನೇನು ಸ್ಪೆಷಲ್ ಅಲ್ಲ ಅಂತ ಹೇಳಿದ್ದು ಯಾರಿಗೆ ಎನ್ನುವುದು ಅರ್ಥವಾಗಿಲ್ಲ.














